ಎಥನಾಲ್ ಬೆಲೆ ಶೇ.25ರಷ್ಟು ಹೆಚ್ಚಳಕ್ಕೆ ನಿರ್ಧಾರ: ರೈತರ ಮೊಗದಲ್ಲಿ ಹರ್ಷ
ಬೆಂಗಳೂರು, ಸೆ.21: ಎಥನಾಲ್ ಬೆಲೆಯನ್ನು ಕೇಂದ್ರ ಸರ್ಕಾರ ಶೇ.25ಕ್ಕೆ ಏರಿಕೆ ಮಾಡಿರುವುದು ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರಲ್ಲಿ ಮಂದಹಾಸ ಮೂಡಿದೆ.
ಎಥನಾಲ್ ಪ್ರತಿ ಲೀಟರ್‌ಗೆ 47.13ರೂಪಾಯಿನಿಂದ 59.13ರೂಪಾಯಿಗೆ ಏರಿಸಲಾಗಿದೆ. ಮೊಲಾಸಿಸ್ ಅಥವಾ ಭಾಗಶಃ ಕಬ್ಬಿನ ಹಾಲಿನಿಂದ ಎಥನಾಲ್ ತಯಾರಿಸಿದ್ದರೆ ಪ್ರತಿ ಲೀಟರ್‌ಗೆ 52.43ರೂಪಾಯಿ ನ ನೀಡಲಾಗುತ್ತದೆ.
ಸಂಪೂರ್ಣ ಕಬ್ಬಿನ ಹಾಲಿನಿಂದ ತಯಾರಿಸಿದ ಎಥನಾಲ್ ಗೆ ಮಾತ್ರ 59.13ರೂ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಆದೇಶ 2018ರ ಡಿಸೆಂಬರ್ 1ರಿಂದ 2019ರ ನವೆಂಬರ್ 30ರವರೆಗೆ ಒಂದು ವರ್ಷಗಳ ಕಾಲ ಅನ್ವಯವಾಗಲಿದೆ. ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನೆರವಿಗೆ ಬಂದಿರುವ ಕೇಂದ್ರಕ್ಕೆ ರೈತರು ಧನ್ಯವಾದ ಅರ್ಪಿಸಿದ್ದಾರೆ.

ರಾಜ್ಯ ಕಬ್ಬು ಬೆಳೆಗಾರರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪ್ರಧಾನ ಮಂತ್ರಿ ಮೋದಿರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಥನಾಲ್ ಬೆಲೆಯನ್ನು ಶೇ. 25 ರಷ್ಟು ಏರಿಕೆ ಮಾಡಿರುವುದು ರೈತರ ಹಾಗೂ ಕಾರ್ಖಾನೆಗಳ ಮಾಲೀಕರಿಗೆ ವರದಾನವಾಗಿದೆ, ಕೇಂದ್ರ ಸರ್ಕಾರ ಶೇ. 20 ರಷ್ಟು ಎಥನಾಲ್ ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.












Click it and Unblock the Notifications