Elephants Survey 2023: ಮೈಸೂರು-ಚಾಮರಾಜನಗರದಲ್ಲೇ ಯಾಕೆ ಆನೆಗಳ ಸಂಖ್ಯೆ ಅಧಿಕ, ಕಾರಣ?
ಬೆಂಗಳೂರು, ಆಗಸ್ಟ್ 10: ಕರ್ನಾಟಕ ರಾಜ್ಯವು ಆನೆಗಳ ವಿಚಾರದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಈ ಪೈಕಿ ಚಾಮರಾಜನಗರ, ಮೈಸೂರು ಜಿಲ್ಲೆಗಳ ಭಾಗದಲ್ಲಿಯೇ ಏಕೆ ಹೆಚ್ಚು ಆನೆಗಳು ವಾಸಿಸುತ್ತಿವೆ?. ರಾಜ್ಯದ ಆನೆಗಳ ಕೊಡುಗೆಯಲ್ಲಿ ಈ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪಾತ್ರವೇ ಶೇಕಡಾ 50ರಷ್ಟಿದೆ ಎಂದು ಸರ್ಕಾರ ದೃಢಪಡಿಸಿದೆ. ಹಾಗಾದರೆ ಈ ಎರಡು ಪ್ರದೇಶಗಳಲ್ಲಿ ಆನೆಗಳು ಹೆಚ್ಚಾಗಿರಲು ಕಾರಣ ಇಲ್ಲಿ ತಿಳಿಯಬಹುದು.
ಕರ್ನಾಟಕದಲ್ಲಿ ಒಟ್ಟು 6,395 ಆನೆಗಳಿದ್ದು, ಪ್ರಸಕ್ತ ಒಂದೇ ವರ್ಷದಲ್ಲಿ 346 ರಷ್ಟು ಆನೆಗಳು ಹೆಚ್ಚಾಗಿವೆ. ಒಟ್ಟು ಆಗನೆಗಳಲ್ಲಿ ಅರ್ಧದಷ್ಟು ಆನೆಗಳು ದಕ್ಷಿಣ ಒಳನಾಡಿನ ಚಾಮರಾಜನಗರ ಮತ್ತು ಮೈಸೂರಿನ ಎರಡು ಜಿಲ್ಲೆಗಳಲ್ಲಿ ಕಂಡು ಬಂದಿವೆ. ಕಳೆದ ಮೇ ತಿಂಗಳಲ್ಲಿ ಆನೆಗಳ ಅಂದಾಜು ಸಮೀಕ್ಷೆ ಆರಂಭವಾಗಿತ್ತು. ಇದರ ಪ್ರಕಾರ ಎರಡು ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಎರಡು ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿರುವ ಚಾಮರಾಜನಗರವು 2,441 ಆನೆಗಳನ್ನು ಹೊಂದಿದೆ. ಇದರ ಪಕ್ಕ ಜಿಲ್ಲೆಯಾದ ಸೂರು ಜಿಲ್ಲೆಯಲ್ಲಿ 831 ಜಂಬೋಗಳಿವೆ ಎಂದು ಸರ್ಕಾರ ಅಧಿಕೃತಪಡಿಸಿದೆ.

ಇಲ್ಲಿ ಆನೆಗಳು ಹೆಚ್ಚಿರಲು ಕಾರಣ
ಕರ್ನಾಟಕದ ಪಶ್ಚಿಮ ಘಟ್ಟವು ಸುಮಾರು 44,000 ಚದರ ಕಿಲೋ ಮೀಟರ್ ವ್ಯಾಪಿಸಿದೆ. ಇಷ್ಟು ದಟ್ಟ ಅರಣ್ಯ ಪೈಕಿ ದಕ್ಷಿಣ ಒಳನಾಡಿನ ಈ ಭಾಗದಲ್ಲಿ ಆನೆಗಳು ಹೆಚ್ಚಿರಲು ಇಲ್ಲಿ ಭೌಗೋಳಿಕತೆಯು ಒಂದು ಕಾರಣ ಎನ್ನಲಾಗುತ್ತಿದೆ. ಅಂದರೆ ಈ ಎರಡು ಜಿಲ್ಲೆಗಳಲ್ಲಿ ಹೆಚ್ಚಿನ ಜನಸಂಖ್ಯೆ ಜೊತೆಗೆ ಅರಣ್ಯ ಸಂಪನ್ಮೂಲ ಹೆಚ್ಚಿದೆ, ಹೆಚ್ಚು ಸಮೃದ್ಧ ಅರಣ್ಯ ಪ್ರದೇಶ ಇಲ್ಲಿದ. ಈ ಕಾರಣದಿಂದ ಇಲ್ಲಿ ಅಧಿಕ ಜಂಬೋಗಳು ವಾಸಿಸುತ್ತವೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಮಾಹಿತಿ ನೀಡಿದ್ದಾರೆ.
ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ವಿಲೀನದಲ್ಲಿ ಸಾಕಷ್ಟು ಹೂವಿನ ವೈವಿಧ್ಯತೆಗಳ ನೆಲೆಬೀಡಾಗಿದೆ. ಇದು ಆನೆಗಳ ಬೆಳವಣಿಗೆಗೆ ಪ್ರಮುಖ ನಿರ್ಣಾಯಕವಾಗಿದೆ. ಇಲ್ಲಿ ಮೇವಿನ ಹೇರಳ ಲಭ್ಯತೆ ಇರುವ ಜೊತೆಗೆ ಮುಖ್ಯವಾಗಿ ನೀರಿನ (ಜಲ) ಮೂಲಗಳು, ತೊರೆಗಳು ಮತ್ತು ನದಿಗಳು ಹೆಚ್ಚಾಗಿ ಕಂಡು ಬರುತ್ತವೆ. ಜಲ-ಆಹಾರ ಸಹಿತ ವಿಶಾಲ ಅರಣ್ಯ ಭೂಮಿ ಇರುವ ಹಿನ್ನೆಲೆಯಲ್ಲಿ ಇದು ಆನೆಗಳ ವಾಸಸ್ಥಾನಯೋಗ್ಯವಾಗಿದೆ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ.
ಆನೆ ವಿಭಾಗಗಳು 32ಕ್ಕೆ ಇಳಿಕೆ
ಈ ಹಿಂದೆ 2017 ರಲ್ಲಿ ಮಾಡಲಾದ ಗಣತಿ ಪ್ರಕಾರ, ಕರ್ನಾಟಕದಲ್ಲಿ ಆನೆಗಳು ಎಲ್ಲ 34 ಅರಣ್ಯ ವಿಭಾಗಗಳಲ್ಲಿ ವಾಸಿಸುತ್ತವೆ ಎಂದು ತಿಳಿದು ಬಂದಿತ್ತು. ಆದರೆ 2023ರಲ್ಲಿ ಆನೆಗಳ ವಿಭಾಗಗಳನ್ನು 32ಕ್ಕೆ ಇಳಿಕೆ ಮಾಡಲಾಯಿತು. ಆನೆಗಳ ಸಂಖ್ಯೆ ಆಧಾರದಲ್ಲಿ ತುಮಕೂರು ಮತ್ತು ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗಗಳು ಸಮೀಕ್ಷೆಯ ಭಾಗವಾಗಿ ಮಾಡಲಿಲ್ಲ.

ಸದ್ಯ ಮಾಡಿರುವ 32 ವಿಭಾಗಗಳ ಪೈಕಿ ರಾಜ್ಯ ಅರಣ್ಯ ಅಧಿಕಾರಿಗಳು 23ರಲ್ಲಿ ಸ್ವತಃ ನೇರವಾಗಿ ಖದ್ದು ಆನೆಗಳ ದಾಖಲಾತಿ ಮಾಡಿದ್ದಾರೆ. ಆದರೆ ಹೆಚ್ಚಿನ ಆನೆಗಳು ಇವೆ ಎಂಬುದು ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಬಂಡೀಪುರ ನಾಗರಹೊಳೆ-ಬಿಆರ್ ಹಿಲ್ಸ್-ಎಂಎಂ ಹಿಲ್ಸ್ ಸಂರಕ್ಷಿತ ಪ್ರದೇಶಗಳ ದಾಖಲಾತಿಯಿಂದ ತಿಳಿದು ಬಂದಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು












Click it and Unblock the Notifications