ಅಮಿತ್ ಶಾ ಕಾಲು ಹಿಡಿಯುವಂತ ಗತಿ ನಮಗೆ ಬಂದಿಲ್ಲ: ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 27: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾಲು ಹಿಡಿಯಲು ದೆಹಲಿಗೆ ಹೋಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗೆ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಮಿತ್ ಶಾ ಕಾಲು ಹಿಡಿಯುವಂತಹ ಗತಿ ನಮಗೆ ಬಂದಿಲ್ಲ. ಅವತ್ತು ನಮ್ಮ ಮನೆಗೆ ಬಂದು ದೇವೇಗೌಡರ ಕಾಲು ಹಿಡಿದಿದ್ದು ನೀವು, ಜೆಡಿಎಸ್ ಬಗ್ಗೆ ಗೊತ್ತಿಲ್ಲದೆ ಮಾತಾಡಲು ಹೋಗಬೇಡಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ದ ಕಿಡಿಕಾರಿದ್ದಾರೆ.

ಇನ್ನೂ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷದ ಎಲ್ಲಾ ಶಾಸಕ ಮಿತ್ರರು. ಯಡಿಯೂರಪ್ಪ ಹಾಗೂ ಸದಾನಂದಗೌಡರು ಹಾಗೂ ಕಟೀಲ್ ಮುಖಂಡದಲ್ಲಿ ಹೋರಾಟ ನಡೆಸಲಾಗಿದೆ. ನಾಡಿನ ಹಿತರಕ್ಷಣೆ ಮಾಡದೆ ದ್ರೋಹ ಬಗೆದಿದ್ದಾರೆ. ಯಡಿಯೂರಪ್ಪ ನಾವೆಲ್ಲಾ ಒಟ್ಟಾಗಿ ಮೈತ್ರಿ ಸರ್ಕಾರ ಮಾಡಿದಾಗ ಹಲವು ಸಮಸ್ಯೆ ಬಗೆಹರಿಸಿದ್ದೇವೆ ಎಂದು ಹೇಳಿದರು.
ಎರಡೂ ಪಕ್ಷ ಒಟ್ಟಾಗಿರುವುದು ಕೇವಲ ರಾಜಕೀಯಕ್ಕಲ್ಲ. ನಮ್ಮ ನಾಡಿನ ರೈತರ ಹಿತರಕ್ಷಣೆ ಮಾಡಲು, ರೈತರ ಸಂಕಷ್ಟಕ್ಕೆ ಈಡು ಮಾಡಿದ್ದು. ಇದಕ್ಕೆ ಸಲಹೆ ನೀಡಲು ಸರ್ವಪಕ್ಷ ಸಭೆ ಕರೆಯುವಂತೆ ಒತ್ತಡ ಹಾಕಿದ ಮೇಲೆ ಕರೆದ್ರು, ನಮ್ಮ ಸಲಹೆ ಪರಿಗಣಿಸಲೇ ಇಲ್ಲ. ನಮ್ಮ ನೀರನ್ನುಳಿಸಿಕೊಳ್ಳಲು. ಜವಾಬ್ದಾರಿಯುತವಾಗಿ ಮಾಡಬೇಕಿತ್ತು.ಆದರೆ ವಿಫಲ ಅಗಿದ್ದಾರೆ. ಇದರ ವಿರುದ್ಧ ನಮ್ಮ ಒಟ್ಟಾದ ಹೋರಾಟ ಎಂದು ಹೇಳಿದರು.
ಮಂಡ್ಯದಲ್ಲಿ ವಿಶ್ವೇಶ್ವರ ಪ್ರತಿಮೆ ಬಳಿ ದೊಡ್ಡ ಹೋರಾಟ ನಡೆಯುತ್ತಿದೆ. ಆದರೆ, ಸರ್ಕಾರ ಟ್ರಿಬ್ಯೂನಲ್ ತೀರ್ಪಿನ ಬಳಿಕವೂ ಎಡವಿದೆ. ಹಿಂದೆ ನಮ್ಮ ಬಿಜೆಪಿ-ಜೆಡಿಎಸ್ ಸರ್ಕಾರ ಇದ್ದಾಗ ಮಾಡಿದ ಹೋರಾಟದಿಂದ 2018ರಲ್ಲಿ 14TMC ನೀರು ನಮಗೆ ಹೆಚ್ಚುವರಿ ಸಿಕ್ಕಿದೆ. ಇಂಡಿಪೆಂಡೆಂಟ್ ಬಾಡಿ ಮಾಡಿ ಸುಪ್ರೀಂ ಕೋರ್ಟ್ ಹೇಳಿತ್ತು. 14 ವರ್ಷಗಳ ಬಳಿಕ ಇಂತಹ ಪರಿಸ್ಥಿತಿ ಬಂದಿದೆ. ಇದರ ಜವಾಬ್ದಾರಿ ಸರ್ಕಾರದ್ದು. ಇದನ್ನ ಮಂಡಳಿ ಎದುರು ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ಸಂಕಷ್ಟದ ಸೂತ್ರ ಮುಗಿಯುವ ವರೆಗೂ ಇದು ಬಗೆಹರಿಯಲ್ಲ. ಎರಡೂ ರಾಜ್ಯಗಳುಗೆ ಅನ್ಯಾಯ ಆಗದಂತೆ ಒಕ್ಕೂಟದ ವ್ಯವಸ್ಥೆಗೆ ಗೌರವ ಕೊಡಬೇಕು. ಇದನ್ನ ರಾಜಕೀಯ ಅಂತ ಹೇಳಿಕೆ ಅವರ ವೈಫಲ್ಯತೆ ಕಾಣುತ್ತಿದೆ. ನಾವೆಲ್ಲಾ ರಾಜಕೀಯ ಬೆರೆಸಲ್ಲ, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದೆವು. ಕಾವೇರಿ ಕಣಿವೆ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರ ತೆಗೆಯಲು ಹಿಂದೆ ಏನೆಲ್ಲಾ ಮಾಡುದ್ರಿ ಗೊತ್ತಿದೆ. ಕಾಂಗ್ರೆಸ್ ನಾಯಕರ ಲಘುವಾದ ಮಾತು ಸರಿಯಲ್ಲ, ನೀವು ಗಾಜಿನ ಮನೆಯಲ್ಲಿ ಇದ್ದೀರಿ ನೀವು ಹುಷಾರು. ಈಗ ಸುಪ್ರೀಂ ಕೋರ್ಟಿಗೆ ಹೋಗುವುದರಿಂದ ಪರಿಹಾರ ಸಿಗಲ್ಲ. ಎರಡೂ ಸಿಎಂ ಕೂತು ಚರ್ಚೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications