ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ತಲೆ ಎತ್ತಲಿವೆ 5 ಸೋಲಾರ್ ವಿದ್ಯುತ್ ಘಟಕ

|
Google Oneindia Kannada News

ಬೆಂಗಳೂರು, ಆ.5 : ಕೇಂದ್ರ ಸರ್ಕಾರ ದೇಶದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಬಗ್ಗೆ ಯೋಜನೆ ತಯಾರಿಸಿದೆ. ಈ ಯೋಜನೆಯ ಭಾಗವಾಗಿ ಕರ್ನಾಟಕದಲ್ಲಿ 5 ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳು ನಿರ್ಮಾಣವಾಗಲಿವೆ. 2019ರ ವೇಳೆಗೆ ಈ ಘಟಕಗಳು ಕಾರ್ಯ ನಿರ್ವಹಿಸಲಿವೆ.

500 ರಿಂದ 1000 ಮೆಗಾವ್ಯಾಟ್ ಸಾಮರ್ಥ್ಯದ 25 ಘಟಕಗಳನ್ನು ದೇಶದಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಗುಜರಾತ್, ರಾಜಸ್ಥಾನ, ಕರ್ನಾಟಕ ಮತ್ತು ಲಡಾಕ್ ನಲ್ಲಿ ಈ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳು ನಿರ್ಮಾಣಗೊಳ್ಳಲಿವೆ.

Solar

2015-16ನೇ ಸಾಲಿನಲ್ಲಿ ಐದು ಘಟಕಗಳು ದೇಶಾದ್ಯಂತ ನಿರ್ಮಾಣಗೊಳ್ಳಲಿದ್ದು ಇದರಲ್ಲಿ ಒಂದು ಘಟಕ ಕರ್ನಾಟಕದಲ್ಲಿ ತಲೆ ಎತ್ತಲಿದೆ. ಉಳದ ನಾಲ್ಕು ಘಕಟಗಳು 2017-18ರ ವೇಳೆಗೆ ನಿರ್ಮಾಣಗೊಳ್ಳಲಿವೆ.

ಕೇಂದ್ರ ಸರ್ಕಾರ 2017ರ ವೇಳೆಗೆ ಸುಮಾರು 20 ಗಿಗಾ ವ್ಯಾಟ್ ವಿದ್ಯುತ್ ಅನ್ನು ಸೌರಶಕ್ತಿಯ ಮೂಲಕ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಅದರ ಭಾಗವಾಗಿಯೇ ಈ ಸೌರ ವಿದ್ಯುತ್ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಯೋಜನಾ ಆಯೋಗದ (ಇಂಧನ) ಸಲಹೆಗಾರ ರಾಜನಾಥ್ ರಾಮ್ ಹೇಳಿದ್ದಾರೆ.

ಅಂದಹಾಗೆ ಬಿಎಚ್ಇಎಲ್ ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿ 10 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲಿದೆ. ಕರ್ನಾಟಕ ವಿದ್ಯುತ್ ನಿಗಮದೊಂದಿಗೆ ಈ ಬಗ್ಗೆ ಬಿಎಚ್ಇಎಲ್ ಒಪ್ಪಂದ ಮಾಡಿಕೊಂಡಿದ್ದು, ಶಿವನಸಮುದ್ರ ಬಳಿಯ ಬೆಳಕವಾಡಿ ಗ್ರಾಮದಲ್ಲಿ 10 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ನಿರ್ಮಾಣಗೊಳ್ಳಲಿದೆ. [ಶಿವನಸಮುದ್ರದಲ್ಲಿ ಸೌರ ವಿದ್ಯುತ್ ಘಟಕ]

English summary
As part of its plans to increase solar energy production, the Central Government will is setting up a five solar energy park in Karnataka which will be operational by 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X