Festival Special Trains: ಮಲೆನಾಡು-ಉತ್ತರ ಕರ್ನಾಟಕಕ್ಕೆ ಹಬ್ಬದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ

ಬೆಂಗಳೂರು; ಗೌರಿ ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ಸಾರಿಗೆ ಇಲಾಖೆ, ರೈಲ್ವೆ ಇಲಾಖೆಗಳಿಂದ ವಿಶೇಷ ಬಸ್ ರೈಲುಗಳನ್ನು ಬಿಡಲಾಗುತ್ತಿದೆ. ಹಬ್ಬದ ವೇಳೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯದ ವತಿಯಿಂದ ವಿಶೇಷ ರೈಲ್ವೆ ಸೇವೆ ಆರಂಭಿಸಲಾಗಿದೆ. ಎಲ್ಲಿಂದ ಎಲ್ಲಿಗೆ, ವೇಳಾಪಟ್ಟಿ, ಸಮಯ, ಮಾರ್ಗ ಮತ್ತು ನಿಲುಗಡೆ ನಿಲ್ದಾಣಗಳ ವಿವರ ಇಲ್ಲಿದೆ.

ಚೌತಿ, ದಸರಾ ಸೇರಿದಂತೆ ವಿವಿಧ ಹಬ್ಬಗಳು ಎದುರಾಗುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಣೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ- ಚಿಕ್ಕಮಗಳೂರು ಮಧ್ಯ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. 2026 ಸೆಪ್ಟಂಬರ್ 05 ರಿಂದ ಸೆಪ್ಟಂಬರ್ 27 ಒಟ್ಟು ಎಂಟು ಟ್ರಿಪ್ ಮತ್ತು ಅಕ್ಟೋಬರ್ 03 ರಿಂದ ಅಕ್ಟೋಬರ್ 31 ರವರೆಗೆ ಒಟ್ಟು 9 ಟ್ರಿಪ್‌ ಸೇವೆಗಳು ಲಭ್ಯವಾಗಲಿವೆ. ಈ ನಿಗದಿತ ಅವಧಿಯಲ್ಲಿ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ಕಾರ್ಯಾಚರಣೆ ನಡೆಸಲಿವೆ.

Festival Special Trains Run By SWR inbetween SSS Hubballi-Chikkamagaluru Routes is here Schedule

ವಿಶೇಷ ರೈಲುಗಳ ವೇಳಾಪಟ್ಟಿ

* ಎಸ್‌ಎಸ್‌ಎಸ್ ಹುಬ್ಬಳ್ಳಿ -ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (07341) ಹುಬ್ಬಳ್ಳಿ ಜಂಕ್ಷನ್‌ನಿಂದ ಬೆಳಗ್ಗೆ 05:00 ಗಂಟೆಗೆ ಹೊರಡುತ್ತದೆ. ಅದೇ ದಿನ ಬೆಳಗ್ಗೆ 11:15ಕ್ಕೆ ಮಲೆನಾಡಿನ ಚಿಕ್ಕಮಗಳೂರು ನಿಲ್ದಾಣವನ್ನು ತಲುಪುತ್ತದೆ.

ನಿಲುಗಡೆ ನಿಲ್ದಾಣಗಳು

ಹುಬ್ಬಳ್ಳಿಯಿಂದ ಹೊರಡುವ ಚಿಕ್ಕಮಗಳೂರು ಈ ರೈಲು ಕುಂದಗೋಳ ನಿಲ್ದಾಣಕ್ಕೆ 05:13ಕ್ಕೆ ಆಗಮಿಸಿ 05:14 ನಿರ್ಗಮಿಸುತ್ತದೆ. ಇದೇ ರೀತಿ ಕ್ರಮವಾಗಿ ಸೌಂಶಿ (05:23/05:24ಗಂಟೆಗೆ), ಯಲವಿಗಿ (05:52/05:53ಕ್ಕೆ), ಎಸ್‌ಎಮ್‌ಎಮ್ ಹಾವೇರಿ (06:40/06:42), ಬ್ಯಾಡಗಿ (06:51/06:52), ರಾಣೆಬೆನ್ನೂರು (07:18/07:20), ಹರಿಹರ (07:45/07:55) ನಿಲುಗಡೆ ನೀಡುತ್ತದೆ.

ಬಳಿಕ ದಾವಣಗೆರೆ ನಿಲ್ದಾಣಕ್ಕೆ (08:10/08:12), ಚಿಕ್ಕಜಾಜೂರು (08:50/08:52), ರಾಮಗಿರಿ (09:08/09:10), ಅಜ್ಜಂಪುರ (09:35/09:37), ಬೀರೂರು (09:53/09:55), ಕಡೂರು (10:05/10:07), ಬಿಸಲೆಹಳ್ಳಿ (10:16/10:17), ಸಖರಾಯಪಟ್ಟಣ (10:27/10:28) ಹಾಗೂ ಕಣಿವೆಹಳ್ಳಿ (10:42/10:43) ಯಲ್ಲಿ ನಿಲುಗಡೆ ನೀಡುತ್ತದೆ.

ಇನ್ನೂ ಚಿಕ್ಕಮಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು (07342) ಚಿಕ್ಕಮಗಳೂರಿಂದ ಸಂಜೆ 17:30 (5:30) ಗಂಟೆಗೆ ಹೊರಟು ಅದೇ ದಿನ ರಾತ್ರಿ 23:20 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್‌ಗೆ ಬರುತ್ತದೆ.

ಚಿಕ್ಕಮಗಳೂರಿನಿಂದ ಕಣಿವೆಹಳ್ಳಿ 17:43ಕ್ಕೆ ಆಗಮಿಸಿ 17:45 ನಿರ್ಗಮಿಸುತ್ತದೆ. ಅದೇ ರೀತಿ ಕ್ರಮ ಸಖರಾಯಪಟ್ಟಣ (18:04/18:05), ಬಿಸಲೆಹಳ್ಳಿ (18:16/18:18), ಕಡೂರು (18:28/18:30), ಬೀರೂರು (18:40/18:42), ಅಜ್ಜಂಪುರ (18:56/18:57), ರಾಮಗಿರಿ (19:21/19:23), ಮತ್ತು ಚಿಕ್ಕಜಾಜೂರು (19:45/19:47) ಮಾರ್ಗವಾಗಿ ದಾವಣಗೆರೆ ನಿಲ್ದಾಣಕ್ಕೆ (20:23/20:25), ಹರಿಹರ (20:35/20:45), ರಾಣೇಬೆನ್ನೂರು (21:06/21:08), ಬ್ಯಾಡಗಿ (21:21/21:22), ಹಾವೇರಿ (21:36/21:38), ಯಲವಿಗಿ (22:10/22:12), ಸೌಂಶಿ (22:34/22:35) ಮತ್ತು ಕುಂದಗೋಳ ನಿಲ್ದಾಣಕ್ಕೆ (22:44/22:45) ನಿಲುಗಡೆ ನೀಡುತ್ತದೆ. ಗಿ ರಾತ್ರಿ 23:20 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣವನ್ನು ತಲುಪುತ್ತದೆ.

ಈ ರೈಲುಗಳ ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ರೈಲ್ವೆ ಇಲಾಖೆ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು, ಇಲ್ಲವೇ IRCTC ಇಲ್ಲವೇ NTES ಆ್ಯಪ್ ಮೂಲಕ ಮಾಹಿತಿ ಪಡೆಯಬಹುದು. ಇಲ್ಲವೇ 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+