ತಿಲಕ ಇಟ್ಟು ಸೆಲ್ಫಿಗೆ ಫೋಸು ಕೊಡೋರು ಕ(ಳ್ಳ?) ಭಕ್ತರು: ಸಿದ್ದರಾಮಯ್ಯ

Recommended Video

      ತಿಲಕ ಇಟ್ಟು ಸೆಲ್ಫಿಗೆ ಫೋಸು ಕೊಡೋರು ಕ(ಳ್ಳ?) ಭಕ್ತರು..! | Oneindia kannada

      ಬೆಂಗಳೂರು, ಮಾರ್ಚ್‌ 06: ತಿಲಕ ಇಟ್ಟವರನ್ನು ಕಂಡರೆ ಭಯವಾಗುತ್ತೆ ಎಂದು ಸಿದ್ದರಾಮಯ್ಯ ಅವರು ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ.

      #selfiewiththilak (ತಿಲಕವಿಟ್ಟು ಸೆಲ್ಫಿ) ಅಭಿಯಾನವು ಟ್ವಿಟ್ಟರ್‌ನಲ್ಲಿ ನಡೆಯುತ್ತಿದ್ದು, ತಿಲಕ ಇಟ್ಟುಕೊಂಡು ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

      ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಹ ತಿಲಕವಿಟ್ಟು ಸೆಲ್ಫಿಗೆ ಫೋಸು ನೀಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

      Fake devotees put thilaka just to take selfie: Siddaramaiah

      ಆದರೆ ತಮ್ಮ ಮಾತಿನ ವಿರುದ್ಧ ಎದ್ದಿರುವ ಅಭಿಯಾನವನ್ನು ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ಲೇವಡಿ ಮಾಡಿದ್ದು, ಶೋಭಾ ಕರಂದ್ಲಾಜೆ ಅವರ ತಿಲಕದ ಸೆಲ್ಫಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿ, ತಿಲಕ ಇಟ್ಕೊಂಡು ದೇವಸ್ಥಾನಕ್ಕೆ ಹೋಗುವವರು ನಿಜವಾದ ದೈವ ಭಕ್ತರು, ತಿಲಕ ಇಟ್ಕೊಂಡು ಸೆಲ್ಪಿಗೆ ಮುಖ ಒಡ್ಡುವವರು ಕ_ಭಕ್ತರು ಎಂದು ಬರೆದಿದ್ದಾರೆ.

      ಸಿದ್ದರಾಮಯ್ಯ ಅವರು ಕಳ್ಳ ಭಕ್ತರು ಎಂಬುದನ್ನು ಸೂಚಿಸಲು 'ಕ_ ಭಕ್ತರು' ಎಂದು ಕರೆದಿರುವುದು ಸುಲಭವಾಗಿ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರ ಉದ್ದೇಶವೂ ಬಹುತೇಕ ಅದೇ ಇದ್ದಂತಿದೆ.

      #selfiewiththilak ಸಾಮಾಜಿಕ ಜಾಲತಾಣ ಅಭಿಯಾನವು ಟ್ವಿಟ್ಟರ್‌ನಲ್ಲಿ ಜೋರು ಪಡೆದುಕೊಂಡಿದ್ದು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಲವರು ತಿಲಕ ಇಟ್ಟುಕೊಂಡು ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+