ಬೆಂಗಳೂರಲ್ಲಿ ನಕಲಿ ದಾಖಲೆ ಮಾಡಿ ಅಮೆರಿಕ ಕೋರ್ಟ್‌ಗೆ ಸಲ್ಲಿಕೆ: ತನಿಖೆ

ಬೆಂಗಳೂರು, ಜೂನ್ 09: ಬೆಂಗಳೂರು ನಗರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ವಿದೇಶಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಕುರಿತು ತನಿಖೆಗೆ ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ಅಲ್ಲದೆ, ಇಂತಹ ಪ್ರಕರಣದಲ್ಲಿ ಇಲ್ಲಿನ ಪೊಲೀಸರಿಗೆ ತನಿಖೆ ನಡೆಸುವ ಅಧಿಕಾರವಿದೆ ಎಂದು ಆದೇಶ ನೀಡಿದೆ.

ಬೆಂಗಳೂರಿನಲ್ಲಿ ಕಂಪನಿ ನಡೆಸುತ್ತಿದ್ದ ಇಬ್ಬರು ಆರೋಪಿಗಳು ದಾಖಲೆಗಳನ್ನು ಸೃಷ್ಟಿಸಿದ್ದರಿಂದ ಆ ಬಗ್ಗೆ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸುವ ಎಲ್ಲಾಅಧಿಕಾರ ವ್ಯಾಪ್ತಿ ಪೊಲೀಸರಿಗಿದೆ ಎಂದು ಹೇಳಿರುವ ನ್ಯಾಯಾಲಯ, ಆ ಕುರಿತ ಖಾಸಗಿ ದೂರು ಸಹ ಸ್ವೀಕಾರಾರ್ಹವಾಗಿದೆ ಎಂದು ಸ್ಪಷ್ಟಪಡಿಸಿದೆ.

Fake Documents Created And Submitted To American Court HC Allows To Probe

ಪಳನಿಸ್ವಾಮಿ ವೀರರಾಜ ಮತ್ತಿತರರು ತಮ್ಮ ವಿರುದ್ಧದ ಕ್ರಿಮಿನಲ್‌ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ಆದೇಶವೇನು?: ಅರ್ಜಿದಾರರ ಪರ ವಕೀಲರು, ಅಮೆರಿಕದಲ್ಲಿ ವಹಿವಾಟು ನಡೆಸಲಾಗಿದೆ, ಹಾಗಾಗಿ ಇಲ್ಲಿ ಕ್ರಿಮಿನಲ್‌ ಕೇಸ್‌ ಸ್ವೀಕಾರಾರ್ಹವಲ್ಲ. ಹಾಗೇನಾದರೂ ಕೇಸ್‌ ದಾಖಲಿಸಿದರೆ ಅದನ್ನು ವಿದೇಶಿ ನ್ಯಾಯಾಲಯದಲ್ಲಿಯೇ ದಾಖಲಿಸಬೇಕು, ಬೆಂಗಳೂರಿನಲ್ಲಿ ಅಲ್ಲ. ಇಲ್ಲಿನ ಪೊಲೀಸರಿಗೆ ತನಿಖೆ ಅಧಿಕಾರವಿಲ್ಲಎಂದು ವಾದಿಸಿದ್ದರು.

ಆದರೆ ಮೂಲ ದೂರುದಾರರ ಪರ ವಕೀಲರು, ದಾಖಲೆಗಳನ್ನು ಬೆಂಗಳೂರಿನಲ್ಲಿ ನಕಲು ಮಾಡಿ ವಿದೇಶಿ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಹಾಗಾಗಿ ಕ್ರಿಮಿನಲ್‌ ದೂರು ವಿಚಾರಣೆಗೆ ಇಲ್ಲಿನ ತನಿಖಾಧಿಕಾರಿಗೆ ಎಲ್ಲಾಅಧಿಕಾರ ಇದೆ ಎಂದು ಹೇಳಿದ್ದರು.

ನಕಲಿ ದಾಖಲೆಗಳನ್ನು ಅಮೆರಿಕದಲ್ಲಿನ ಕೋರ್ಟ್‌ಗೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಯಾಲಯವೂ ಕೂಡ ಆ ಬಗ್ಗೆ ದೂರು ಮಾನ್ಯ ಮಾಡಿ ತನಿಖೆಗೆ ಆದೇಶಿಸಬಹುದಾಗಿದೆ. ಅದಕ್ಕೆ ಕಾನೂನಿನಡಿ ಯಾವುದೇ ನಿರ್ಬಂಧವಿಲ್ಲಎಂದು ಸರ್ಕಾರಿ ವಕೀಲರು ವಾದಿಸಿದ್ದರು.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಸುಪ್ರೀಂಕೋರ್ಟ್‌ 2017ರಲ್ಲಿಇಕ್ಬಾಲ್‌ ಸಿಂಗ್‌ ಮಾರ್ವಾ ವರ್ಸಸ್‌ ಮೀನಾಕ್ಷಿ ಮಾರ್ವಾ ಪ್ರಕರಣದಲ್ಲಿನೀಡಿರುವ ತೀರ್ಪು ಉಲ್ಲೇಖಿಸಿ, ಸಿಆರ್‌ಪಿಸಿ ಸೆಕ್ಷನ್‌ 200ರಡಿ ಮ್ಯಾಜಿಸ್ಪ್ರೇಟ್‌ ಖಾಸಗಿ ದೂರನ್ನು ಮಾನ್ಯ ಮಾಡಿ ತನಿಖೆಗೆ ಆದೇಶಿಸಬಹುದು ಮತ್ತು ಪೊಲೀಸರು ಸೆಕ್ಷನ್‌ 202ರಡಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಬಹುದು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಡಾ. ವೀರಸಿಕ್ಕು ಬೊಮ್ಮಯ್ಯ ಸ್ವಾಮಿ ಮತ್ತು ಪಳನಿಸ್ವಾಮಿ ವೀರರಾಜ ಉತ್ತಮ ಬಾಂಧವ್ಯ ಹೊಂದ್ದಿರು. ಪಳನಿಸ್ವಾಮಿ ಜವಳಿ ಉತ್ಪಾದನಾ ವಲಯದಲ್ಲಿ ಪಾಲುದಾರಿಕೆ ಕಂಪನಿ ಹೊಂದಿದ್ದರು. ಅವರು ಅಮೆರಿಕದಲ್ಲಿನ ತನ್ನ ವ್ಯಾಪಾರವನ್ನು ಉತ್ತೇಜಿಸಲು ವೀರಸಿಕ್ಕು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಅದರಂತೆ ಅವರು ವೆಚ್ಚವನ್ನು ನೀಡಬೇಕಾಗಿತ್ತು ಮತ್ತು ಲಾಭವನ್ನು ಹಂಚಿಕೊಳ್ಳಬೇಕಾಗಿತ್ತು. ಅಲ್ಲಿ ಪಳನಿಸ್ವಾಮಿ ವ್ಯಾಪಾರ ಉತ್ತೇಜಿಸಲು 2,25,777.90 ಅಮೆರಿಕನ್‌ ಡಾಲರ್‌ ಅನ್ನು ವೀರಸಿಕ್ಕು ಖರ್ಚು ಮಾಡಿದ್ದರು. ಆ ಹಣವನ್ನು ಪಳನಿಸ್ವಾಮಿ ಪಾವತಿಸದ ಹಿನ್ನೆಲೆಯಲ್ಲಿ ವೀರಸಿಕ್ಕು ಅಮೆರಿಕಾದ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಆಗ ಆರೋಪಿಗಳಾದ ಪಳನಿಸ್ವಾಮಿ ವೀರರಾಜ ಮತ್ತಿತರರು ಬೆಂಗಳೂರಿನಲ್ಲಿ ದಾಖಲೆಗಳನ್ನು ನಕಲು ಮಾಡಿ ಅವುಗಳನ್ನು ಅಮೆರಿಕದ ತನ್ನ ವಕೀಲರಿಗೆ ಕಳುಹಿಸಿ ಕೊಟ್ಟಿದ್ದರು. ವಿಧಿ ವಿಜ್ಞಾನ ತಜ್ಞರೂ ಸಹ ಆ ದಾಖಲೆಗಳನ್ನು ನಕಲಿ ಎಂದು ದೃಢಪಡಿಸಿದ್ದರು.

ಹಾಗಾಗಿ ವೀರಸಿಕ್ಕು ಅವರು ಪಳನಿಸ್ವಾಮಿ ಮತ್ತಿತರರ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್‌ 406, 468, 471, 420ರಡಿ ಖಾಸಗಿ ದೂರು ದಾಖಲಿಸಿದ್ದರು. ಆ ಸಂಬಂಧ ನ್ಯಾಯಾಲಯ ಪೊಲೀಸರಿಂದ ತನಿಖೆಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪಳನಿಸ್ವಾಮಿ ಹೈಕೋರ್ಟ್‌ ಮೊರೆ ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+