ನಡು ರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ಮಾಡಿದ ಮಾಜಿ ಶಾಸಕ

Posted By:
Subscribe to Oneindia Kannada

ಬೆಂಗಳೂರು, ಜೂನ್ 23 : ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ (ಬಿಜೆಪಿ) ಅವರು ಪತ್ನಿ ಸವಿತಾ ಮೇಲೆ ನಡು ರಸ್ತೆಯಲ್ಲಿಯೇ ಹಲ್ಲೆ ನಡೆಸಿದರು. ಪತಿಯ ಜೊತೆ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿ ಸವಿತಾ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದಾರೆ.

ಗುರುವಾರ ಮಧ್ಯಾಹ್ನ ಕುಟುಂಬದವರ ಜೊತೆ ಸವಿತಾ ಅವರು ಬೆಂಗಳೂರಿನ ವಿಕಾಸಸೌಧಕ್ಕೆ ಆಗಮಿಸಿದರು. ಆರು ತಿಂಗಳಿನಿಂದ ಮನೆಗೆ ಬಾರದ ಪತಿ ಕುಮಾರಸ್ವಾಮಿ ಅವರ ಜೊತೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ['ಸುಂದರ ಮಹಿಳೆ' ಎಂದ ಭಾರ್ತಿಗೆ ಹೆಂಡತಿ ಲಿಪಿಕಾ ತಿರುಗೇಟು]

mp kumaraswamy

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರು ಸವಿತಾ ಮೇಲೆ ಹಲ್ಲೆ ನಡೆಸಿದರು. 'ನನ್ನ ಪತಿಗೆ ಹಾಸನದ ಮಹಿಳೆ ಜೊತೆ ಅಕ್ರಮ ಸಂಬಂಧವಿದೆ. ಆದ್ದರಿಂದ ಅವರು ಮನೆಗೆ ಬರುತ್ತಿಲ್ಲ. ಆರು ತಿಂಗಳಿನಿಂದ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ, ಅವರ ಜೊತೆ ಮಾತನಾಡಲು ಅವಕಾಶ ನೀಡಬೇಕು' ಎಂದು ಸವಿತಾ ಮಾಧ್ಯಮಗಳ ಜೊತೆ ಮಾತನಾಡಿದರು. [ಅಸ್ಸಾಂನ ಶಾಸಕಿ ಲತಾ ಬಗ್ಗೆ ಸ್ವಾರಸ್ಯಕರ ಸಂಗತಿ]

ಸವಿತಾ ಹೇಳುವುದೇನು? : '4 ವರ್ಷಗಳ ಕಾಲ ನನ್ನನ್ನು ಪ್ರೀತಿಸಿ ಮದುವೆಯಾಗಿದ್ದೀರಿ. ಈಗ್ಯಾಕೆ ಹೀಗೆ ಮಾಡುತ್ತಿದ್ದೀರಿ?. ಏನೇ ಸಮಸ್ಯೆಗಳಿದ್ದರೂ ಮಾತನಾಡಿ ಬಗೆಹರಿಸಿಕೊಳ್ಳೋಣ' ಎಂದು ಸವಿತಾ ಮನವಿ ಮಾಡಿದರು.

ಅವಳ ಮುಖ ನೋಡುವುದಿಲ್ಲ : ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ.ಕುಮಾರಸ್ವಾಮಿ ಅವರು, '8 ವರ್ಷಗಳಿಂದ ಅವಳು ನನ್ನ ಮನೆಗೆ ಬಂದಿಲ್ಲ. ಅವಳ ಮುಖ ನೋಡುವುದಿಲ್ಲ. ಅವಳ ಜೊತೆ ಮತ್ತೆ ಮಾತನಾಡುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.

ಸವಿತಾ ಅವರು ನಂತರ ವಿಧಾನಸೌಧ ಪೊಲೀಸ್ ಠಾಣೆಗೆ ತೆರಳಿ ತನಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು. ಪೊಲೀಸರು ಅವರನ್ನು ಅಲ್ಲಿಂದ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಹೋದರು. ಬೆಂಗಳೂರು ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಅವರ ಭೇಟಿಗಾಗಿ ಸವಿತಾ ಅವರು ಕಾದು ಕುಳಿತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former ‎BJP‬ MLA MP Kumaraswamy (Mudigere) assaulted his wife Savita at Vikas soudh, Bengaluru. According to Savita Kumaraswamy had not visited home for more than six months.
Please Wait while comments are loading...