ಕೊಡಗಿನ ನಿಡ್ತ ಮೀಸಲು ಅರಣ್ಯ ಬೆಂಕಿಗೆ ಆಹುತಿ

By: ಕೊಡಗು ಪ್ರತಿನಿಧಿ
Subscribe to Oneindia Kannada

ಕೊಡಗು, ಫೆಬ್ರವರಿ 23 : ಸೋಮವಾರಪೇಟೆ ಸಮೀಪದ ಶನಿವಾರಸಂತೆ ವ್ಯಾಪ್ತಿಯ ನಿಡ್ತ ಮೀಸಲು ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬೆಲೆ ಬಾಳುವ ಮರಗಳು, ಕೆಲವು ವನ್ಯ ಜೀವಿಗಳು ಸುಟ್ಟು ಕರಕಲಾಗಿವೆ.

ನಿಡ್ತ ಮೀಸಲು ಅರಣ್ಯದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಕುರುಚಲು ಕಾಡುಗಳು ಒಣಗಿ ನಿಂತಿರುವುದರಿಂದ ಬೆಂಕಿ ವೇಗವಾಗಿ ಇತರ ಪ್ರದೇಶಗಳಿಗೆ ಹಬ್ಬಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಸಣ್ಣಪುಟ್ಟ ಜೀವಿಗಳು ಭಸ್ಮವಾಗಿವೆ. ದೊಡ್ಡ ಪ್ರಾಣಿಗಳು ಸುರಕ್ಷಾ ಜಾಗವನ್ನು ಅರಸಿ ಓಡಿಹೋಗಿವೆ. [ಇಂದಿರಾ ಗಾಂಧಿ ಮೆಚ್ಚಿದ ಕೊಡಗಿನ ಪುಷ್ಪಲೋಕ]

kodagu

ಬೆಂಕಿಗೆ ಸಣ್ಣಪುಟ್ಟ ಗಿಡಗಳು ಉರಿದು ಹೋಗಿದ್ದರೆ, ದೊಡ್ಡ ಒಣ ಮರಗಳು ಭಾಗಶಃ ಸುಟ್ಟು ಕರಕಲಾಗಿವೆ. ಬೆಂಕಿ ತಗುಲಿದ ಕೆಲವೇ ಗಂಟೆಗಳಲ್ಲಿ ನೂರಾರು ಎಕರೆ ಪ್ರದೇಶಕ್ಕೆ ವ್ಯಾಪಿಸಿತು. ಅರಣ್ಯ ಸಿಬ್ಬಂದಿ ಹಸಿಸೊಪ್ಪನ್ನು ಹಿಡಿದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಆದರೆ, ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಗಲಿಲ್ಲ. [ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ : ಗಿರಿಜನರ ಕಣ್ಣೀರು]

ಅಗ್ನಿಶಾಮಕ ದಳ ಸಕಾಲಕ್ಕೆ ಬರಲಿಲ್ಲ : ಅರಣ್ಯಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರೂ ಅವರು ಸ್ಥಳಕ್ಕೆ ಸಕಾಲದಲ್ಲಿ ಬರಲಿಲ್ಲ. ಸೋಮವಾರಪೇಟೆ ಅಗ್ನಿಶಾಮಕ ಠಾಣೆಯಲ್ಲಿರುವ ವಾಹನ ಕೆಟ್ಟು ನಿಂತಿದ್ದು, ಕುಶಾಲನಗರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಮ್ಮನಾಗಿದ್ದಾರೆ. [ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ]

ಬೇಸಿಗೆ ಆರಂಭವಾಗಿದ್ದು, ಅಲ್ಲಲ್ಲಿ ಅರಣ್ಯ ಸೇರಿದಂತೆ ವಿವಿಧೆಡೆ ಅಗ್ನಿ ಅವಘಡ ಸಂಭವಿಸುತ್ತದೆ. ಆದ್ದರಿಂದ, ಜಿಲ್ಲಾಡಳಿತ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳನ್ನು ಸನ್ನದ್ಧವಾಗಿರುವಂತೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಇನ್ನಷ್ಟು ಅರಣ್ಯಗಳು ಬೆಂಕಿಗೆ ಆಹುತಿಯಾಗುತ್ತವೆ ಎನ್ನುತ್ತಾರೆ ಸ್ಥಳೀಯರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nidtha Forest, Somvarpet taluk Kodagu district turned to ashes after fire accident on Saturday, February 20th, 2016.
Please Wait while comments are loading...