ಡಿಕೆ ರವಿ ಪುಣ್ಯತಿಥಿ: ಇಂಥ ದುರ್ಗತಿ ಬೇಡ ಎಂದ ಗೌರಮ್ಮ

Subscribe to Oneindia Kannada

ತುಮಕೂರು, ಮಾರ್ಚ್, 13: ನಿಗೂಢವಾಗಿ ಸಾವನ್ನಪ್ಪಿದ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಪುಣ್ಯತಿಥಿ ಭಾನುವಾರ ಅವರ ಹೂಟ್ಟೂರು ದೊಡ್ಡಕೊಪ್ಪಲುವಿನಲ್ಲಿ ನಡೆಯಿತು.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಿಕೆ ರವಿಯವರ ತಾಯಿ ಗೌರಮ್ಮ, ಸರ್ಕಾರ ನನ್ನ ಮಗನನ್ನು ಸಂಪೂರ್ಣವಾಗಿ ಮರೆತಿದೆ. ಯಾವುದೇ ಬಗೆಯ ಸಹಾಯವನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಡಿಕೆ ರವಿ ಮುದ್ದಿನ ನಾಯಿ ರೋಧನಕ್ಕೆ ಇನ್ನು ಸಿಕ್ಕಿಲ್ಲ ಉತ್ತರ]

dk ravi

ಮಗನ ಪುಣ್ಯತಿಥಿ ಮಾಡಲು ಮಾಂಗಲ್ಯ ಸರವನ್ನು ಬ್ಯಾಂಕ್‌ನಲ್ಲಿ ಅಡವಿಡಬೇಕಾದ ದುಸ್ಥಿತಿ ಬಂದೋದಗಿದೆ. ಮಗ ಸಾವನ್ನಪ್ಪಿ ವರ್ಷ ಕಳೆದರೂ ಯಾರೂ ಸಹಾಯ ಮಾಡಲಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಇಂಥ ದುರ್ಗತಿ ಇನ್ಯಾರಿಗೂ ಬರುವುದು ಬೇಡ ಎಂದು ನೊಂದು ನುಡಿದರು. ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಡಿಕೆ ರವಿ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದರು.[ಡಿಕೆ ರವಿಯದು ಆತ್ಮಹತ್ಯೆ : ಅಂತಿಮ ಷರಾ ಬರೆದ ಸಿಬಿಐ]

dk ravi

ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಿಕೆ ರವಿ ಅವರ ಶವ ಕಳೆದ ವರ್ಷ ಮಾರ್ಚ್ 16 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಕೋರಮಂಗಲದ ಸೆಂಟ್ ಜಾನ್ ಹುಡ್ ಅಪಾರ್ಟ್ ಮೆಂಟ್ ಪತ್ತೆಯಾಗಿತ್ತು. ನಂತರ ದೇಶಾದ್ಯಂತ ಚರ್ಚೆ ನಡೆದಿದ್ದು ಅಂತಿಮವಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Death After one year IAS officer D.K.Ravi his family pay tribute at D K Ravi's village Tumkur disitrict Doddakoppalu on Sunday March 13.
Please Wait while comments are loading...