ನಿಮ್ಮ ಪ್ರೀತಿಪಾತ್ರರಿಗೆ ಅಂತಿಮ ವಿದಾಯ ಹೇಳಬಯಸುತ್ತೀರಾ? ಒನ್ಇಂಡಿಯಾ ಮೂಲಕ ಗೌರವ ಸಲ್ಲಿಸಲು ಇಲ್ಲಿದೆ ಅವಕಾಶ
ನಮ್ಮ ಪ್ರೀತಿಪಾತ್ರರಿಗೆ ಮತ್ತು ಆತ್ಮೀಯರಿಗೆ ಅಂತಿಮ ವಿದಾಯ ಹೇಳುವುದು ಎಂದಿಗೂ ಸುಲಭವಲ್ಲ. ಜೀವನದ ಕರಾಳ ಅಧ್ಯಾಯವದು. ಜೀವನದ ಅತ್ಯಂತ ಆಳವಾದ ದುಃಖಗಳಲ್ಲೊಂದು. ಆತ್ಮೀಯರ ನೆನಪು - ಅವರೊಂದಿಗೆ ಕಳೆದ ಕ್ಷಣಗಳು ನಾವು ಇರುವ ವರೆಗೂ ನಮ್ಮನ್ನು ಕಾಡುತ್ತಲ್ಲೇ ಇರುತ್ತದೆ. ಅವರ ನೆನಪುಗಳು ಸದಾ ಹಸಿರಾಗಿರುತ್ತವೆ. ಪ್ರತಿಯೊಬ್ಬರ ಅಂತಿಮ ವಿದಾಯವನ್ನು ಪ್ರೀತಿ, ಗೌರವ ಮತ್ತು ಕಾಳಜಿಯಿಂದ ಸ್ಮರಿಸಿಕೊಳ್ಳಬೇಕು ಎನ್ನುವುದನ್ನು ಒನ್‌ಇಂಡಿಯಾ ಸಂಸ್ಥೆಯು ನಂಬುತ್ತದೆ
ವಿದಾಯದ ನೋವಿನ ಸಂದರ್ಭದಲ್ಲಿ ಕುಟುಂಬಗಳಿಗೆ ಜೊತೆ ನಿಲ್ಲಲು, ನಮ್ಮನ್ನು ಅಗಲಿದವರ ನೆನಪುಗಳನ್ನು ಗೌರವಿಸಲು ನಾವು ಅರ್ಥಪೂರ್ಣ ಮಾರ್ಗವನ್ನು ಕಂಡುಕೊಂಡಿದ್ದೇವೆ. ನಮ್ಮ ಆನ್‌ಲೈನ್ ನಿಧನ ವಾರ್ತೆ ಹಾಗೂ ಸ್ಮರಣೆ ವಿಭಾಗವು ಇದೀಗ ಒನ್‌ಇಂಡಿಯಾ ಕನ್ನಡ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಈಗ ನೀವು ಅಗಲಿದವರಿಗೆ ಗೌರವ ಸಲ್ಲಿಸಬಹುದು ಮತ್ತು ನಿಮ್ಮ ಮಾತೃಭಾಷೆಯಲ್ಲಿ ಅವರ ನೆನಪುಗಳು ಹಾಗೂ ಸ್ಮರಣೆಯನ್ನು ಹಂಚಿಕೊಳ್ಳಬಹುದು. ನೀವು ಅಗಲಿದವರ ನೆನಪುಗಳನ್ನು ಹಂಚಿಕೊಳ್ಳಲು, ಅಂತಿಮ ವಿಧಿಗಳ ಬಗ್ಗೆ ತಿಳಿಸಲು ಅಥವಾ ಸಂಬಂಧಿಕರು, ಸ್ನೇಹಿತರಿಗೆ ಅಂತಿಮ ವಿದಾಯದ ಬಗ್ಗೆ ತಿಳಿಸಲು ಬಯಸುತ್ತೀರಾ? ಹಾಗಾದರೆ ನೀವು ಈಗ ಯಾವುದೇ ಪ್ರದೇಶದಲ್ಲಿದ್ದರೂ OneIndiaದ ಮೂಲಕ ಅದನ್ನು ಸುಲಭವಾಗಿ ಮಾಡಬಹುದು. ಕೆಲವೇ ನಿಮಿಷಗಳಲ್ಲಿ, ನಿಮ್ಮ ಪ್ರೀತಿಪಾತ್ರರ ಜೀವನ, ಅವರೊಂದಿಗಿನ ವಿಶೇಷ ಅನುಭವ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳಬಹುದು.
ನೀವು ಮಾಡಬೇಕಿರುವುದು ಇಷ್ಟೇ
ಗೌರವಯುತ ನಿಧನ ವಾರ್ತೆಯನ್ನು ಹಂಚಿಕೊಳ್ಳಲು ದಯವಿಟ್ಟು ಈ ಕೆಳಗಿನ ವಿವರಗಳನ್ನು ಗಮನದಲ್ಲಿರಿಸಿಕೊಳ್ಳಿ
ಕಡ್ಡಾಯ: ಮೊದಲ ಹೆಸರು, ಕೊನೆಯ ಹೆಸರು, ದಿನಾಂಕ ಮತ್ತು ಮೃತಪಟ್ಟ ಸ್ಥಳ, ರಾಜ್ಯ / ಪ್ರದೇಶ
ಐಚ್ಛಿಕ: ಹುಟ್ಟಿದ ದಿನಾಂಕ, ಹುಟ್ಟಿದ ಸ್ಥಳ, ಧರ್ಮ, ಕುಟುಂಬ ಮಾಹಿತಿ (ಪೋಷಕರು, ಸಂಗಾತಿ, ಮಕ್ಕಳು), ಶಿಕ್ಷಣ ಮತ್ತು ವೃತ್ತಿ
ಮೃತಪಟ್ಟವರ ಪ್ರೊಫೈಲ್ ಫೋಟೋ ಅಗತ್ಯವಿದೆ
ನೀವು ಹೆಚ್ಚಿನ ವಿವರಗಳನ್ನು ಒದಗಿಸಿದಷ್ಟೂ, ಗೌರವವು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.
ಗೌರವ ಸಲ್ಲಿಸುವುದು ಹೇಗೆ?
oneindia.com ಗೆ ಭೇಟಿ ನೀಡಿ
ನಿಧನ ವಾರ್ತೆ ವಿಭಾಗಕ್ಕೆ ತೆರಳಿ
ಅಗತ್ಯವಿರುವ ವಿವರಗಳನ್ನು ತುಂಬಲು ಸರಳ ಸ್ವ-ಸಹಾಯ ಫಾರ್ಮ್ ಬಳಸಿ
ಥೀಮ್‌ಗಳು, ಮ್ಯುಸಿಕ್, ಫೋಟೋಗಳನ್ನು ನಿಧನ ವಾರ್ತೆಯೊಂದಿಗೆ ಸಂಯೋಜಿಸಿ
ಆಚರಣೆಗಳು, ಅಂತ್ಯ ಸಂಸ್ಕಾರ ಪ್ರಕ್ರಿಯೆ ಅಥವಾ ಅಂತಿಮ ವಿದಾಯಕ್ಕೆ ಸಂಬಂಧಿಸಿದ ಫೋಟೋಗಳು, ವೀಡಿಯೊಗಳು ಹಾಗೂ ಆಹ್ವಾನಗಳನ್ನು ಸೇರಿಸಿ
ಮುಂದುವರಿದು ಸಂದೇಶವನ್ನು ನೀವೆ ಪ್ರಕಟಿಸಿ
ಗೌರವಯುತ ವಿದಾಯ: ಈ ಉಚಿತ ಮತ್ತು ಬಳಸಲು ಸುಲಭವಾಗಿರುವ ಸೇವೆಯು ನಗರಗಳು, ರಾಜ್ಯಗಳು ಮತ್ತು ವಿವಿಧ ದೇಶಗಳಲ್ಲಿ ನೆಲೆಸಿರುವ ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ. ಅರ್ಥಪೂರ್ಣ ಹಾಗೂ ಗೌರವಯುತ ವಿದಾಯದ ಸಂದೇಶದೊಂದಿಗೆ.
ನಿಮ್ಮ ಪ್ರೀತಿಪಾತ್ರರನ್ನು ಗೌರವದಿಂದ ಹಾಗೂ ಅವರ ನೆನಪುಗಳನ್ನು ಹಂಚಿಕೊಳ್ಳಲು ಒನ್‌ಇಂಡಿಯಾ ವೇದಿಕೆ ಕಲ್ಪಿಸಿದೆ.












Click it and Unblock the Notifications