ರೈತ ಸಾವು: ಚಿಕ್ಕಬಳ್ಳಾಪುರ ಪಿಎಸ್‌ ಐ ಸಸ್ಪೆಂಡ್

Written By:
Subscribe to Oneindia Kannada

ಚಿಕ್ಕಬಳ್ಳಾಪುರ, ಜುಲೈ, 18: ವಿಚಾರಣೆ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ರೈತ ರೂಪೇಶ್ ಪ್ರಕರಣಕ್ಕೆ ಸಂಬಂಧಿಸಿ ಜನರ ಒತ್ತಡಕ್ಕೆಪೊಲೀಸ್ ಇಲಾಖೆ ಮಣಿದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿ ಪೊಲೀಸರು ಹೊಸ ಹುಡ್ಯ ಗ್ರಾಮದ ರೈತ ರೂಪೇಶ್ ಎಂಬುವರನ್ನು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದ ರೈತರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೂಪೇಶ್ ಸಾವನ್ನಪ್ಪಿದ್ದರು.[ಚಿಕ್ಕಬಳ್ಳಾಪುರ: ಪೊಲೀಸ್ ವಿಚಾರಣೆ ವೇಳೆ ರೈತ ಸಾವು]

police
Photo Credit:

ನನ್ನ ಗಂಡನ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಶವ ಸಂಸ್ಕಾರವನ್ನು ಮಾಡದೇ ಪ್ರತಿಭಟನೆ ನಡೆಸುತ್ತೇವೆ ಎಂದು ಮೃತ ರೂಪೇಶ್ ಪತ್ನಿ ಪುಷ್ಪಾ ಎಚ್ಚರಿಕೆ ನೀಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ಮಾಡಿದ್ದರು.

ದಕ್ಷಿಣ ವಲಯ ಐಜಿಪಿ ಸೀಮಂತ್ ಕುಮಾರ್ ಸ್ವತಃ ಮುಂದೆ ನಿಂತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಮತ್ತು ಹೊಸ ಹುಡ್ಯ ಗ್ರಾಮದಲ್ಲೂ ಬಿಗಿ ಪೊಲೀಸ್ ಬಂದೋಬಸ್‌ ಗೆ ಸೂಚನೆ ನೀಡಿದ್ದರು.[ಎಸ್ಮಾಗೆ ಬಲಿಯಾಗಿದ್ದ ಮಂಡ್ಯದ ಪೇದೆ ರಾಮಕೃಷ್ಣ]

ಏನಿದು ವಿವಾದ: ಮೃತ ರೈತನ ಬಳಿ 33 ಗುಂಟೆ ಜಮೀನು ಇತ್ತು ಎಂದು ಹೇಳಲಾಗಿದ್ದು ಪ್ರಭಾವಿ ವ್ಯಕ್ತಿಯೊಬ್ಬರು ಜಾಗದ ಮೇಲೆ ಕಣ್ಣಿಟ್ಟಿದ್ದರು. ಪೊಲೀಸರ ಮೂಲಕ ರೈತನಿಗೆ ಬೆದರಿಕೆ ಹಾಕಿಸಿ ಜಮೀನು ನೀಡಲು ಹೇಳಿದ್ದರು ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tension rise in Chikkaballapur as Farmer Dies after Police Investigation. During the time of Police Investigation time farmer Rupesh collapsed and after he admitted to Chikkaballapur District hospital. After this the police department has suspended Chikkaballapur rural station PSI Manjunath on July 18, Monday.
Please Wait while comments are loading...