• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಹೋದರ ರೇವಣ್ಣನ ಮಗ ಪರಿಷತ್ತಿಗೆ ಸ್ಪರ್ಧೆ: ಕುಮಾರಸ್ವಾಮಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ನ 12: "ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ರಾಜಿ ಇಲ್ಲ. ಎಲ್ಲಾ ಮುಖಂಡರು ಒಟ್ಟಾಗಿ ಪಕ್ಷವನ್ನು ಕಟ್ಟಲು ಶ್ರಮಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಖಡಕ್ ಸೂಚನೆ ನೀಡಿದರು.

ಜನತಾಪರ್ವ 1.O ಎರಡನೇ ಹಂತ ' ಜನತಾ ಸಂಗಮ 'ದ ಐದನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಮುಂದಿನ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಜತೆ ಕುಮಾರಸ್ವಾಮಿ ಮಹತ್ವದ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಹೋದರ ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ವಿಧಾನ ಪರಿಷತ್ತಿಗೆ ಸ್ಪರ್ಧಿಸುವ ವಿಚಾರದ ಬಗ್ಗೆಯೂ ಕುಮಾರಸ್ವಾಮಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಪರಿಷತ್ ಚುನಾವಣೆ; ದೇವೇಗೌಡರ ಮೊಮ್ಮಗ ಕಣಕ್ಕೆ? ಪರಿಷತ್ ಚುನಾವಣೆ; ದೇವೇಗೌಡರ ಮೊಮ್ಮಗ ಕಣಕ್ಕೆ?

ಈ ಸಂದರ್ಭದಲ್ಲಿ ಮುಖಂಡರಿಗೆ ಕಠಿಣ ಸೂಚನೆಗಳನ್ನು ಕೊಟ್ಟ ಕುಮಾರಸ್ವಾಮಿ, "ಪಕ್ಷದ ಸಂಘಟನೆ ಬಗ್ಗೆ ಯಾರೂ ಮೈಮರೆಯಬಾರದು. ಪಕ್ಷವನ್ನು ಉಪೇಕ್ಷೆ ಮಾಡಿದರೆ ಸಹಿಸುವುದಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ 2023ರ ವಿಧಾನಸಭೆ ಚುನಾವಣೆ ಗುರಿ ಇಟ್ಟುಕೊಂಡು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಬೇಕು" ಎಂದು ಕುಮಾರಸ್ವಾಮಿ ಹೇಳಿದರು.

"ತಳಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ನಿಷ್ಠೆಯಿಂದ ದುಡಿಯಬೇಕು. ಪಕ್ಷದ ಕೆಲಸ ಮಾಡುವಾಗ ಎಲ್ಲರೂ ಒಂದೇ ಗುರಿಯೊಂದಿಗೆ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಕ್ಕೆ ಅವಕಾಶ ಇರಬಾರದು" ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.

 ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಯಾವುದೇ ಕಾರಣಕ್ಕೂ ನಮ್ಮ ನೆಲೆ ಕಳೆದುಕೊಳ್ಳಬಾರದು

ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಯಾವುದೇ ಕಾರಣಕ್ಕೂ ನಮ್ಮ ನೆಲೆ ಕಳೆದುಕೊಳ್ಳಬಾರದು

ಸುಖಾಸುಮ್ಮನೆ ಇತರರಿಗೆ ಆಹಾರ ಆಗಬಾರದು ಎಂದು ಕಿವಿಮಾತು ಹೇಳಿದ ಕುಮಾರಸ್ವಾಮಿ, "ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಯಾವುದೇ ಕಾರಣಕ್ಕೂ ನಮ್ಮ ನೆಲೆ ಕಳೆದುಕೊಳ್ಳಬಾರದು. ಅದಕ್ಕೆ ಅಗತ್ಯವಾದ ರೀತಿಯಲ್ಲಿ ಸಂಘಟನೆಯನ್ನು ಗಟ್ಟಿ ಮಾಡಬೇಕು. ಪಕ್ಷದ ವಿರುದ್ಧ ನಡೆಯುತ್ತಿರುವ ಪಿತೂರಿಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ನಾನು ಕೂಡ ನಿರಂತರವಾಗಿ ಪ್ರವಾಸ ಮಾಡುತ್ತೇನೆ. ಹಳ್ಳಿಗಳಿಗೂ ಭೇಟಿ ನೀಡುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದರು.

 ನಮ್ಮ ಪಕ್ಷದ ಸರಕಾರಗಳು ಕೊಟ್ಟಿರುವ ಕೊಡುಗೆ

ನಮ್ಮ ಪಕ್ಷದ ಸರಕಾರಗಳು ಕೊಟ್ಟಿರುವ ಕೊಡುಗೆ

ಜನರ ಸಮಸ್ಯೆಗಳಿಗೆ ಎಲ್ಲರೂ ಸ್ಪಂದಿಸಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಯತ್ನ ಮಾಡಬೇಕು. ಜನರ ಪರ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಸಲಹೆ ಮಾಡಿದರು. ಇದಾದ ಮೇಲೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಮುಖಂಡರ ಜತೆಗಿನ ಚರ್ಚೆಯಲ್ಲಿಯೂ ಇದೇ ಮಾತುಗಳನ್ನು ಪುನರುಚ್ಚರಿಸಿದ ಕುಮಾರಸ್ವಾಮಿ, ನಮ್ಮ ಪಕ್ಷದ ಸರಕಾರಗಳು ಕೊಟ್ಟಿರುವ ಕೊಡುಗೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದ್ದಾರೆ.

 ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧೆ ಪ್ರಸ್ತಾವನೆ ಪಕ್ಷದ ಕಚೇರಿಗೆ ಇನ್ನೂ ಬಂದಿಲ್ಲ

ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧೆ ಪ್ರಸ್ತಾವನೆ ಪಕ್ಷದ ಕಚೇರಿಗೆ ಇನ್ನೂ ಬಂದಿಲ್ಲ

"ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಇನ್ನು ಅಂತಿಮಗೊಳಿಸಿಲ್ಲ. ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧೆ ಪ್ರಸ್ತಾವನೆ ಪಕ್ಷದ ಕಚೇರಿಗೆ ಇನ್ನೂ ಬಂದಿಲ್ಲ. ಹಾಸನ ಜಿಲ್ಲೆಯಲ್ಲಿ ಆರು ಶಾಸಕರು ಹಾಗೂ ಮುಖಂಡರು ಇದ್ದಾರೆ. ಅವರು ಯಾವ ಅಭ್ಯರ್ಥಿಯನ್ನು ಅಂತಿಮ ಮಾಡುತ್ತಾರೋ ನೋಡಬೇಕು. ಸೂಕ್ತ ಅಭ್ಯರ್ಥಿ ಹೆಸರನ್ನು ಸೂಚಿಸಿದ ನಂತರ ಮಾತನಾಡುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದರು.

 ಪಕ್ಷದ ಭವಿಷ್ಯದ ಕಾರ್ಯಕ್ರಮಗಳಾದ ಪಂಚರತ್ನ ಮತ್ತಿತರೆ ಅಂಶಗಳು

ಪಕ್ಷದ ಭವಿಷ್ಯದ ಕಾರ್ಯಕ್ರಮಗಳಾದ ಪಂಚರತ್ನ ಮತ್ತಿತರೆ ಅಂಶಗಳು

ಪಕ್ಷದ ಭವಿಷ್ಯದ ಕಾರ್ಯಕ್ರಮಗಳಾದ ಪಂಚರತ್ನ ಮತ್ತಿತರೆ ಅಂಶಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಮುಖಂಡರಿಗೆ ಕುಮಾರಸ್ವಾಮಿ ಸೂಚಿಸಿದರು. ಕಾರ್ಯಾಗಾರದಲ್ಲಿ ಮಾಜಿ ಸಚಿವ ಪುಟ್ಟರಾಜು, ಪಕ್ಷದ ಹಿರಿಯ ಮುಖಂಡ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಸುರೇಶ್ ಗೌಡ, ಅನ್ನದಾನಿ, ಅಪ್ಪಾಜಿ ಗೌಡ, ಅಶ್ವಿನ್, ಮಹಾದೇವ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಮಂಡ್ಯ ಜಿಲ್ಲಾಧ್ಯಕ್ಷ ರಮೇಶ್, ಮೈಸೂರು ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಮಂಜುನಾಥ್, ಮೈಸೂರು ನಗರ ಅಧ್ಯಕ್ಷೆ ಪ್ರೇಮಾ ಮುಂತಾದವರು ಹಾಜರಿದ್ದರು.

   ಬಸ್ ಮೇಲಿದ್ದ ಪುನೀತ್ ಫೋಟೋ ಮುಂದೆ ನಿಂತು ಅಜ್ಜಿ ಕಣ್ಣೀರಿಟ್ಟ ವಿಡಿಯೊ ವೈರಲ್ | Oneindia Kannada
   English summary
   Former CM H D Kumaraswamy Reaction On Suraj Revanna Contesting Legislative Council Election. Know More,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X