ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕುಮಾರಣ್ಣನ ಔದಾರ್ಯ: ಸಂತ್ರಸ್ತರಿಗೆ ಮಧುರೈಯಿಂದ 10 ಸಾವಿರ ಬೆಡ್

|
Google Oneindia Kannada News

ಬೆಳಗಾವಿ, ಆ 10: ' ಕಳೆದ ಮೂರು ದಿನಗಳಿಂದ ಜ್ವರ ಬಂದು ಚಿಕಿತ್ಸೆ ಪಡೆಯುತ್ತಿದೆ. ಮಾಧ್ಯಮಗಳಲ್ಲಿ ನೋಡಿ ರಾತ್ರಿ ತೀರ್ಮಾನ ಮಾಡಿ ಬಂದಿದ್ದೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

In Pics: ಕರ್ನಾಟಕದಲ್ಲಿ ಮಹಾ ಮಳೆ

'ಬೆಳಗಾವಿ ಚಿಕ್ಕೋಡಿ, ಗದಗ ಧಾರವಾಡಕ್ಕೆ ಇಂದು ಹೋಗುತ್ತೇನೆ. ಹತ್ತು ಸಾವಿರ ಬೆಡ್ ಶಿಟ್ ಮಧುರೈ ದಿಂದ ತರಿಸಿ ಸಹಾಯ ನೀಡುತ್ತೇನೆ. ಎಂದೂ ಕಂಡರಿಯದ ಹಾನಿ ಈ ಬಾರಿ ಆಗುತ್ತಿದೆ. ಬೆಳೆ ಹಾನಿ ಸೇರಿದಂತೆ ಜೀವ ಹಾನಿ ದೊಡ್ಡ ಮಟ್ಟದಲ್ಲಿ ಆಗುತ್ತಿದೆ' ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.

ಪ್ರವಾಹ ಸಂತ್ರಸ್ತರಿಗೆ ಮಾನವೀಯತೆ ತೋರಿದ ಕುಮಾರಸ್ವಾಮಿಪ್ರವಾಹ ಸಂತ್ರಸ್ತರಿಗೆ ಮಾನವೀಯತೆ ತೋರಿದ ಕುಮಾರಸ್ವಾಮಿ

'ಈಗಿನ ಹಾನಿಗೆ ಸರ್ಕಾರ ಹೆಚ್ಚು ಪರಿಹಾರ ಕೊಡುವ ಪರಿಹಾರ ಘೋಷಿಸಬೇಕಿದೆ. ಆಹಾರ ಧಾನ್ಯ ಅವಶ್ಯಕತೆ ಇದ್ದರೆ ನಾನು ಸಹಾಯ ಮಾಡುತ್ತೇನೆ. ಸರ್ಕಾರ ಕೆಲಸ ಮಾಡುತ್ತಿದೆ, ಈಗ ನಾನು ರಾಜಕೀಯ ಬೆರಸಲ್ಲ' ಎಂದು ಕುಮಾರಸ್ವಾಮಿ ಹೇಳಿದರು.

 Former CM Kumaraswamy To Donate Ten Thousand Beds To People Who Effected In Civiar Flood

'ಇವತ್ತು ಇರುವ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಮೇಲೆ ಹೊಣೆ ಇದೆ. ಅಧಿಕಾರಿಗಳ ಮುಖಾಂತರ ಕೆಲಸ ಮಾಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡದೆ ಇಂತಹ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ದೆಹಲಿಯಲ್ಲಿ ಅಮಿತ್ ಶಾ ಅದೇನು ಸೂಚನೆ ಕೊಟ್ಟರೋ. 76ರ ಬಿಎಸ್ವೈ, ಇನ್ ಫುಲ್ ಸ್ವಿಂಗ್ ದೆಹಲಿಯಲ್ಲಿ ಅಮಿತ್ ಶಾ ಅದೇನು ಸೂಚನೆ ಕೊಟ್ಟರೋ. 76ರ ಬಿಎಸ್ವೈ, ಇನ್ ಫುಲ್ ಸ್ವಿಂಗ್

ಚಿಕ್ಕೋಡಿಯಲ್ಲಿ‌ ಕುಮಾರಸ್ವಾಮಿ: 'ಯಡಿಯೂರಪ್ಪನವರಿಗೆ ವಯಸ್ಸಿನ ಸಮಸ್ಯೆಗಳು ಇರಬಹುದು. ಅವರಿಗೆ ಸಚಿವ ಸಂಪುಟ ಇಲ್ಲ. ಸರ್ಕಾರದಲ್ಲಿ ಮುಖ್ಯ ಕಾರ್ಯದರ್ಶಿಗಳು ಮತ್ತು ನುರಿತ ಉತ್ತಮ ಅಧಿಕಾರಿಗಳಿದ್ದಾರೆ' ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

'ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಸ್ಪಂದಿಸುವ ಕೆಲಸ ಮಾಡಲಿ. ಕಾಂಗ್ರೆಸ್ ಪಕ್ಷದ ಶಾಸಕರಿರುವ ಕಡೆ ತಾರತಮ್ಯ ನಡೆಯುತ್ತಿದೆ ಎನ್ನುವ ಪ್ರಶ್ನೆಗೆ ಅವರು ರಾಜಿನಾಮೆ ಕೊಟ್ಟಿದ್ದರಿಂದಲೇ, ಸಿಎಂ ಆದವರು ಈಗ ಕೆಲಸ ಮಾಡಲಿ' ಎಂದು ಕುಮಾರಸ್ವಾಮಿ ಕುಟುಕಿದರು.

English summary
Former CM of Karnataka HD Kumaraswamy To Donate Ten Thousand Beds To People Who Effected In Civiar Flood in Belagavi, Chikkodi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X