ಹಾಲಿನ ದರ ಏರಿಕೆಗಾಗಿ ಜೂ. 15ಕ್ಕೆ "ನಮ್ಮ ಹಾಲು ನಮ್ಮ ಹಕ್ಕು' ಹೋರಾಟ
ಬೆಂಗಳೂರು, ಜೂನ್ 13: ಬೆಂಗಳೂರು ಸೇರಿದಂತೆ ಜೂನ್ 15ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಹಾಲು ಉತ್ಪಾದಕರ ಸಂಘ ನಿರ್ಧರಿಸಿದೆ. ನಮ್ಮ ಹಾಲು ನಮ್ಮ ಹಕ್ಕು ಎಂದು ಹಾಲಿನ ಚಳವಳಿಯನ್ನು ಮಾಡಲು ಹಾಲು ಉತ್ಪಾದಕ ಸಂಘ ತಯಾರಿಯನ್ನು ನಡೆಸಿದೆ. ಹಾಲಿನ ಬೆಲೆಯನ್ನು ಹೆಚ್ಚಿಸಬೇಕು ಎಂಬ ಒತ್ತಾಯವನ್ನು ಮಾಡಿರುವ ಹಾಲು ಉತ್ಪಾದಕ ರ ಸಂಘ ಕನಿಷ್ಠ ಒಂದು ಲೀಟರ್ ಹಾಲಿಗೆ 50 ರೂಪಾಯಿಗೆ ಏರಿಕೆ ಮಾಡಲು ಒತ್ತಾಯಿಸುತ್ತಿದೆ.
ಹಾಲು ಉತ್ಪಾದಕರಿಗೆ ಕೇವಲ 26 ರೂಪಾಯಿ ಸಿಗುತ್ತಿದೆ. ಒಂದು ಲೀಟರ್ ಹಾಲು ಕರೆಯಬೇಕಾದರೇ ಒಂದು ಹಸುಗೆ 40 ರಿಂದ 45 ರೂಪಾಯಿ ವೆಚ್ಚ ಬರುತ್ತೆ. ಹಸುಗಳಿಗೆ ನೀಡುವ ಆಹಾರ ಪದಾರ್ಥಗಳ ಬೆಲೆ ಎಚ್ಚಳವಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಕ್ಕೂಟ ಹಾಗೂ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಹಾಲು ಉತ್ಪಾದಕರಿಂದ ಒಕ್ಕೂಟ ಹಾಗೂ ಸರ್ಕಾರ ಲಾಭದಾಯಕವಾಗಿದೆ.

ಆದರೇ ಹಾಲು ಉತ್ಪಾದನೆ ಮಾಡುವ ರೈತರು ಬೀದಿಗೆ ಬಂದಿದ್ದಾರೆ. ಇದರಿಂದ ಜೂನ್ 15 ರಂದು ಹಾಲನ್ನು ರಸ್ತೆಗೆ ಚೆಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡ್ತೇವೆ ಎಂದು ಹಾಲು ಉತ್ಪಾದಕರ ಸಂಘ ತಿಳಿಸಿದೆ.
ಹಾಲು ಉತ್ಪಾದಕರ ಸಂಘದ ರಾಜ್ಯಾಧ್ಯಕ್ಷ ಹೇಳಿದ್ದೇನು?
ಹಾಲು ಉತ್ಪಾದಕರ ಸಂಘದ ರಾಜ್ಯಾಧ್ಯಕ್ಷ ಎಂ.ಆರ್. ನಾರಾಯಣ ಗೌಡ ಮಾತನಾಡಿ "ಹಾಲು ಉತ್ಪಾದನೆ ವೆಚ್ಚ ಗಗನಕ್ಕೇರಿದೆ ಪ್ರತಿದಿನ ಹಸುವಿಗೆ ಕೊಡುವ ಆಹಾರ ಬೂಸ ಇಂಡಿ, ಹಸಿಮೇವು ಬೆಲೆ ಏರಿಯಾಗಿದೆ. ಹಸಿ ಮೇವು ಒಂದು ಟನ್ ನಾಲ್ಕು ಸಾವಿರಕ್ಕೇರಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲ ಏರಿಕೆಯಿಂದ ಇಂಡಿ, ಬೂಸಾ ಏರಿಕೆಯಾಗಿದೆ. ಜೂನ್ 15 ರಂದು ಹಾಲು ಉತ್ಪಾದಕ ಸಂಘ ಪ್ರತಿಭಟನೆಯನ್ನು ಮಾಡಲಿದ್ದು. ಹಸುಗಳ ಸಹಿತ ಪ್ರತಿಭಟನೆ ಮಾಡಲಿದ್ದೇವೆ. ಹಾಲನ್ನು ರಸ್ತೆಗೆ ಚೆಲ್ಲುವ ಮೂಲಕ ಅನಿರ್ಧಿಷ್ಟಾವಧಿಗೆ ಮುಷ್ಕರ ಮಾಡಲಿದ್ದೇವೆ'' ಎಂದು ತಿಳಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಜೂನ್ 15ರಂದು ಬೆಂಗಳೂರಿನ ಟೌನ್‌ಹಾಲ್ ಬಳಿಯಿಂದ ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ಮೂಲಕ ಸಾಕಿ. ಫ್ರೀಡಂ ಪಾರ್ಕ್‌ನಲ್ಲಿ ಜಮಾವಣೆಗೊಂಡು ರೈತರು, ಹಾಲು ಉತ್ಪಾದೆಯನ್ನೇ ಮುಖ್ಯ ಕಸುಬಾಗಿಟ್ಟುಕೊಂಡಿರುವ ಎಲ್ಲಾ ಹಾಲು ಉತ್ಪಾದರಕು ಪ್ರತಿಭಟನೆಯಲ್ಲಿ ಭಾಗವಹಿಸಿ ನಮ್ಮ ಹಾಲು ನಮ್ಮ ಹಕ್ಕು ಪ್ರತಿಪಾದಿಸಿ ಪ್ರತಿ ಲೀಟರ್ ಹಾಲಿಗೆ ನಿಗದಿತ ದರ ಎಂದರೆ ಕನಿಷ್ಠ 50ರೂಗಾಗಿ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.












Click it and Unblock the Notifications