ಸೋನಿಯಾ ಮಾತೃಹೃದಯಿ ಎಂದ ಸಿದ್ದರಾಮಯ್ಯಗೆ ಟ್ವಿಟ್ಟಿಗರು ಏನಂದ್ರು ಗೊತ್ತಾ?
Recommended Video

ಎಐಸಿಸಿ ಅಧಿನಾಯಕಿ, ಯುಪಿಎ ಮೈತ್ರಿಕೂಟದ ಮುಖ್ಯಸ್ಥೆ ಸೋನಿಯಾ ಗಾಂಧಿ, ಭಾನುವಾರ (ಡಿ 9) ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪ್ರಧಾನಿ ಮೋದಿ ಸೇರಿದಂತೆ, ಗಣ್ಯರು ಸೋನಿಯಾಗೆ ಶುಭ ಕೋರಿದರು.
ಕರ್ನಾಟಕ ಕಾಂಗ್ರೆಸ್ ಘಟಕದ ಪ್ರಮುಖರು ಕೂಡಾ ಸೋನಿಯಾ ಗಾಂಧಿಗೆ ಶುಭಾಶಯವನ್ನು ಕೋರುವ ಟ್ವೀಟ್ ಸಂದೇಶವನ್ನು ಹಾಕಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ, ಸೋನಿಯಾಜೀಗೆ ಕನ್ನಡದಲ್ಲಿ ಶುಭ ಕೋರಿದ್ದರು.
ಸೋನಿಯಾಗೆ ಹುಟ್ಟುಹಬ್ಬಕ್ಕೆ ಶುಭ ಕೋರುವಾಗ, ಅಂದು ತಮ್ಮ ಮನೆಬಾಗಿಲಿಗೆ ಒದಗಿ ಬಂದಿದ್ದ ಪ್ರಧಾನಮಂತ್ರಿ ಹುದ್ದೆಯನ್ನು ನಿರಾಕರಿಸಿದ್ದ ಘಟನೆಯನ್ನು ನೆನೆಪಿಸಿಕೊಂಡು, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಸ್ವಪಕ್ಷೀಯರು ಮತ್ತು ಮೈತ್ರಿಕೂಟದ ಎಲ್ಲಾ ಸದಸ್ಯರು ಸೋನಿಯಾ ಗಾಂಧಿಗೆ ಪ್ರಧಾನಮಂತ್ರಿ ಹುದ್ದೆಯನ್ನು ಒಪ್ಪಿಕೊಳ್ಳಲು ಒತ್ತಡ ಹೇರಿದ್ದರು. ಆದರೆ, ಸೋನಿಯಾ ಪದವಿಯನ್ನು ಹೊರಲು ನಿರಾಕರಿಸಿದ್ದರು. ತದನಂತರ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಈ ವಿಚಾರವನ್ನು ತಮ್ಮ ಟ್ವೀಟ್ ನಲ್ಲಿ ಪ್ರಸ್ತಾವಿಸಿದ ಸಿದ್ದರಾಮಯ್ಯ, ಸೋನಿಯಾ ಗಾಂಧಿಯವರಂತಹ 'ಮಾತೃ ಹೃದಯಿ' ವಿಶ್ವದಲ್ಲೇ ಯಾರೂ ಇಲ್ಲ ಎಂದರ್ಥ ಬರುವ ಟ್ವೀಟ್ ಅನ್ನು ಮಾಡಿದ್ದಾರೆ. ಸಿದ್ದರಾಮಯ್ಯನವರ ಟ್ವೀಟಿಗೆ, ಟ್ವಿಟ್ಟಿಗರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಸಿದ್ದರಾಮಯ್ಯ ಟ್ವೀಟ್
"ಭಾರತದ ರಾಜಕೀಯ ಇತಿಹಾಸದಲ್ಲಿ ಮಾತ್ರವಲ್ಲ, ವಿಶ್ವದ ಇತಿಹಾಸದಲ್ಲಿ ಕೂಡಾ @SoniaGandhi_FC ಅವರಂತೆ ದೇಶದ ನಾಯಕತ್ವ ವಹಿಸುವ ಅವಕಾಶ ಜನಮತದ ಮೂಲಕ ಮನೆಬಾಗಿಲಿಗೆ ಬಂದಾಗ ತ್ಯಾಗ ಮಾಡಿದ ಇನ್ನೊಂದು ಉದಾಹರಣೆ ನಮಗೆ ಸಿಗಲಾರದು. ನಿಮ್ಮ ಮಾತೃಹೃದಯಕ್ಕೆ ಸಲಾಂ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @INCKarnataka" - ಈ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ವಿಶ್ವ ಭ್ರಷ್ಟಾಚಾರ ವಿರೋಧಿ ದಿನ
ಕಾಕತಾಳೀಯವೇನೆಂದರೆ, ಇಂದು ವಿಶ್ವ ಭ್ರಷ್ಟಾಚಾರ ವಿರೋಧಿ ದಿನ ಬಾದಾಮಿ ಶಾಸಕರೇ.. ಭಾರತೀಯ ಪ್ರಧಾನ ಮಂತ್ರಿ ಹುದ್ದೆಯ ಮೇಲೆ ಕಣ್ಣೀಟ್ಟ @SoniaGandhi_FC ಯವರನ್ನು ದೇಶದ ಪ್ರದಾನಿ ಆಗದಂತೆ ತಡೆದ ಕೀರ್ತಿ @Swamy39 ಯವರಿಗೆ ಸಲ್ಲುತ್ತದೆ.. ದಯಾಳುಗಳಾದ ತಾವು ಜೆಡಿಎಸ್ ಅಂದ್ರೆ ಡೆಪಾಸಿಟ್ ಜಪ್ತ್ ಅಸಾಮಿಗಳ ಪಕ್ಷದಲ್ಲಿದ್ದಾಗ ಕೂಡ ಮೇಡಂ ಅವರು ಹೀಗೇ ಇದ್ರಾ ಸಾರ್ - ಸಿದ್ದರಾಮಯ್ಯನವರನ್ನು ಕೆಣಕುವ ಟ್ವೀಟುಗಳು.

ನಮಗೆಲ್ಲಾ ಸ್ಪೂರ್ತಿಯಾಗಿರುವ ಸೋನಿಯಾ ಗಾಂಧಿ
ತ್ಯಾಗನೂ ಇಲ್ಲ ಮಣ್ಣೂ ಇಲ್ಲ.. ಅಧಿಕಾರ ಹಿಡಿಬೇಕಿತ್ತು.. ಆಗ ಕಾಂಗ್ರೆಸ್ಸಿಗೆ ಹಿಡಿದ ಗ್ರಹಚಾರ ಎಲ್ಲವನ್ನೂ ಭಾರತೀಯರೇ ಒಗ್ಗೂಡಿ ಬಿಡಿಸುತಿದ್ದರು. ಕಾಂಗ್ರೆಸ್ಸಿಗೆ ಸ್ವಾತಂತ್ರ್ಯ ಸಿಗುವ ಸಂಭವವೂ ಇತ್ತು. ಇವೆಲ್ಲ ಅಂಶ ಮನಗಂಡೇ ಹಿಂಬಾಗಿಲ ಆಡಳಿತ ನಡೆಸಿದ್ದಲ್ವಾ? ಮನಮೋಹನ ಸಿಂಗ್ ಕೇವಲ ಪ್ರಧಾನಿ ಆಗಿದ್ದವರು ಸೋನಿಯಾ ಗಾಂಧಿ ಸೂಪರ್ ಪ್ರಧಾನಿ ಆಗಿ ಹೇಗೆ ತಮ್ಮ ಕೆಲಸ ಮಾಡಿಸಿಕೊಂಡರು ಎಂಬುದು ಇಡಿ ದೇಶಕ್ಕೆ ಅಲ್ಲಲ್ಲ ಪ್ರಪಂಚಕ್ಕೆ ಗೊತ್ತು.. ನಮಗೆಲ್ಲಾ ಸ್ಪೂರ್ತಿಯಾಗಿರುವ ಸೋನಿಯಾ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು..

ಅತ್ತೆಯ ಹಾಗೆ ದೇಶ ಕಂಡ ಅಪರೂಪದ ಮಹಿಳಾ ರಾಜಕಾರಣಿ
ಅತ್ತೆಯ ಹಾಗೆ ದೇಶ ಕಂಡ ಅಪರೂಪದ ಮಹಿಳಾ ರಾಜಕಾರಣಿ ಶ್ರೀಮತಿ ಸೋನಿಯಾ ಗಾಂಧಿ. ಮೇಡಂ ತಮಗೆ ಹುಟ್ಟಿದ ಹಬ್ಬದ ಶುಭಾಶಯಗಳು.. ಜೆಡಿಎಸ್ ನಲ್ಲಿ ಇದ್ದಾಗ ಸೋನಿಯಾ ಗಾಂಧಿ ವಿದೇಶೀ ಮಹಿಳೆ ಪ್ರಧಾನಿ ಆಗಲೇಬಾರದು ಆಕೆಗೆ ಉನ್ನತ ಹುದ್ದೆ ಸಿಗಬಾರದು ಎಂದು ವಿರೋಧಿಸಿದವರಲ್ಲಿ ಸಿದ್ದರಾಮಯ್ಯನವರೂ ಒಬ್ಬರು. ಆದ್ರೆ, ಈಗ ಅಧಿಕಾರ ಸಿಕ್ಕಿದಮೇಲೆ ಆಕೆ ಮಾತ್ರೃಸ್ಥಾನದ ಹೃದಯ ಎನ್ನುವ ರಾಜಕೀಯ ದುರ್ನಾತದ ಹೊಲಸು ಬಾಯಿಯಲ್ಲವೇ..

ನಿಂದಿಸಿದವರ ಬಾಯಲ್ಲಿ ಮಾತೃಹೃದಯ ಎನ್ನುವ ಪದ
ಭಾರತದ ಇತಿಹಾಸದಲ್ಲಿ ಮಾತ್ರವಲ್ಲ, ವಿಶ್ವದ ಇತಿಹಾಸದಲ್ಲಿ ಕೂಡ ದೇಶದ ನಾಯಕತ್ವ ವಹಿಸುವ ಅವಕಾಶ ಜನಮತದ ಮೂಲಕ ಸೋನಿಯಾಜಿ ಮನೆಬಾಲಿಗೆ ಬಂದಾಗ, ಅವರನ್ನ ತುಚ್ಛ ಪದಗಳಿಂದ ನಿಂದಿಸಿದ್ದ ಸಿದ್ದು ಸರ್ ಅಂತಾ ರಾಜಕಾರಣಿ ಸಿಗೋದು ತುಂಬಾ ವಿರಳ... ನಿಂದಿಸಿದವರ ಬಾಯಲ್ಲಿ ಮಾತೃಹೃದಯ ಎನ್ನುವ ಪದ, ರಾಜಕೀಯ ಯಾವಾಗ ಏನು ಬೇಕಾದ್ರೂ ಹೇಳಿಸುತ್ತೆ ಅನ್ನೋದು ನಿಜ.. ತಮಿಳ್ LTT ಹೆದರಿ ಪ್ರಧಾನಿ ಆಗಲಿಲ್ಲ.. ಮಾನ್ಯ ಸಿದ್ದರಾಮಯ್ಯನವರೇ..












Click it and Unblock the Notifications