ಅಂಕೋಲಾದಲ್ಲಿ ಭೀಕರ ಕಾರು ಅಪಘಾತ : ಐವರ ದುರ್ಮರಣ

By: ಕಾರವಾರ ಪ್ರತಿನಿಧಿ
Subscribe to Oneindia Kannada

ಕಾರವಾರ, ಆಗಸ್ಟ್ 10 : ನಿಂತಿದ್ದ ಲಾರಿಗೆ ಸ್ವಿಫ್ಟ್ ( Ka 29 b 4291) ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ರಸ್ತೆಯಲ್ಲಿ ಉಳುಮೆ ಮಾಡಿದ ಅಂಕೋಲಾ ಗ್ರಾಮಸ್ಥರು

ಕಾರಿನವರು ವಿಜಯಪುರ ಜಿಲ್ಲೆಯ ಜಮನಾಳದಿಂದ ದಕ್ಷಿಣ ಕನ್ನಡದ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಆದರೆ ವಿಧಿ ಅವರನ್ನು ಅರ್ಧದಲ್ಲಿಯೆ ತಡೆದಿದೆ.

Five killed as swift car rams lorry in Ankola

ಮೃತರಲ್ಲಿ ಇಬ್ಬರು ಮಕ್ಕಳು ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಗಾಯಗೊಂಡವರಲ್ಲಿ ಮೂವರ ಗುರುತು ಪತ್ತೆಯಾಗಿದ್ದು, ದಾನಪ್ಪ ರುದ್ರಪ್ಪ ಕೋರಿ, ಆತನ ಮಗ ಆದಿತ್ಯ ದಾನಪ್ಪ ಕೋರಿ, ರಾಜು ಗೋಪಾಲ್ ಪಾಟೀಲ ಎಂದು ಗುರುತಿಸಲಾಗಿದೆ.

Five killed as swift car rams lorry in Ankola

ಸ್ಥಳಕ್ಕೆ ಅಂಕೋಲಾ ಪಿಎಸ್ಐ ಬಸಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಭೀರ ಗಾಯಗೊಂಡ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಸಾಗಿಸಲಾಗುತ್ತಿದೆ.

Five killed as swift car rams lorry in Ankola

ಜೆಡಿಎಸ್ ರಾಜ್ಯ ಯುವ ಮಹಿಳಾ ರೈತ ದಳದ ಅಧ್ಯಕ್ಷೆಯಾಗಿ ಚೈತ್ರಾ ಗೌಡ ನೇಮಕ

ಜೆಡಿಎಸ್ ಮಹಿಳಾ ರಾಜ್ಯ ಪ್ರಮುಖೆ, ಉತ್ತರಕನ್ನಡ ಜಿಲ್ಲೆಯ ಶಿರಸಿಯ ನಿವಾಸಿ ಚೈತ್ರಾ ಗೌಡ ಅವರನ್ನು ಜೆಡಿಎಸ್ ರಾಜ್ಯ ರೈತ ವಿಭಾಗದ ಯುವ ಮಹಿಳಾ ರೈತ ದಳದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿ ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳದ ರೈತ ವಿಭಾಗದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಆದೇಶ ಹೊರಡಿಸಿದ್ದಾರೆ.

An Accident Caught In CCTV

ಚೈತ್ರಾ ಗೌಡ ಅವರು ಜಾತ್ಯತೀತ ಜನತಾದಳದ ಸಕ್ರಿಯ ಮಹಿಳಾ ಮುಖಂಡೆಯಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಕಾರ್ಯಕರ್ತೆಯಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Five people have been killed and four injured as Maruti Swift car rammed still lorry near Ankola in Uttara Kannada district. The diseased are from Vijayapura. They were going to Kukke Subramanya in Dakshina Kannada. ಅಂಕೋಲಾದಲ್ಲಿ ಭೀಕರ ಕಾರು ಅಪಘಾತ : ಐವರ ದುರ್ಮರಣ
Please Wait while comments are loading...