ಬೆಂಗಳೂರಿನಲ್ಲಿ ಕಾಣಿಸಿಕೊಂಡ ಬಿಜೆಪಿ ನಾಯಕರ ಫ್ಲೆಕ್ಸ್‌: ಕಾಂಗ್ರೆಸ್‌ ವಾಗ್ದಾಳಿ

ಬೆಂಗಳೂರು, ಅಕ್ಟೋಬರ್‌ 26: ಬೆಂಗಳೂರು ನಗರದಲ್ಲಿ ಅಳವಡಿಸಲಾಗಿರುವ ಬಿಜೆಪಿ ನಾಯಕರ ಫ್ಲೆಕ್ಸ್‌ಗಳ ವಿಚಾರವಾಗಿ ಕಾಂಗ್ರೆಸ್‌ ಹರಿಹಾಯ್ದಿದೆ.

ಈ ಕುರಿತು ಬುಧವಾರ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳಿಗೆ ನಿಷೇಧವಿದ್ದರೂ ಬೆಂಗಳೂರಿನಾದ್ಯಂತ 5000ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಅನಧಿಕೃತ ಬ್ಯಾನರ್‌ಗಳನ್ನು ಹಾಕಲಾಗಿದೆ' ಎಂದು ಆರೋಪಿಸಿದೆ.

'ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ನಗರ ಪೊಲೀಸರೇ, ಇವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲವೇಕೆ? ಬ್ಯಾನರ್‌ಗಳನ್ನು ತೆರವು ಮಾಡಲಿಲ್ಲ ಏಕೆ? ಕಾನೂನು ಬಿಜೆಪಿಗೇ ಬೇರೆ, ಇತರರಿಗೆ ಬೇರೆ ಇದೆಯೇ? ಕಾನೂನು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳಲು ಮಾತ್ರ ಇರುವುದೇ ಬಸವರಾಜ ಬೊಮ್ಮಾಯಿ ಅವರೇ' ಎಂದು ಪ್ರಶ್ನಿಸಿದೆ.

Flexes of BJP leaders in Bengaluru Congress lashed out

'ಕಾಂಗ್ರೆಸ್ ಬ್ಯಾನರ್‌ಗಳಿಗೆ ತಾವು ತೋರುವ ವೀರಾವೇಶ ನಿಮ್ಮ ಪಕ್ಷದವರ ಬ್ಯಾನರ್‌ಗಳಿಗೆ ತೋರುತ್ತಿಲ್ಲವೇಕೆ ಬೆಂಗಳೂರನ್ನು ಹಾಗೂ ಕಾನೂನನ್ನು ಬಿಜೆಪಿ ಪಕ್ಷ ಗುತ್ತಿಗೆ ಪಡೆದಿದೆಯೇ? ಬಿಬಿಎಂಪಿ ಆಯುಕ್ತರೇ, ಕ್ರಮ ಕೈಗೊಂಡು ತಮ್ಮ ನಿಷ್ಪಕ್ಷಪಾತವನ್ನು ನಿರೂಪಿಸಿ' ಎಂದು ವಾಗ್ದಾಳಿ ನಡೆಸಿದೆ.

ಬೆಂಗಳೂರು ನಗರದ ಸೌಂದರ್ಯವನ್ನು ಫ್ಲೆಕ್ಸ್‌ಗಳು ಹಾಗೂ ಬ್ಯಾನರ್‌ಗಳು ಹಾಳು ಮಾಡುತ್ತಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ಮಾಡಿದ್ದ ಹೈಕೋರ್ಟ್‌ ಫ್ಲೆಕ್ಸ್‌ ತೆರವಿಗೆ ಸೂಚಿಸಿತ್ತು. ಅನಧಿಕೃತ ಫ್ಲೆಕ್ಸ್‌ ಅಳವಡಿಸಿದವರ ಮೇಲೆ ಪ್ರಕರಣ ದಾಖಲಿಸಬೇಕೆಂದು ಹೇಳಿತ್ತು.

ಈ ಆದೇಶಕ್ಕೆ ಅನುಸಾರವಾಗಿ ಬೆಂಗಳೂರಿನ ಫ್ಲೆಕ್ಸ್‌ಗಳನ್ನು ಬಿಬಿಎಂಪಿ ನಿತ್ಯವೂ ತೆರವು ಮಾಡಬೇಕು.

ಫ್ಲೆಕ್ಸ್‌ಗಳ ಬಗ್ಗೆ ಯಾವುದೇ ನಿರ್ಲಕ್ಷ್ಯ ನಡೆಯುವುದಿಲ್ಲ. ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳ ತೆರವು ಕಾರ್ಯಾಚರಣೆಯನ್ನು ಪ್ರತಿ ದಿನವೂ ಮಾಡಬೇಕು. ಈ ಕುರಿತು ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಹೇಳಲಾಗಿದೆ ಎಂದು ಬಿಬಿಎಂಪಿ ತಿಳಿಸಿತ್ತು. ಆದರೆ, ದೀಪಾವಳಿ ಹಬ್ಬದ ಪ್ರಯುಕ್ತ ಬಿಜೆಪಿ ನಾಯಕರು ಅಳವಡಿಸಿರುವ ಫ್ಲೆಕ್ಸ್‌ಗಳು ನಗರದಾದ್ಯಂತ ಗೋಚರಿಸುತ್ತಿವೆ. ಇದು ನಗರದ ಸೌಂದರ್ಯಕ್ಕೆ ಹಾನಿ ಉಂಟು ಮಾಡುತ್ತಿರುವುದು ಬಗ್ಗೆ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+