ಜಮೀರ್, ಸಿದ್ದು ಪಾಕಿಸ್ತಾನಕ್ಕೆ ಹೋಗಿದ್ದರು ಎಂಬ ಓಳು ಸುದ್ದಿ ವೈರಲ್

Recommended Video

      ಸಿದ್ದರಾಮಯ್ಯ ಹಾಗು ಜಮೀರ್ ಅಹ್ಮದ್ ಖಾನ್ ಪಾಕಿಸ್ತಾನಕ್ಕೆ ಹೋಗಿದ್ದು ನಿಜಾನಾ? | Oneindia Kannada

      ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ನಾಯಕ ಜಮೀರ್ ಅಹ್ಮದ್ ಏಪ್ರಿಲ್ ಹದಿಮೂರನೇ ತಾರೀಕಿನಂದು ಪಾಕಿಸ್ತಾನದ ಕರಾಚಿಗೆ ತೆರಳಿದ್ದರು ಎಂದು ಬಿಂಬಿಸುವಂಥ ಖಾಸಗಿ ವಿಮಾನಯಾನ ಸಂಸ್ಥೆಯ ದಾಖಲೆಯೊಂದು ಹರಿದಾಡುತ್ತಿದೆ.

      ಈ ದಾಖಲೆಯು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಕೇಳಲಾಗುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು ಸಿದ್ದರಾಮಯ್ಯ ಏಕೆ ಪಾಕಿಸ್ತಾನಕ್ಕೆ ಹೋಗಿದ್ದರು ಎಂದು ಪ್ರಶ್ನಿಸಲಾಗಿದೆ.

      ಆದರೆ, ಇದರ ಸತ್ಯಾಸತ್ಯತೆ ತಿಳಿಯಲು ಬೂಮ್ ಸುದ್ದಿತಾಣ ಪ್ರಯತ್ನಿಸಿ, ಇದು ಸುಳ್ಳು ಎಂಬುದನ್ನು ಖಚಿತಪಡಿಸಿದೆ. ಅಂದಹಾಗೆ @DrGPradhan ಹೆಸರಿನ ಹ್ಯಾಂಡಲ್ ಈ ರೀತಿಯ ಪ್ರಶ್ನೆ ಮಾಡುತ್ತಿರುವುದರಲ್ಲಿ ಒಂದು. ಅದಕ್ಕೆ 1.23 ಲಕ್ಷ ಫಾಲೋವರ್ಸ್ ಗಳಿದ್ದಾರೆ. ಮತ್ತು ಸುಳ್ಳು ಸುದ್ದಿ ಹಬ್ಬಿಸಿದ ಕಾರಣಕ್ಕೆ ಹಲವು ಬಾರಿ ಸಿಕ್ಕಿಬಿದ್ದಿದ್ದಾರೆ.

      Fake news about Siddaramaiah Pakistan visit

      ಜತೆಗೆ @DrGPradhan ಹೆಸರಿನ ಹ್ಯಾಂಡಲ್ ನಿಂದ ಮೂಲ ಟ್ವೀಟ್ ತೆಗೆದುಹಾಕಲಾಗಿದ್ದು, ಈಗ ವರಸೆ ಬದಲಿಸಿ, ಅನುಮಾನಾಸ್ಪದವಾದದ್ದು ಎಂದು ಹೇಳತೊಡಗಿದ್ದಾರೆ.

      ಮಾರ್ಚ್ ಹತ್ತರಂದು ಬೆಂಗಳೂರಿನ ಎಚ್ ಎಎಲ್ ಗೆ ಒಂದು ಪತ್ರ ಬರೆದಿದ್ದು, ವಿಮಾನ ನಿಲ್ದಾಣದವರಿಗೆ ಮಾಹಿತಿ ನೀಡಲು ಕೇಳಿಕೊಳ್ಳಲಾಗಿದೆ. ಆ ಪ್ರಕಾರ ಖಾಸಗಿ ವಿಮಾನ ಯಾನ ಸಂಸ್ಥೆ ವಿಎಸ್ ಆರ್ ನ ವಿಮಾನದಲ್ಲಿ ಏಪ್ರಿಲ್ ಹದಿಮೂರರಂದು ಸಂಜೆ ಐದು ಗಂಟೆಗೆ ಮುಂಬೈ ಬಿಟ್ಟು, ಅಂದು ಸಂಜೆ ಆರೂ ಹದಿನೈದಕ್ಕೆ ಕರಾಚಿ ತಲುಪಿದೆ. ಆ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.

      ಆ ನಂತರ ಕರಾಚಿಯಿಂದ ರಾತ್ರಿ ಏಳು ಗಂಟೆಗೆ ಬಿಟ್ಟು ರಾತ್ರಿ ಒಂಬತ್ತೂ ಹತ್ತಕ್ಕೆ ಇಬ್ಬರು ಪ್ರಯಾಣಿಕರೊಂದಿಗೆ ದೆಹಲಿ ತಲುಪಿದೆ. ಆ ನಂತರ ರಾತ್ರಿ ಹನ್ನೊಂದು ನಲವತ್ತೈದಕ್ಕೆ ದೆಹಲಿ ವಿಮಾನ ನಿಲ್ದಾಣ ಬಿಟ್ಟು, ರಾತ್ರಿ ಎರಡು ಗಂಟೆ ಏಪ್ರಿಲ್ ಹದಿಮೂರರಂದು ಬೆಂಗಳೂರಿನ ಎಚ್ ಎಎಲ್ ತಲುಪಿದೆ.

      Fake news about Siddaramaiah Pakistan visit

      ಮುಖ್ಯವಾಗಿ ಏನೆಂದರೆ, ದೆಹಲಿಯಿಂದ ಹೊರಟ ದಿನಾಂಕ ಹಾಕಲಾಗಿದೆ. ಆದರೆ ದೆಹಲಿಗೆ ವಾಪಸಾದ ದಿನಾಂಕದ ಪ್ರಸ್ತಾವ ಇಲ್ಲ. ಇನ್ನು ಖಾಸಗಿ ವಿಮಾನ ಯಾನ ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಅಧಿಕಾರಿಯನ್ನು ಈ ಬಗ್ಗೆ ಪ್ರಶ್ನಿಸಿದರೆ, ಆ ಪತ್ರ ಪೂರ್ತಿ ನಕಲು. ನಮ್ಮ ವಿಮಾನಗಳು ಯಾವುವೂ ಇತ್ತೀಚೆಗಿನ ತಿಂಗಳಲ್ಲಿ ಪಾಕಿಸ್ತಾನಕ್ಕೆ ಹೋಗಿಲ್ಲ ಎಂದು ತಿಳಿಸಿದ್ದಾರೆ.

      ಅಷ್ಟೇ ಅಲ್ಲ, ಪೈಲಟ್- ಕೋ ಪೈಲಟ್ ಇಬ್ಬರ ಫೋನ್ ನಂಬರ್ ಗೆ ಕರೆ ಮಾಡಿದರೆ ಯಾವುದೇ ಉತ್ತರ ಸಿಕ್ಕಿಲ್ಲ. ಇನ್ನು ಸಿದ್ದರಾಮಯ್ಯ ಅವರು ಏಪ್ರಿಲ್ ಹನ್ನೊಂದು-ಹದಿಮೂರು ತಾರೀಕಿನ ಮಧ್ಯೆ ದೆಹಲಿಯಲ್ಲಿದ್ದರು. ವಿವಿಧ ಸಭೆಗಳು ಸೇರಿದಂತೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ.

      ಇನ್ನು ಈ ರೀತಿ ನಕಲಿ ಪತ್ರ ಹುಟ್ಟಿಕೊಂಡಿದ್ದಾದರೂ ಎಲ್ಲಿ ಎಂಬ ಬಗ್ಗೆ ಸಿಐಡಿ ತನಿಖೆ ಆಗಬೇಕು ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+