CM Siddaramaiah: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಆಯ್ಕೆ ಹಿಂದಿನ 5 ಕಾರಣ!ಹೈಕಮಾಂಡ್‌ ಲೆಕ್ಕಾಚಾರವೇನು?

ಬೆಂಗಳೂರು, ಮೇ 18: ಐತಿಹಾಸಿದ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಳೆದು ನಾಲ್ಕೈದು ದಿನಗಳಿಂದ ನಡೆದ ಚರ್ಚೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಹುತೇಕ ಶಾಸಕರ ನಿರೀಕ್ಷೆಯಂತೆ ಕಾಂಗ್ರೆಸ್ ನ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಆಗಿ ಕಾಂಗ್ರೆಸ್‌ ಹೈಕಮಾಂಡ್‌ ಆಯ್ಕೆ ಮಾಡಿದೆ.

ಇತ್ತ ಸಿಎಂ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದ ಡಿ ಕೆ ಶಿವಕುಮಾರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಮುಂದುವರೆಸಿಕೊಂಡು ಹೋಗಿ ಎನ್ನುವ ಮೂಲಕ ಹೈಕಮಾಂಡ್‌ ಎರಡು ಜವಾಬ್ದಾರಿಯನ್ನ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡುವುದಾಗಿ ಬಿಜೆಪಿ ನಾಯಕರು ಹಲವು ತಂತ್ರಗಳು ಇದೀಗ ಬಿಜೆಪಿಗೆ ತಿರುಗು ಬಾಣವಾಗಿದ್ದು, ಲೋಕಸಭಾ ಚುನಾವಣೆಯೂ ಸೇರಿದಂತೆ ಹಲವು ಕಾರಣಗಳಿಂ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನವನ್ನ ನೀಡಿದೆ.

karnataka chief minister siddaramaiah

ಸಿದ್ದರಾಮಯ್ಯ ಅವರಿಗೆ ಉತ್ತಮ ರಾಜಕೀಯ ಅನುಭವ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ರಾಜ್ಯ ರಾಜಕಾರಣದಲ್ಲಿ 40 ವರ್ಷಗಳ ಕಾಲ ರಾಜಕೀಯ ಅನುಭವದಲ್ಲಿ ಪಳಗಿದ್ದಾರೆ. ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಜೊತೆಗೆ ಪಳಗಿರುವ ಸಿದ್ದರಾಮಯ್ಯ ಅವರು ಹಲವು ಅನ್ಯ ಪಕ್ಷಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. 2013 ರಲ್ಲಿ ಮುಖ್ಯಮಂತ್ರಿ ಆಗಿ ಉತ್ತಮ ರೀತಿಯಲ್ಲಿ ಹಲವು ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ.

ಇನ್ನೂ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರು, ಇಂದಿರಾ ಕ್ಯಾಂಟೀನ್‌ ನಂಥ ಜನಪ್ರಿಯ ಕಾರ್ಯಕ್ರಮವನ್ನ ತರುವ ಮೂಲಕ ಅನ್ನ ರಾಮಯ್ಯ ಪೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇತ್ತ ಮುಖ್ಯಮಂತ್ರಿಯಾಗಿ ಅರಿ ಹೆಚ್ಚು ಬಾರೀ ಅಂದ್ರೆ 13 ಬಾರೀ ಬಜೆಟ್‌ ಮಂಡಿಸಿದ ಹಿರಿಮೆ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ಎಲ್ಲಾ ಸಮುದಾಯಗಳ ಪ್ರೀತಿ - ವಿಶ್ವಾಸ ಗಳಿಸಿರುವ ಜನ ಮೆಚ್ಚಿದ ನಾಯಕ

ಹೋರಾಟದ ಹಾದಿಯಿಂದಲೇ ಬಂದಿರುವ ಸಿದ್ದರಾಮಯ್ಯ ಅವರು ಕುರುಬ ಸಮುದಾಯನ ನಾಯಕರಾಗಿದ್ದು, ಎಲ್ಲಾ ಸಮುದಾಯದ ನಾಯಕರಾಗಿದ ನೆಚ್ಚಿನ ನಾಯಕರಾಗಿದ್ದಾರೆ. ಜನಪರ - ಬಡವರ ಪರ ಕಾಳಜಿಯಿರುಂಥವರು, ಸಮುದಾಯಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನ ಸಿದ್ದರಾಮಯ್ಯ ಅವರು ತಂದಿದದ್ದು, ಪಕ್ಷದ ಒಳಗೂ ಹಾಗೂ ಪಕ್ಷದ ಹೊರಗೂ ಸಹ ಹಲವು ಸಮುದಾಯದ ನಾಯಕರ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿದ್ದು, ಕಾಂಗ್ರೆಸ್ ಶಾಸಕರಲ್ಲಿ ಹೆಚ್ಚಿನ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರಿಗಿದೆ.

karnataka chief minister siddaramaiah

ಇನ್ನೂ ಎಲ್ಲಾ ಸಮುದಾಯದ ಜನರ ಬೆಂಬಲ ಸಿದ್ದರಾಮಯ್ಯ ಅವರಿಗಿದ್ದು, ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ, ಮುಸ್ಲಿಂ ಸಮುದಾಯಗಳ ಒಲವನ್ನೂ ಗಳಿಸಿದ್ದಾರೆ. ಈ ಎಲ್ಲಾ ಅಂಶಗಳನ್ನ ಹೈಕಮಾಂಡ್‌ ನಾಯಕರು ಪರಿಗಣಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ನಿರ್ಧಾರಿಸಿದೆ.

​ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಬೇಕು!

ಮೂರು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿಗೆ ಸಡ್ಡು ಹೊಡೆದು ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಹೆಚ್ಚಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನವನ್ನ ಗೆಲ್ಲಲ್ಲು ಸಿದ್ದರಾಮಯ್ಯ ಅವರು ಬೇಕೇ ಬೇಕು ಎಂಬ ಲೆಕ್ಕಾಚಾರವನ್ನ ಹೈಕಮಾಂಡ್‌ ಹಾಕಿಕೊಂಡಿದೆ.

ಇತ್ತ 2109 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಂದೊಂದು ಸ್ಥಾನವನ್ನ ಮಾತ್ರ ಗಳಿಸಿತ್ತು. ಈಗಾಗಲೇ ಸೋಲಿನ ಪೆಟ್ಟು ತಿಂದಿರುವ ಬಿಜೆಪಿ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ನಾಯಕರನ್ನ ಕಟ್ಟಿ ಹಾಕಲು ಸಿದ್ದರಾಮಯ್ಯ ಅವರಿಗೆ ಮಾತ್ರ ಸಾಧ್ಯ, ಇದೆ ಕಾರಣಕ್ಕೆ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿದೆ.

karnataka chief minister siddaramaiah

ಇನ್ನೂ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಮೋದಿ ಅಲೆಯನ್ನ ಆರಂಭಿಸಿದ ರೀತಿಯಲ್ಲಿಯೇ ಲೋಕಸಭಾ ಚುನಾವಣೆಯಲ್ಲಿಯೂ ಮೋದಿ ಅಲೆಯನ್ನ ಹೆಚ್ಚಿಸಲು ಬಿಜೆಪಿಪ ನಾಯಕರು ಮುಂದಾಗುತ್ತಾರೆ. ಈ ವೇಳೆ ಬಿಜೆಪಿ ನಾಯಕರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವಂಥ ಏಕೈಕ ರಾಜ್ಯನಾಯಕರೆಂದರೆ ಅದು ಸಿದ್ದರಾಮಯ್ಯ ಮಾತ್ರ. ಹೀಗಾಗಿ ಮುಖ್ಯಮಂತ್ರಿ ಸ್ಥಾನವನ್ನ ನೀಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲು ಸಹಾಯಕವಾಗುತ್ತದೆ ಹಾಗೂ ಬಿಜೆಪಿ ನಾಯಕರ ವಿರುದ್ದ ಸೆಡ್ಡು ಹೊಡೆಯುವಂತಹ ನಾಯಕ ಅಂದ್ರೆ ಅದು ಸಿದ್ದರಾಮಯ್ಯ ಮಾತ್ರ.

ಸಿದ್ದರಾಮಯ್ಯನವರು ಕ್ಲೀನ್ ಹ್ಯಾಂಡ್ ಎಂಬ ಪ್ರತೀತಿ

ಕಾಂಗ್ರೆಸ್‌ ನ ಐತಿಹಾಸಿಕ ಗೆಲ್ಲುವಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ ಕೆ ಶಿವಕುಮಾರ್‌ ಪಟ್‌ಟು ಹಿಡಿದ್ದು, ಹಲವು ಲೆಕ್ಕಾಚಾರಗಳನ್ನ ಹಾಕಿಕೊಂಡಿದ್ದ ಕಾಂಗ್ರೆಸ್‌ ಹೈಕಮಾಂಡ್‌ ಕ್ಲೀನ್‌ ಹ್ಯಾಂಡ್‌ ಆಗಿರುವ ಸಿದ್ದರಾಮಯ್ಯ ಅವರಿಗೆ ಕೊನೆಗೂ ಮುಖ್ಯಮಂತ್ರಿ ಸ್ಥಾನವನ್ನ ನೀಡಿದೆ.

ಹೌದು ಸಿಎಂ ಸ್ಥಾನದ ರೇಸ್‌ ನಲ್ಲಿದ್ದ ಡಿ ಕೆ ಶಿವಕುಮಾರ್‌ ವಿರುದ್‌ ಹಲವು ಅಕ್ರಮ ಆರೋಪಗಳನ್ನ ಪ್ರಕರಣಗಳನ್ನ ಎದುರಿಸುತ್ತಿದ್ದಾರೆ. ಹಲವು ವರ್ಷಗಳ ಬಳಿಕೆ ಕಾಂಗ್ರೆಸ್ ಪರವಾಗಿ ದೊಡ್ಡ ಜನಾಭಿಪ್ರಾಯ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್‌ ಗೆ ಸಿಎಂ ಸ್ಥಾನವನ್ನ ನೀಡಿದರೇ ಬಿಜೆಪಿ ನಾಯಕರಿಗೆ ನಾವೇ ಅಸ್ತ್ರವನ್ನ ನೀಡಿದಂತಾಗಿತ್ತದೆ ಅದು ಅಲ್ಲದೇ ಇದು ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಡ್ಯಾಮೇಜ್‌ ಆಗುವ ಸಾಧ್ಯತೆ ಹೆಚ್ಚು . ಹೀಗಾಗಿ ಮುಖ್ಯಮಂತ್ರಿ ಸ್ಥಾನವನ್ನ ನೀಡುವುದು ಸರಿಯಲ್ಲ ಎಂದು ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನವನ್ನ ನೀಡಿದೆ ಎನ್ನಲಾಗಿದೆ.

ತೃತೀಯ ರಂಗ ನಿರ್ಮಾಣಕ್ಕೆ ಸಹಾಯಕ

ರಾಷ್ಟ್ರಮಟ್ಟದಲ್ಲಿ ಬಲಿಷ್ಠವಾಗಿರುವ ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧ ತೃತೀಯ ರಂಗವನ್ನು ರಚಿಸಬೇಕೆಂದು ಕಾಂಗ್ರೆಸ್ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳು ಕಸರತ್ತು ನಡೆಸುತ್ತಿವೆ. ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಜೊತೆಗೆ ನಾವು ತೃತೀಯ ರಂಗ ರಚಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಆಡಳಿತ ನಡೆಸಿದ್ದ ಬಿಜೆಪಿಯನ್ನ ಹೀನಾಯವಾಗಿ ಸೋಲಿಸಿ ಐತಿಹಾಸಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿಯೂ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+