ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಂದ ಮೈಸೂರು ತಲುಪಿದ ಮೊದಲ ಇ-ಬಸ್: ಎಷ್ಟು ಗಂಟೆ ಪ್ರಯಾಣಿಸಿತು? ಮುಂದೆ ಯಾವ ನಗರಗಳ ನಡುವೆ ಸಂಚರಿಸಲಿದೆ? ಮಾಹಿತಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಜನೆವರಿ 16: ಉತ್ತಮ ಪ್ರಯಾಣಿಕರ ಸೇವೆ ಮತ್ತು ಧ್ವನಿಮುಕ್ತ ಪ್ರಯಾಣವನ್ನು ಒದಗಿಸುವ ಪ್ರಯತ್ನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಎಲೆಕ್ಟ್ರಿಕ್ ಬಸ್ (ಇ-ಬಸ್) ಸೇವೆಯನ್ನು ಪ್ರಾರಂಭಿಸಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ಮೊದಲ ಇ ಬಸ್‌ ಸಂಚರಿಸಿದೆ.

ಮೈಸೂರಿನ ಬಸ್‌ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೊದಲ ಇ ಬಸ್‌ ಆಗಮಿಸಿತು. ಇದು ಬೆಂಗಳೂರಿನಿಂದ ಬೆಳಿಗ್ಗೆ 6.45ಕ್ಕೆ ಹೊರಟಿತು. ಮೈಸೂರನ್ನು ತಲುಪಲು ಕೇವಲ ಮೂರು ಗಂಟೆ ತೆಗೆದುಕೊಂಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಈಗಾಗಲೇ ಇ-ಬಸ್‌ಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರಿನ ಪ್ರಯಾಣಿಕರು ತೊಂದರೆ-ಮುಕ್ತ ಪ್ರಯಾಣವನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಇ ಬಸ್‌ ಪ್ರಯೋಗವು ಯಶಸ್ವಿಯಾಗಿದೆ.

First E-Bus from Bangalore to Mysore: How many hours did it travel? Here is the information

ಈಗ KSRTC ರಾಜ್ಯದಾದ್ಯಂತ ಇ ಬಸ್‌ ಸೇವೆಗಳನ್ನು ಆರಂಭಿಸಲು ಬಯಸಿದೆ. ಬೆಂಗಳೂರು-ಮೈಸೂರು ಮಾರ್ಗವನ್ನು ಆದ್ಯತೆಯ ಮಾರ್ಗವೆಂದು ಪರಿಗಣಿಸಲಾಗಿದೆ.

ಬೆಂಗಳೂರಿನ ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್ ನಿರ್ಮಿಸಲಾಗುತ್ತಿದೆ. ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿರುವ ಎತ್ತರದ ಪ್ಲಾಟ್‌ಫಾರ್ಮ್‌ಗಳನ್ನು ಸಿದ್ದಗೊಳಿಸುವ ಕಾರ್ಯವನ್ನು ಬಿಎಂಟಿಸಿ ಕೈಗೆತ್ತಿಕೊಂಡಿದೆ. ಎರಡು ನಗರಗಳ ನಡುವೆ ಮೊದಲ ಬಸ್‌ನ ಪ್ರಾಯೋಗಿಕ ಚಾಲನೆಯನ್ನು ಡಿಸೆಂಬರ್ 18 ರಂದು ನಡೆಸಲಾಗುವುದು.

First E-Bus from Bangalore to Mysore: How many hours did it travel? Here is the information

ಬೆಂಗಳೂರಿನ ಮೆಜೆಸ್ಟಿಕ್ (ಗ್ರಾಮೀಣ ವಿಭಾಗ) ಬಸ್ ನಿಲ್ದಾಣದಲ್ಲಿ ಮತ್ತೊಂದು ಚಾರ್ಜಿಂಗ್ ಸ್ಟೇಷನ್ ಬರಲಿದೆ. KSRTC ಈಗಾಗಲೇ ಹೈದರಾಬಾದ್ ಮೂಲದ Olectra Greentech Ltd ಜೊತೆ ಒಪ್ಪಂದ ಮಾಡಿಕೊಂಡಿದೆ, ಇದು ಡಿಸೆಂಬರ್ 15 ರೊಳಗೆ ಮೂಲಮಾದರಿಯ ಇ-ಬಸ್ ಅನ್ನು ತಲುಪಿಸುವ ನಿರೀಕ್ಷೆಯಿದೆ. ತಿಂಗಳ ಅಂತ್ಯದ ವೇಳೆಗೆ, KSRTC 25 ಇ-ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಇನ್ನೂ 25 ಬಸ್‌ಗಳನ್ನು ನಿರೀಕ್ಷಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

150-ಕಿಮೀ ಬೆಂಗಳೂರು-ಮೈಸೂರು ಮಾರ್ಗವು ಆದ್ಯತೆಯಾಗಿದ್ದರೆ, ಮೊದಲ ಹಂತದ ಇ-ಬಸ್ ಕಾರ್ಯಾಚರಣೆಯನ್ನು ವಿರಾಜಪೇಟೆ, ಮಡಿಕೇರಿ, ಚಿಕ್ಕಮಗಳೂರು, ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಬೆಳಗಾವಿಯಂತಹ ನಗರಗಳಿಗೆ ಸಂಚಾರವನ್ನು ಆರಂಭಿಸಲಿದೆ.

ಮೂಲಗಳ ಪ್ರಕಾರ, ಕೆಎಸ್‌ಆರ್‌ಟಿಸಿ ನಿಯೋಜಿಸಿದ ಸಮೀಕ್ಷೆಯ ಪ್ರಕಾರ, ಬೆಂಗಳೂರು-ಮೈಸೂರು ಮಾರ್ಗದ ಸಂಭಾವ್ಯತೆ ಹೆಚ್ಚಿದ್ದು, ಪ್ರಯಾಣಿಕರು ಧ್ವನಿ ರಹಿತ ಹಾಗೂ ಪರಿಸರ ಮಾಲಿನ್ಯ ರಹಿತಿ ಪ್ರಯಾಣಕ್ಕೆ ಆದ್ಯತೆ ನೀಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಈಗ ಎರಡು ನಗರಗಳ ನಡುವಿನ 10-ಲೇನ್ ಎಕ್ಸ್‌ಪ್ರೆಸ್‌ವೇ ಮುಕ್ತಾಯದ ಹಂತದಲ್ಲಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಅನೇಕರು ಇತರ ಯಾವುದೇ ಪ್ರಯಾಣದ ವಿಧಾನಗಳಿಗಿಂತ ಎಲೆಕ್ಟ್ರಿಕ್ ಬಸ್‌ಗಳಿಗೆ ಆದ್ಯತೆ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

First E-Bus from Bangalore to Mysore: How many hours did it travel? Here is the information

ಬೆಂಗಳೂರಿನಲ್ಲಿ ಇ ಸೇವೆಗೆ ಸಾರಿಗೆ ಸಚಿವ ಶ್ರೀರಾಮುಲು ಚಾಲನೆ ನೀಡಿದ್ದಾರೆ. ಇ ಬಸ್‌ಗಳು ಸಂಚರಿಸುವ ಬೆಂಗಳೂರಿನ ಪ್ರಮುಖ ಮಾರ್ಗಗಳು ಇಲ್ಲಿವೆ.

ಕೆ ಆರ್ ಮಾರುಕಟ್ಟೆ-ಬಿಡದಿ (226M), ಕೆಂಪೇಗೌಡ ಬಸ್ ನಿಲ್ದಾಣ (KBS)-ಬಿಡದಿ (226N), KBS-ವಿದ್ಯಾರಣ್ಯಪುರ (276 ), ಶಿವಾಜಿನಗರ-ಯಲಹಂಕ (290E), ಅತ್ತಿಬೆಲೆ-ಹೊಸಕೋಟೆ (328H), KBS-ಅತ್ತಿಬೇಲೆ (KBS3A), KBS-ಅತ್ತಿಬೇಲೆ (KBS3A), KBS-ಯಲಹಂಕ ಸ್ಯಾಟಲೈಟ್ ಟೌನ್ (KBS360K40KE, 402B/402D), ಯಶವಂತಪುರ-ಕೆಂಗೇರಿ (401M), ಹೆಬ್ಬಾಳ-ಸೆಂಟ್ರಲ್ ಸಿಲ್ಕ್ ಬೋರ್ಡ್ (500D), ಅತ್ತಿಬೆಲೆ-ಹೆಬ್ಬಾಳ (500DH), ಹೆಬ್ಬಾಳ-ಕೆಂಗೇರಿ (501C), ಮತ್ತು ಬನಶಂಕರಿ- ಅತ್ತಿಬೇಲೆ (600F).

English summary
The first E bus from Bangalore arrived at the Mysore bus station. It left Bangalore at 6.45 am. It took just three hours to reach Mysore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X