Train Alert: ಬೆಂಗಳೂರಿನಿಂದ ಹೊರಡುವ ದೂರ ಮಾರ್ಗದ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದು
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖ ನಿಲ್ದಾಣ, ಜಂಕ್ಷನ್‌ಗಳನ್ನು ಹೊಂದಿರುವ ರಾಜ್ಯದ ಬೆಂಗಳೂರಿನಿಂದ ಈಶಾನ್ಯ ರೈಲ್ವೆ ಮತ್ತು ಉತ್ತರ ಮಧ್ಯ ರೈಲ್ವೆ ವಲಯದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಚಕ್ರಧರಪುರ ವಿಭಾಗದ ಮೇಲೆ ಬೊಂಡಮುಂಡ ಡಿ-ಕ್ಯಾಬಿನ್ ಮತ್ತು ರೂರ್ಕೆಲಾ ವಿಭಾಗದ ನಡುವೆ ರೈಲು ಮಾರ್ಗದ ಯಾರ್ಡ್ ಬದಲಾವಣೆ ಹಾಗೂ ಇತರ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ವೇಳೆ ಬೊಂಡಮುಂಡ ಡಿ ಕ್ಯಾಬಿನ್‌ನಲ್ಲಿ ಸುರಕ್ಷತೆ, ಸಿಗ್ನಲಿಂಗ್ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಸಂಬಂಧಿತ ಕೆಲಸಗಳು ನಡೆಯಲಿದ್ದು, ವಿವಿಧ ರೈಲುಗಳ ಸಂಆರವನ್ನು ರದ್ದುಗೊಳಿಸಲಾಗಿದೆ ಎಂದು ಆಗ್ನೇಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರದ್ದುಗೊಂಡ ರೈಲುಗಳ ಪಟ್ಟಿ ಇಲ್ಲಿದೆ
* 2026 ಅಕ್ಟೋಬರ್ 13 ರಂದು ಪ್ರಾರಂಭವಾಗುವ ಹತಿಯಾ-SMVT ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12835) ಪ್ರಯಾಣ ತಾತ್ಕಾಲಿಕವಾಗಿ ರದ್ದುಗೊಂಡಿದೆ.
* 2026 ಅಕ್ಟೋಬರ್ 15 ರಂದು ಪ್ರಾರಂಭವಾಗುವ SMVT ಬೆಂಗಳೂರು-ಹತಿಯಾ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12836) ಪ್ರಯಾಣವು ಸಹ ರದ್ದಾಗಿದೆ.
ಈಶಾನ್ಯ ರೈಲ್ವೆ ವ್ಯಾಪ್ತಿಯ ಲಲ್ಕುವಾನ್ ಜಂಕ್ಷನ್-ಕೆಎಸ್‌ಆರ್ ಬೆಂಗಳೂರು-ಲಾಲ್ಕುವಾನ್ ಜಂ. ರೈಲುಗಳು (ಈ ಸಂಖ್ಯೆಯ 05074/05073) ಸಂಚಾರ ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ರೈಲಿನ ಸೇವೆಯನ್ನು ಕ್ರಮಬದ್ಧಗೊಳಿಸಲಾಗಿದ್ದು, ಈಗ ನಿಯಮಿತ ರೈಲುಗಳು ಈ 15302/15301 ಸಂಖ್ಯೆ ಅಡಿಯಲ್ಲಿ ಚಲಿಸಲಿವೆ.
* 2026 ಸೆಪ್ಟಂಬರ್ 19ರಂದು ಪ್ರಯಾಣ ಆರಂಭಿಸಬೇಕಿದ್ದ ಲಾಲ್ಕುವಾನ್-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ರೈಲು (05074) ರದ್ದುಗೊಳ್ಳುತ್ತದೆ.
2. 2026 ಸೆಪ್ಟಂಬರ್ 22ರಂದು ಸಂಚಾರ ಆರಂಭಿಸಲಿದ್ದ ಕೆಎಸ್‌ಆರ್ ಬೆಂಗಳೂರು-ಲಾಲ್ಕುವಾನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (05073) ರದ್ದುಗೊಳಿಸಲಾಗಿದೆ.
ಉತ್ತರ ಮಧ್ಯ ರೈಲ್ವೆ ಕಾಮಗಾರಿ
ಇನ್ನೂ ಉತ್ತರ ಮಧ್ಯ ರೈಲ್ವೆಯಿಂದ ಅಗಸೋಡ್-ಬಿನಾ ನಿಲ್ದಾಣಗಳ ನಡುವೆ ಬರುವ 3 ನೇ ಮಾರ್ಗದ ಸಂಪರ್ಕಕ್ಕೆ ಸಂಬಂಧಿಸಿದಂತೆ ಬಿನಾ ಯಾರ್ಡ್ ನವೀಕರಣ ಕಾರ್ಯ ನಡೆಯುತ್ತಿದೆ. ಹೀಗಾಗಿ ಪಶ್ಚಿಮ ಮಧ್ಯ ರೈಲ್ವೆ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸುವುದಾಗಿ ಮತ್ತು ಬಿನಾ ನಿಲ್ದಾಣದಲ್ಲಿ ರೈಲು ( 11086) ನಿಲುಗಡೆ ಸಮಯ ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಇದೆಲ್ಲದರ ವಿವರ ಮುಂದಿದೆ.
* 2026 ಅಕ್ಟೋಬರ್ 02 ಮತ್ತು ಅಕ್ಟೋಬರ್ 09 ರಂದು ಪ್ರಾರಂಭವಾಗುವ ಗ್ವಾಲಿಯರ್-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ರೈಲು 11086) ಪ್ರಯಾಣವು ಸಹ ಮುಂದಿನ ಆದೇಶದವರೆಗೆ ರದ್ದುಗೊಂಡಿದೆ.
* 2026 ಅಕ್ಟೋಬರ್ 04 ಮತ್ತು 2026 ಅಕ್ಟೋಬರ್ 11 ರಂದು ಪ್ರಾರಂಭವಾಗುವ SMVT ಬೆಂಗಳೂರು-ಗ್ವಾಲಿಯರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (11085) ಪ್ರಯಾಣವನ್ನು ಸಹ ರದ್ದುಗೊಳಿಸಲಾಗಿದೆ.
* ಅದೇ ರೀತಿ ಸೆಪ್ಟಂಬರ್ 2026 23ರಿಂದ ಶುರುವಾಗುವ ರೈಲು (11086) ಗ್ವಾಲಿಯರ್-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (11086) ಬಿನಾ ನಿಲ್ದಾಣದಲ್ಲಿ ನಿಲುಗಡೆ ಅವಧಿಯನ್ನು 10 ನಿಮಿಷಗಳಿಂದ 2 ನಿಮಿಷಗಳಿಗೆ ಇಳಿಸಲಾಗಿದೆ. ರೈಲು ಪ್ರಯಾಣಿಕರು ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ಸಮಯ ಕಡಿತ ಗಮನಿಸಿ ಸಂಚಾರ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications
