Karnataka Elections: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ನಿರ್ಧಾರ; ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ.

ಬೆಂಗಳೂರು,ಮಾರ್ಚ್17:‌ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಸಮರಕ್ಕೆ ಸಜ್ಜಾಗಿವಿ. ಈ ನಡುವೆ ರಾಜ್ಯ ಬಿಜೆಪಿ ಪಾಳಯದಲ್ಲಿ ಟಿಕೆಟ್‌ ಗಾಗಿ ಸಾಕಷ್ಟು ಟಿಕೆಟ್‌ ಆಕಾಂಕ್ಷಿಗಳು ಲಾಭಿ ನಡೆಸಿದ್ದು, ಕೆಲವರಿಗೆ ಟಿಕೆಟ್‌ ಕೈ ತಪ್ಪುವ ಆತಂಕ ಎದುರಾಗಿದೆ.

ಈಗಾಗಲೇ ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್‌ ರಾಜ್ಯದಲ್ಲಿ ಗೆಲ್ಲುವ ಕುದುರೆಗೆ ಟಿಕೆಟ್‌ ನೀಡಲು ನಿರ್ಧರಿಸಿದೆ. ಜೊತೆಗೆ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದು, ಟಿಕೆಟ್‌ ವಿಚಾರದಲ್ಲಿ ಯಾವದೇ ಗೊಂದಲಗಳು ಹಾಗೂ ಭಿನ್ನಮತಗಳು ಉಂಟಅಗದ ರೀತಿಯಲ್ಲಿ ಪಟಿಕೆಟ್‌ ಘೋಷಿಸುವ ಲೆಕ್ಕಾಚಾರವನ್ನ ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ.

ಇನ್ನೂ ಮೊದಲ ಪಟ್ಟಿಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ, ಚಿಕ್ಕಮಗಳೂರಿನಿಂದ ಸಿ.ಟಿ.ರವಿ, ತೀರ್ಥಹಳ್ಳಿ ಕ್ಷೇತ್ರದಿಂದ ಆರಗ ಜ್ಞಾನೇಂದ್ರ , ಪದ್ಮನಾಭನಗರ ಆರ್. ಅಶೋಕ್
ಮಲ್ಲೇಶ್ವರಂ ನಿಂದ ಅಶ್ವತ್ಥನಾರಾಯಣ್, ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್. ಈಶ್ವರಪ್ಪ ಸ್ಪರ್ಧೆ ಮಾಅಡಲಿದ್ದು, ಇನ್ನೂ ಮೊಳಕಾಲ್ಕೂರುದಿಂದ ರಾಮುಲು ಮರಳಿ ಬಳ್ಳಾರಿ ಗ್ರಾಮೀಣಕ್ಕೆ ಬರ್ತಿದ್ದಾರೆ. ಇನ್ನೂ ಪಕ್ಷದ ನಾಯಕರ ವಿರುದ್ದ ಸಾಕಷ್ಟು ಅಸಮಾಧಾನಗೊಂಡು ಕಾಂಗ್ರೆಸ್‌ಗೆ ಸೇರ್ತಾರೆ ಎನ್ನಲಾಗಿದ್ದ ವಸತಿ ಸಚಿವ ಸೋಮಣ್ಣಗೆ ಗೋವಿಂದರಾಜನಗರ ಕ್ಷೇತ್ರದಿಂದ ಟಿಕೆಟ್ ಪಕ್ಕಾ ಆಗಿದೆ.

ವಲಸೆ ಬಂದ ನಾಯಕರಲ್ಲಿ ಯಾರೆಗೆಲ್ಲಾ ಟಿಕೆಟ್?‌

ವಲಸೆ ಬಂದ ನಾಯಕರಲ್ಲಿ ಯಾರೆಗೆಲ್ಲಾ ಟಿಕೆಟ್?‌

ಇನ್ನೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ 17 ಜನ ಶಾಸಕರಲ್ಲಿ ಹಲವು ಜನ ಶಾಸಕರನ್ನ ಸಚಿವರನ್ನಾಗಿ ಮಾಡಿದ್ದು, ಮೂಲ ಹಾಗೂ ವಲಸೆ ಬಿಜೆಪಿಗರ ನಡುವಿನ ಅಸಮಾದಾನದ ನಡುವೆಯೂ ಕೆಲ ವಲಸಿದರಿಗೆ ಟಿಕೆಟ್‌ ನೀಡುವ ಅನಿವಾರ್ಯತೆ ಎದುರಾಗಿದೆ.

ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೋಕಾಕ್ ಕ್ಷೇತ್ರದಿಂದ, ಸಚಿವರಾದ ಡಾ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್‌ ನೀಡಲಿದ್ದು, ಯಶವಂತಪುರ ಕ್ಷೇತ್ರದಿಂದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು, ಗೋಪಾಲಯ್ಯ ಮುನಿರತ್ನ, ಆನಂದ್ ಸಿಂಗ್, ಬಿ.ಸಿ. ಪಾಟೀಲ್ ಮತ್ತು ಶಿವರಾಮ್ ಹೆಬ್ಬಾರ್‌ಗೆ ಸದ್ಯ ಪ್ರತಿನಿಧಿಸುವ ಕ್ಷೇತ್ರದ ಟಿಕೆಟ್ ನೀಡಲು ಮುಂದಾಗಿದೆ. ಬಿಎಸ್‌ಪಿಯಿಂದ ಬಿಜೆಪಿಗೆ ಬಂದ ಎನ್.ಮಹೇಶ್‌ಗೆ ಕೊಳ್ಳೇಗಾಲ ಟಿಕೆಟ್ ನೀಡಲು ಚಿಂತನೆ ನಡೆಸಿದೆ. ಶಾಸಕ ಶ್ರೀಮಂತ್‌ಪಾಟೀಲ್‌ಗೆ ಕಾಗವಾಡ ಟಿಕೆಟ್ ಫಿಕ್ಸ್ ಆಗಿದೆ.

ಉಪ ಚುನಾವಣೆ ಗೆದ್ದವರಿಗೆ ಟಿಕೆಟ್ ಫಿಕ್ಸ್‌ !?

ಉಪ ಚುನಾವಣೆ ಗೆದ್ದವರಿಗೆ ಟಿಕೆಟ್ ಫಿಕ್ಸ್‌ !?

ಇನ್ನೂ ಬಿಜೆಪಿ ಅಭ್ಯರ್ಥಿಗಳಾಗಿ ಉಪಚುನಾವಣಾ ಸಮರವನ್ನ ಗೆಲುವು ಸಾಧಿಸಿದ ರಮೇಶ್ ಭೂಸನೂರಗೆ ಸಿಂದಗಿ, ಬಸವಕಲ್ಯಾಣದಿಂದ ಶರಣು ಸಲಗಾರ್, ಅರುಣ್‌ಕುಮಾರ್ ಪೂಜಾರ್‌ಗೆ ರಾಣೆಬೆನ್ನೂರು ಇನ್ನು, ರಾಜೇಶ್ ಗೌಡಗೆ ಶಿರಾ ಕ್ಷೇತ್ರದಿಂದ ಟಿಕೆಟ್ ಖಚಿತವಾಗಿದೆ. ಕೆಲ ನಾಯಕರು ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ ಎಂಬ ವದಂತಿ ನಡುವೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ.

ತೀವ್ರ ಪೈಪೋಟಿ ಕ್ಷೇತ್ರಗಳ ಮೇಲೆ ಹೈಕಮಾಂಡ್‌ ಹೆಚ್ಚು ಒತ್ತು

ತೀವ್ರ ಪೈಪೋಟಿ ಕ್ಷೇತ್ರಗಳ ಮೇಲೆ ಹೈಕಮಾಂಡ್‌ ಹೆಚ್ಚು ಒತ್ತು

ಇನ್ನೂ ಈ ಬಾರಿ ವಿಧಾನಸಭಾ ಚುನಾವಣೆ ಆಡಳಿತ ರೂಢ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದು, ತೀವ್ರ ಪೈಪೋಟಿ ಇರುವ ಕ್ಷೇತ್ರದ ಮೇಲೆ ಹೆಚ್ಚಿನ ನಿಗಾ ಇಡುವಂತೆ ಹೈಕಮಾಂಡ್‌ ಸೂಚನೆ ನೀಡಿದೆ. ಜೆಡಿಎಸ್‌ ಟಿಕೆಟ್‌ ವಿಚಾರದಲ್ಲಿ ತೀವ್ರ ಗೊಂದಲಕ್ಕೆ ಕಾರಣವಗಿದ್ದ ಹಾಸನದಿಂದ ಪ್ರೀತಂಗೌಡ ಫಿಕ್ಸ್ ಆಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಬಲ ಪೈಪೋಟಿ ನೀಡಲು ಚನ್ನಪಟ್ಟಣದಿಂದ ಯೋಗೇಶ್ವರ್ ಟಿಕೆಟ್ ನೀಡಲಾಗ್ತಿದೆ. ಗಣಿಧಣಿ ಜನಾರ್ಧನ ರೆಡ್ಡಿ ಪತ್ನಿ ಮುಂದೆ ಗೆಲುವಿನ ದಡ ಸೇರಲು ಸಹೋದರ ಸೋಮಶೇಖರ್ ರೆಡ್ಡಿ ಬಳ್ಳಾರಿ ಕಣ ನೀಡಲಾಗ್ತಿದೆ.

ಇನ್ನೂ ನಂಜನಗೂಡಲ್ಲಿ ಧ್ರುವನಾರಾಯಣ್ ನಿಧನದಿಂದ ಎದ್ದ ಅನುಕಂಪದ ಎದುರು ಹರ್ಷವರ್ಧನ್ ಹೋರಾಟ ಅನಿವಾರ್ಯವಾಗಿದೆ. ಕೆಜಿಎಫ್ ಬಾಬು, ಆರ್.ವಿ ದೇವರಾಜ್‌ ನಡುವಿನ ಕದನದ ಲಾಭ ಪಡೆಯಲು ಗರುಡಾಚಾರ್‌ಗೆ ಚಿಕ್ಕಪೇಟೆ ಜವಾಬ್ದಾರಿ ನೀಡೋದು ಖಚಿತವಾಗಿದೆ.

ಬಿಜೆಪಿ ಬಣ ಬಡಿದಾಟ ಅಪಸ್ವರವಿದ್ದ ಶಾಸಕರಿಗೆ ಟಿಕೆಟ್‌!

ಬಿಜೆಪಿ ಬಣ ಬಡಿದಾಟ ಅಪಸ್ವರವಿದ್ದ ಶಾಸಕರಿಗೆ ಟಿಕೆಟ್‌!

ವಿಧಾನ ಸಭೆ ಚುನಾವಣೆ ಹೊತ್ತಲ್ಲೇ ತಮ್ಮ ಕ್ಷೇತ್ರದಲ್ಲಿ ಅಪಸ್ವರಕ್ಕೆ ತುತ್ತಾಗಿರೋ ಕೆಲ ಶಾಸಕರೂ ಸಹ ಮೊದಲ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಪಕ್ಷದಲ್ಲಿನ ಅಪಸ್ವರದ ಮಧ್ಯೆ ಮುತ್ತಿಮೂಲ್‌ಗೆ ಕಲ್ಬುರ್ಗಿ ಗ್ರಾಮೀಣ ಟಿಕೆಟ್ ಖಚಿತ ಆಗಿದೆ. ಟಿಕೆಟ್ ಗಾಗಿ ಸಹೋದರನ ತೀವ್ರ ಸ್ಪರ್ಧೆ ನಡುವೆ ಕಳಕಪ್ಪ ಬಂಡಿಗೆ ರೋಣದ ಬಂಡಿ ನೀಡಲಾಗಿದೆ.

ಇನ್ನೂ ಸೊರಬ ಕ್ಷೇತ್ರದಲ್ಲಿ ಬಿಜೆಪಿ ಬಣ ಬಡಿದಾಟದ ನಡುವೆ ಕುಮಾರ್ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡ್ತಿದೆ. ತುಮಕೂರಿನಲ್ಲಿ ಮತಕ್ಕಾಗಿ ಸೊಗಡು ಶಿವಣ್ಣ ಪ್ರಯತ್ನ ಪಟ್ಟಿದ್ದರೂ ಕೂಡ ಜ್ಯೋತಿ ಗಣೇಶ್ ಪರ ಒಲವು ವ್ಯಕ್ತವಾಗಿದೆ. ಕೃಷ್ಣರಾಜ ಕ್ಷೇತ್ರದಿಂದ ಬ್ರಾಹ್ಮಣ ಸಮಾಜದ ವಿರೋಧದ ನಡುವೆ ರಾಮದಾಸ್‌ಗೆ ಟಿಕೆಟ್ ಸಿಗಲಿದೆ. ಕಳೆದ ಬಾರಿ ಟಿಕೆಟ್ ತ್ಯಾಗ ಮಾಡಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಪಸ್ವರವಿದ್ರೂ ಯತ್ನಾಳ್‌ ಗೆ ವಿಜಯಪುರ ಟಿಕೆಟ್ ಫಿಕ್ಸ್ ಎನ್ನಲಾಗ್ತಿದೆ.

ಒಟ್ನಾಲಿ ಅಳೆದು ತೂಗಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ತಯಾರಿ ನಡೆಸಿದ್ದು, ಪ್ರತಿ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಗಳ ಸಂಖ್ಯೆ ಹೆಚ್ಚಾಗಿದ್ದು, ಯುಗಾದಿ ಹಬ್ಬದ ಬಳಿಕ ಅಂದ್ರೆ ಮಾರ್ಚ್‌ 30 ರಂದು ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಟಿಕೆಟ್‌ ಬಿಡುಗಡೆಯಿಂದ ಹೆಚ್ಚಾಗುವ ಅಸಮಾಧಾನವನ್ನ ಯಾವ ರೀತಿ ಶಮನಗೊಳಿಸುತ್ತಾರೆ ಎಂದು ಕಾದುನೋಡ್ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+