Video: ಆನೆ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿಗೆ ಆರಣ್ಯ ಇಲಾಖೆಯಿಂದ ₹25000 ದಂಡ: ಜಾಗೃತಿ ವಿಡಿಯೋ..

ಬೆಂಗಳೂರು, ಆಗಸ್ಟ್ 12: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಸಿಕ್ಕು ಕೂಡಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅರಣ್ಯ ಪ್ರದೇಶಗಳ ನಿಯಮ ಉಲ್ಲಂಘಿಸಿದ ಆನೆ ಮುಂದೆ ಸೆಲ್ಫಿ ತೆಗೆಯಲು ಹೋಗಿ ಅನಾಹುತ ತಂದುಕೊಂಡಿದ್ದ ವ್ಯಕ್ತಿಗೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಿದೆ. ಸಾಲದೆಂಬಂತೆ ಆ ವ್ಯಕ್ತಿಯಿಂದಲೇ ಮಹತ್ವದ ವಿಡಿಯೋ ಮಾಡಿಸಲಾಗಿದೆ.

ಹೌದು, ಬಂಡೀಪುರ ಅರಣ್ಯದ ರಸ್ತೆಯಲ್ಲಿ ಕಾಡಾನೆ ದಾಳಿಗೆ ಒಳಗಾಗಿದ್ದ ವ್ಯಕ್ತಿಯ ವಿಡಿಯೋ ವೈರಲ್ಆಗಿತ್ತು. ಈ ಮೂಲತಃ ಕೇರಳದವರು ಎಂದು ಕೊಳ್ಳಲಾಗಿತ್ತು. ಆದರೆ ಆತ ನಂಜನಗೂಡಿನ ವ್ಯಕ್ತಿ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳಿಂದ ಗೊತ್ತಾಗಿದೆ. ಅರಣ್ಯ ಇಲಾಖೆ ನಿಯಮ ಮೀರಿ ಆನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿದ್ದಕ್ಕಾಗಿ ಈ ವ್ಯಕ್ತಿಗೆ 25,000 ರೂ. ಹಣವನ್ನು ದಂಡವಾಗಿ ಪಡೆಯಲಾಗಿದೆ. ಈ ರೀತಿ ಮಾಡದಂತೆ ಅವರಿಂದಲೇ ಜಾಗೃತಿ ವಿಡಿಯೋ ಮಾಡಿಸಲಾಗಿದೆ.

Forest Dept Fines Man 25 000 for Bandipur Elephant Selfie Makes Him Record Awareness Video

ನಾನು ಬಂಕಾಪುರ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬಂಡೀಪುರ ಅರಣ್ಯ ಪ್ರದೇದ ರಸ್ತೆಯಲ್ಲಿ ಬರುವಾಗ, ಮೋಜು ಮಸ್ತಿಗೆಂದು ಕಾಡಾನೆ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದೆ. ಈ ವೇಳೆ ಕಾಡಾನೆ ದಾಳಿ ಮಾಡಲು ಮುಂದಾಯಿತು. ಆ ವೇಳೆ ಪ್ರಾಣ ಉಳಿದಿದ್ದೆ ಹೆಚ್ಚು. ಯಾರು ಸಹ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನನ್ನಂತೆ ಯಾರು ಅರಣ್ಯ ಪ್ರದೇಶದ ರಸ್ತೆಯಲ್ಲ ಇಳಿದು ಇಂತಹ ಉಚ್ಚಾಟಕ್ಕೆ ಮುಂದಾಗಬೇಕು. ಅರಣ್ಯ ಇಲಾಖೆ ಕ್ರಮ ಕೈಗೊಂಡು ದಂಡ ವಿಧಿಸಿದೆ. ಜೀವ ಮುಖ್ಯ ಎಂದು ಆ ವ್ಯಕ್ತಿಯಿಂದ ಜಾಗೃತಿ ವಿಡಿಯೋ ಮಾಡಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಎರಡು ದಿನಗಳ ಹಿಂದೆ ಬಂಡೀಪುರ ರಸ್ತೆಯಲ್ಲಿ ಸಂಚರಿಸುವಾಗ ಕಾಡಾನೆ ಎದುರಾಗಿತ್ತು. ಎರಡು ಬದಿಯಲ್ಲಿ ಆನೆಯಿಂದ ದೂರಕ್ಕೆ ವಾಹನಗಳು ನಿಂತುಕೊಂಡಿದ್ದವು. ಆಗ ಈ ನಂಜನಗೂಡಿನ ವ್ಯಕ್ತಿ ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿದ್ದ. ವ್ಯಕ್ತಿಯನ್ನು ನೋಡಿ ರೊಚ್ಚಿಗೆದ್ದ ಆನೆ ಅಟ್ಟಿಸಿಕೊಂಡು ಬಂದು ಕಾಡಾನೆ ದಾಳಿಗೆ ಒಳಗಾಗಿದ್ದ. ಅದೃಷ್ಟವಶಾತ್. ಆನೆ ಮೈಮೇಲೆ ಎರಗಿದಾಗ ಸಣ್ಣಪುಣ್ಣ ಗಾಯಗಳಾಗಿವೆ. ಪೂರ್ತಿ ದೇಹದ ಮೇಲೆ ಹತ್ತಿ ನಿಂತಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಈ ಘಟನೆ ಅಲ್ಲಿಯೇ ನಿಂತಿದ್ದ ಹಲವರು ವಿಡಿಯೋ ಮಾಡಿದ್ದಾರೆ. ಆನೆ ಮುಂದೆ ತೆರಳುತ್ತಿದ್ದ ಕಾರಿನೊಳಗಿದ್ದವರು ವಿಡಿಯೋ ಮಾಡಿದ್ದರು.

ಕೆಲವರು ಅರಣ್ಯ ಇಲಾಖೆಗೆ ಟ್ಯಾಗ್ ಮಾಡಿ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಘಟನೆ ಬಳಿಕ ಜೀವ ಉಳಿಸಿಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಕಣ್ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಪತ್ತೆ ಮಾಡಿ. ಅವರಿಗೆ 25000 ರೂಪಾಯಿ ದಂಡ ವಿಧಿಸಿದೆ. ಕಾಡಿನ ಒಳಗೆ ಯಾರು ಇಂತಹ ಸಾಹಸ ಮಾಡದಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+