ಪ್ರೀತಂ ಗೌಡ ಮನೆ ಮೇಲೆ ದಾಳಿ: ಸಿದ್ದರಾಮಯ್ಯ ಖಂಡನೆ

Recommended Video

      ಹಾಸನ ಬಿಜೆಪಿ ಶಾಸಕನ ಮನೆ ಜೆಡಿಎಸ್ ಕಾರ್ಯಕರ್ತರಿಂದ ದಾಳಿಯಾದ ಬಗ್ಗೆ ಸಿದ್ದು ಗರಂ | Oneindia Kannada

      ಬೆಂಗಳೂರು, ಫೆಬ್ರವರಿ 13: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುರಿತು ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾಸನ ಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

      ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಮತ್ತು ಈ ಘಟನೆ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

      ಹಾಗೆಯೇ, ದೇವೇಗೌಡರ ಸಾವಿನ ಕುರಿತು ಪ್ರೀತಂ ಗೌಡ ನೀಡಿದ ಹೇಳಿಕೆಯನ್ನು ಸಹ ಅವರು ಖಂಡಿಸಿದ್ದಾರೆ. ಈ ಬಗ್ಗೆ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

      Array

      ಹಿಂಸಾನಂದ ಮನಸ್ಥಿತಿ

      ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಹಜ. ಆದರೆ, ವಿರೋಧ ಪಕ್ಷದ ನಾಯಕರಿಗೆ ಅವರ ವೈಯಕ್ತಿಕ ಬದುಕಿನಲ್ಲಿ ಕೆಡುಕನ್ನು ಬಯಸುವುದು ಹಿಂಸಾನಂದ ಮನಸ್ಥಿತಿಯುಳ್ಳ ಜನರಿಂದ ಮಾತ್ರ ಸಾಧ್ಯ. ಈ ಹಿಂದೆ ಈ ಪದಗಳನ್ನು ಜನಾರ್ದನ ರೆಡ್ಡಿ ಅವರ ಬಾಯಿಯಿಂದ ಕೇಳಿದ್ದೆವು.

      Array

      ಪಾರ್ಥೇನಿಯಂ ಕಿತ್ತುಹಾಕಬೇಕಿದೆ

      ಈಗ ಬಿಜೆಪಿಯ ವಿದೂಷಕನ ಮಾತುಗಳು. ಅದು ಯಾರೇ ಇರಲಿ ವೈಯಕ್ತಿಕ ದ್ವೇಷವನ್ನು ಪ್ರಕಟಿಸುವುದು ಬಿಜೆಪಿಯ ಡಿಎನ್‌ಎದಲ್ಲಿಯೇ ಇದೆ ಎನ್ನುವುದು ಸ್ಪಷ್ಟವಾದ ಸಂಗತಿ. ಈ ಪಾರ್ಥೇನಿಯಂ ಕಳೆಯನ್ನು ಕಿತ್ತುಹಾಕುವ ಅಗತ್ಯವಿದೆ. ಈ ಹಿಂದೆ ಮಹಾತ್ಮಾ ಗಾಂಧೀಜಿ ಮತ್ತು ಈಗ ವಿರೋಧ ಪಕ್ಷಗಳ ನಾಯಕರು.

      Array

      ಆಗ ಜನಾರ್ದನ ರೆಡ್ಡಿ, ಈಗ...

      ವಿರೋಧಿಗಳ ಸಾವು ಬಯಸುವಷ್ಟು ರಾಜಕಾರಣಿಗಳು ಅಧೋಗತಿಗೆ ಇಳಿಯಬಾರದು. ಈದುರ್ಬುದ್ದಿ ಬಿಜೆಪಿ ರಕ್ತದಲ್ಲಿದೆ. ಹಿಂದೆ ಜನಾರ್ದನ ರೆಡ್ಡಿ ನನ್ನ ಕುಟುಂಬದ ಬಗ್ಗೆ ಹೇಳಿದ್ದ ಮಾತನ್ನೇ ಈಗ ಬಿಜೆಪಿ ನಾಯಕರು ದೇವೇಗೌಡ ಕುಟುಂಬದ ಬಗ್ಗೆ ಹೇಳಿದ್ದಾರೆ. ಖಂಡನೀಯ ನಡವಳಿಕೆ ಎಂದಿರುವ ಸಿದ್ದರಾಮಯ್ಯ, ಮಾತಾಡು ಬಿಜೆಪಿ ಮಾತಾಡು ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

      ಘಟನೆ ಖಂಡನೀಯ

      ಹಾಸನದ ಶಾಸಕರ ಮನೆ ಮುಂದೆ ನಡೆದಿರುವ ಘಟನೆ ಖಂಡನೀಯ. ಇಂತಹ ಸಂದರ್ಭಗಳನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಲು ಪೋಲಿಸರು ಅವಕಾಶ ನೀಡಬಾರದು. ಘಟನೆ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಎಂದು ಅವರು ಪ್ರೀತಂ ಗೌಡ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+