ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಷ್ಟಾಚಾರ ಬಿಡಿ, ಆಂಬ್ಯುಲೆನ್ಸ್‌ಗೆ ದಾರಿ ಕೊಡಿ : ಪರಮೇಶ್ವರ

By Gururaj
|
Google Oneindia Kannada News

ಬೆಂಗಳೂರು, ಜುಲೈ 08 : ರಾಜಕೀಯ ನಾಯಕರ ಸಂಚಾರದ ವೇಳೆ ಆಂಬ್ಯುಲೆನ್ಸ್ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಬಿದ್ದಿದ್ದರೆ ಅದಕ್ಕೆ ಜಾಗ ಕೊಡಿ ಎಂದು ಉಪ ಮುಖ್ಯಮಂತ್ರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಡಿಜಿ, ಐಜಿಪಿ ನೀಲಮಣಿ ಎನ್.ರಾಜು ಅವರಿಗೆ ಗೃಹ ಸಚಿವರು ಈ ಕುರಿತು ಪತ್ರ ಬರೆದಿದ್ದಾರೆ. ಆಂಬ್ಯುಲೆನ್ಸ್ ತೆರಳು ಜಾಗ ಮಾಡಿಕೊಡಿ, ಶಿಷ್ಟಾಚಾರವನ್ನು ಬದಿಗೊತ್ತಿ. ಈ ನಿಯಮ ಎಲ್ಲಾ ಜಿಲ್ಲೆಗಳಲ್ಲೂ ಜಾರಿಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ.

108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ

ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಸಂಚಾರದ ವೇಳೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿ ರೋಗಿಗಳು ಪರದಾಡುತ್ತಾರೆ.

G Parameshwara

ಆದ್ದರಿಂದ, ಡಾ.ಜಿ.ಪರಮೇಶ್ವರ ಅವರು ಈ ಕುರಿತು ಪತ್ರ ಬರೆದಿದ್ದಾರೆ. ಆಂಬ್ಯುಲೆನ್ಸ್ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರೆ ಶಿಷ್ಟಾಚಾರವನ್ನು ಪಾಲಿಸುವ ಅಗತ್ಯವಿಲ್ಲ. ಶಿಷ್ಟಾಚಾರವನ್ನು ಬದಿಗೊತ್ತಿ, ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಿ ಎಂದು ಸೂಚನೆ ನೀಡಿದ್ದಾರೆ.

KSRTC ಬಸ್ ಆಂಬುಲೆನ್ಸ್: 16 ಜಿಲ್ಲೆಗಳಿಗೆ ಯೋಜನೆ ವಿಸ್ತರಣೆKSRTC ಬಸ್ ಆಂಬುಲೆನ್ಸ್: 16 ಜಿಲ್ಲೆಗಳಿಗೆ ಯೋಜನೆ ವಿಸ್ತರಣೆ

'ನಾನು ಮತ್ತು ವಿಐಪಿಗಳ ಸಂಚಾರದ ವೇಳೆ ಝಿರೋ ಟ್ರಾಪಿಕ್ ವ್ಯವಸ್ಥೆ ಮಾಡಲಾಗುತ್ತದೆ. ಆಗ ಆಂಬ್ಯುಲೆನ್ಸ್ ಸಂಚಾರ ದಟ್ಟಣೆಯಲ್ಲಿ ಸಿಲುಕಿರುವುದನ್ನು ಗಮನಿಸಿದ್ದೇನೆ. ಆದ್ದರಿಂದ, ಶಿಷ್ಟಾಚಾರ ಬಿಟ್ಟು, ದಾರಿ ಮಾಡಿಕೊಡಿ ಎಂದು ಪತ್ರ ಬರೆದಿದ್ದೇನೆ' ಎಂದು ಪರಮೇಶ್ವರ ಹೇಳಿದ್ದಾರೆ.

ಶಿವಮೊಗ್ಗ ಪೊಲೀಸರಿಗೆ ಸಲಾಂ, ಆಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆಶಿವಮೊಗ್ಗ ಪೊಲೀಸರಿಗೆ ಸಲಾಂ, ಆಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆ

ಬೆಂಗಳೂರು ನಗರ ಸೇರಿ ರಾಜ್ಯದ್ಯಾಂತ ಈ ನಿಯಮ ಜಾರಿಗೆ ಬರಬೇಕು ಎಂದು ಪರಮೇಶ್ವರ ಅವರು ಸೂಚನೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಹಲವು ಬಾರಿ ಆಂಬ್ಯುಲೆನ್ಸ್ ಸಂಚಾರ ದಟ್ಟಣೆಯಲ್ಲಿ ಸಿಲುಕುವುದನ್ನು ನೋಡಿದ್ದೇವೆ. ಗೃಹ ಸಚಿವರ ಆದೇಶವನ್ನು ಪೊಲೀಸರು ಪಾಲಿಸಲಿದ್ದಾರೆಯೇ? ಕಾದು ನೋಡಬೇಕು.

ಬೆಂಗಳೂರು ನಗರದಲ್ಲಿ ಜೀವಂತ ಹೃದಯ ಸಾಗಣೆ ಮಾಡುವಾಗ ಗ್ರೀನ್ ಕಾರಿಡಾರ್ ಮೂಲಕ ಸಿಗ್ನಲ್ ಫ್ರೀ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಗೃಹ ಸಚಿವರ ನಿರ್ಧಾರದಿಂದ ರೋಗಿಗಳಿಗೆ ಸಹಾಯಕವಾಗುವ ನಿರೀಕ್ಷೆ ಇದೆ.

English summary
Karnataka Deputy Chief Minister and Home minister G. Parameshwara said that, No need to follow protocol in the time of political leaders travel. Allow ambulance to go if that stuck in traffic jam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X