ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಪಿ ಪೊಲೀಸರು ಹೊಟ್ಟೆ ಕರಗಿಸುವಂತೆ ಸುತ್ತೋಲೆ!

By Gururaj
|
Google Oneindia Kannada News

ಬೆಂಗಳೂರು, ಜುಲೈ 08 : ಡೊಳ್ಳು ಹೊಟ್ಟೆ ಪೊಲೀಸರಿಗೆ ಹೊಟ್ಟೆ ಕರಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೌದು, ಕೆಎಸ್ಆರ್‌ಪಿಯಲ್ಲಿನ ಪೊಲೀಸರು ಹೊಟ್ಟೆಯನ್ನು ಕರಗಿಸಬೇಕು ಇಲ್ಲವಾದಲ್ಲಿ ಕ್ರಮಮ ಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

ಕೆಎಸ್ಆರ್‌ಪಿ ಎಡಿಜಿಪಿ ಭಾಸ್ಕರರಾವ್ ಅವರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಡೊಳ್ಳು ಹೊಟ್ಟೆಯಿಂದಾಗಿ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ, ಹೊಟ್ಟೆ ಕರಗಿಸಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಪೊಲೀಸರಿಗೆ ಜುಲೈ 3ರಂದು ಸುತ್ತೋಲೆ ಹೊರಡಿಸಲಾಗಿದೆ.

ಬಿಎಸ್ಎಫ್‌ನಲ್ಲಿ 207 ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನಬಿಎಸ್ಎಫ್‌ನಲ್ಲಿ 207 ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಕೆಎಸ್ಆರ್‌ಪಿಯಲ್ಲಿರುವ ಎಲ್ಲಾ ಪೊಲೀಸರು ತೂಕ, ಎತ್ತರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡೊಳ್ಳು ಹೊಟ್ಟೆ ಹೊಂದಿರುವ ಪೊಲೀಸರು ನಿಗದಿತ ಕಾಲಾವಧಿಯಲ್ಲಿ ಹೊಟ್ಟೆ ಕರಗಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗಿದೆ.

Fat police officers should lose weight

ಬದಲಾಗುತ್ತಿರುವ ಜೀವನ ಶೈಲಿ, ಕಡಿಮೆ ದೈಹಿಕ ಚಟುವಟಿಕೆಯ ಕಾರಣ ಕೆಎಆರ್‌ಪಿಯ ಸಿಬ್ಬಂದಿಗಳ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಆದ್ದರಿಂದ, ಎಲ್ಲಾ ಪೊಲೀಸರಿಗೆ ಹೊಟ್ಟೆ ಕರಗಿಸಿಕೊಂಡು ಆರೋಗ್ಯಯುತವಾಗಿ ಇರಲು ಸಲಹೆ ನೀಡಲಾಗಿದೆ.

ಕೆಎಸ್ಆರ್‌ಪಿಯಡಿ 12 ಪಡೆಗಳಿವೆ, ಈಗ ಸಿಬ್ಬಂದಿಯ ಎತ್ತರ, ತೂಕದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಡೊಳ್ಳು ಹೊಟ್ಟೆ ಹೊಂದಿರುವ ಪೊಲೀಸರಿಗೆ ಹೊಟ್ಟೆ ಕರಗಿಸಲು ಕಾಲಾವಕಾಶ ನೀಡಲಾಗುತ್ತದೆ. ಅಷ್ಟರಲ್ಲಿ ಅವರು ಹೊಟ್ಟೆ ಕರಗಿಸಬೇಕಾಗಿದೆ.

English summary
Additional director general of police (ADGP) Bhaskar Rao directed all the Karnataka Special Reserve Police (KSRP) to lose weight. Fat police officers will face action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X