ಕರ್ನಾಟಕದ ಹೆದ್ದಾರಿಗಳಲ್ಲಿ ರಾಂಗ್‌ ಸೈಡ್‌ ಎಂಟ್ರಿ ಕೊಟ್ಟರೆ ಎಫ್‌ಐಆರ್ ಬೀಳೋದು ಪಕ್ಕಾ: ಪೊಲೀಸರ ಎಚ್ಚರಿಕೆ ಏನು? ವರದಿ, ವಿವರ

ಬೆಂಗಳೂರು, ಸೆಪ್ಟೆಂಬರ್‌ 05: ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಂಗ್‌ ಸೈಡ್‌ ಎಂಟ್ರಿ ಕೊಟ್ಟರೆ ಎಫ್‌ಐಆರ್‌ ಬೀಳೋದು ಪಕ್ಕಾ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ರಾಂಗ್‌ ಸೈಡ್‌ ಎಂಟ್ರಿ ಕೊಟ್ಟವರಿಂದ ಅಪಘಾತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಜರುಗಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಂಗ್‌ ಸೈಡ್‌ನಲ್ಲಿ ವಾಹನ ಚಾಲನೆ ಮಾಡುವವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ.

national-highways-in-karnataka

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಿಸುವ ವಿಡಿಯೊವೊಂದನ್ನು ಟ್ವೀಟಿಗರೊಬ್ಬರು ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಕುಮಾರ್‌, 'ತಪ್ಪು ದಾರಿಯಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಸವಾರರ ಮೇಲೆ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಅವರ ಡ್ರೈವಿಂಗ್‌ ಲೈಸನ್ಸ್‌ ಅನ್ನು ಅಮಾನತುಗೊಳಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ಮುಂದೆ, ರಾಷ್ಟ್ರೀಯ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ ಮತ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ' ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಯಾರಾದರೂ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದರೆ ಚಾಲನಾ ಪರವಾನಗಿ ( ಡ್ರೈವಿಂಗ್‌ ಲೈಸನ್ಸ್‌ ) ರದ್ದುಪಡಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ವರದಿಯಾದ ರಸ್ತೆ ಅಪಘಾತಗಳ ಸಂಖ್ಯೆ ಆಗಸ್ಟ್ ತಿಂಗಳಲ್ಲಿ ಕಡಿಮೆಯಾಗಿದೆ ಎಂದು ಪೊಲೀಸರು ಹಂಚಿಕೊಂಡ ಅಂಕಿಅಂಶಗಳು ತಿಳಿಸಿವೆ.

national-highways-in-karnataka

ಈ ಕುರಿತು ಟ್ವೀಟ್‌ ಮಾಡಿರುವ ಅಲೋಕ್‌ ಕುಮಾರ್‌, 'ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಸಾವುನೋವುಗಳನ್ನು ಕಡಿಮೆ ಮಾಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಸಾವಿನ ಸಂಖ್ಯೆ- ಮೇ - 29, ಜೂನ್ - 28, ಜುಲೈ - 8, ಆಗಸ್ಟ್-6 ಸಾವುಗಳು ಸಂಭವಿಸಿವೆ' ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಿನಲ್ಲಿ ರಸ್ತೆ ಅಪಘಾತಗಳಿಂದಾಗಿ ಒಟ್ಟು 795 ಸಾವುಗಳು ದಾಖಲಾಗಿವೆ. ಮೇ ತಿಂಗಳಲ್ಲಿ ಒಟ್ಟು 1094 ಮಾರಣಾಂತಿಕ ರಸ್ತೆ ಅಪಘಾತಗಳು ದಾಖಲಾಗಿದ್ದರೆ. ಜೂನ್ ಮತ್ತು ಜುಲೈನಲ್ಲಿ ಈ ಸಂಖ್ಯೆ 965 ಮತ್ತು 807 ರಷ್ಟಿದೆ.

ಕರ್ನಾಟಕದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಹೆಚ್ಚು ಸಾವಿಗೀಡಾಗುವವರೆಂದರೆ ಬೈಕ್‌ ಸವಾರರು. ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ 60 ರಷ್ಟು ಮಂದಿ ಬೈಕ್ ಸವಾರರು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+