ಉಚ್ಚಾಟನೆಗೆ ಡೋಂಟ್ ಕೇರ್! ಮುಂದಿನ ನಡೆ ತಿಳಿಸಿದ ಎಸ್‌ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್
ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್ ಹಾಗೂ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಿಜೆಪಿ ಹೈಕಮಾಂಡ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಹಲವು ದಿನಗಳಿಂದ ಈ ಇಬ್ಬರೂ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು ಎನ್ನುವ ಆರೋಪ ಇವರ ಮೇಲಿದೆ. ಕೆಲ ತಿಂಗಳ ಹಿಂದೆಯಷ್ಟೇ ಇದೇ ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇರೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡ ಉಚ್ಚಾಟನೆ ಮಾಡಿತ್ತು. ಇಂದು ಹೆಬ್ಬಾರ್ ಹಾಗೂ ಸೋಮಶೇಖರ್ ಅವರಿಗೆ ಉಚ್ಚಾಟನೆಯ ಬಿಸಿ ಮುಟ್ಟಿಸಿದೆ. ಉಚ್ಚಾಟನೆ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿದ್ದು, ಅಚ್ಚರಿ ಮೂಡಿಸಿದೆ.
ತಮ್ಮ ಉಚ್ಚಾಟನೆ ಬಗ್ಗೆ ಇಬ್ಬರೂ ಶಾಸಕರು ಪ್ರತಿಕ್ರಿಯಿಸಿದ್ದು, ಬಿಜೆಪಿಯಲ್ಲಿ ಅತ್ಯಾಚಾರ ಮಾಡಿದವರನ್ನು ಉಚ್ಚಾಟನೆ ಮಾಡಲ್ಲ. ನಮ್ಮಂತವರನ್ನು ಉಚ್ಚಾಟನೆ ಮಾಡ್ತಾರೆ. ಈ ಉಚ್ಚಾಟನೆಯನ್ನು ನಾವು ನಿರೀಕ್ಷಿಸಿದ್ದೆವು. ಉಚ್ಚಾಟನೆ ಮಾಡಿದ್ದು ಒಳ್ಳೇದೇ ಆಯ್ತು ಎಂದು ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ನನಗೆ ಉಚ್ಚಾಟನೆ ಬಗ್ಗೆ ಶೇ 1ರಷ್ಟು ಕೂಡ ಬೇಸರ ಅಥವಾ ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಒಂದು ರೀತಿ ಖುಷಿಯೇ ಇದೆ. ಅಲ್ಲದೆ ಬಿಜೆಪಿಯಲ್ಲಿ ನನ್ನ ಪರ ಮಾತನಾಡಲು ಯಾರಿಗೂ ಧೈರ್ಯ ಕೂಡ ಇಲ್ಲ. ಬಿಜೆಪಿಯಲ್ಲಿ ಮಾಡಬಾರದ ಕೆಲಸ ಮಾಡಿರುವ ಯಾರ್ಯಾರೋ ಇದ್ದಾರೆ. ಅ*ತ್ಯಾಚಾರದ ಆರೋಪ ಹೊತ್ತಿರುವವರೂ ಇದ್ದಾರೆ. ಆದರೆ ಅವರೆಲ್ಲರನ್ನ ಬಿಟ್ಟು ನನ್ನ ಉಚ್ಚಾಟನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಯಾಕೆ ನನ್ನನ್ನ ಉಚ್ಛಾಟನೆ ಮಾಡಿದ್ದು ಎಂದು ಯಾರನ್ನೂ ಕೇಳಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ, ಇನ್ಮುಂದೆ ಫ್ರೀಯಾಗಿ ಓಡಾಡುತ್ತೇನೆ. ಈಗ ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ, ಮುಂದಿನ ನಡೆ ಏನು ಎಂದು ಇನ್ನೂ ಯೋಚನೆ ಮಾಡಿಲ್ಲ ಎಂದಿದ್ದಾರೆ.
ಶಿವರಾಂ ಹೆಬ್ಬಾರ್ ಏನಂದ್ರು?
ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಕೂಡ ತಮ್ಮ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯ ಶಿಸ್ತು ಸಮಿತಿಯು ನನ್ನನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಈ ಕುರಿತು ಈಗಷ್ಟೇ ವಾಟ್ಸಾಪ್ ಹಾಗೂ ಇ-ಮೇಲ್ ಮೂಲಕ ಸಂದೇಶ ಬಂದಿದೆ. ಶಿಸ್ತು ಸಮಿತಿ ತೆಗೆದುಕೊಂಡಿರುವ ಈ ನಿರ್ಣಯವನ್ನ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಶಿಸ್ತು ಸಮಿತಿ ನೋಟಿಸ್ ಮೂಲಕ ಕೇಳಿದ್ದ ಪ್ರಶ್ನೆಗೆ ನಾನು ಸೂಕ್ತ ಉತ್ತರ ಕೊಟ್ಟಿರುವೆ. ಆದರೂ ಉಚ್ಛಾಟನೆ ಮಾಡಿರುವುದು ಒಂದು ಕಡೆ ಸಂದೇಹ, ಮತ್ತೊಂದೆಡೆ ಸಂತೋಷ ಎರಡೂ ಉಂಟಾಗಿದೆ.
ನಾನು ಆರಂಭದಲ್ಲೇ ಪಕ್ಷವು ಯಾವ ಕ್ರಮ ತೆಗೆದುಕೊಂಡರೂ ನಾನು ಸ್ವಾಗತಿಸುತ್ತೇನೆ ಎಂದಿದ್ದೆ. ಈಗಲೂ ನನ್ನ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ. ನಮ್ಮನ್ನು ಕರೆಯದವರ ಜೊತೆಗೆ ಹೋಗುವುದರಲ್ಲಿ ಯಾವುದೇ ಗೌರವ ಇಲ್ಲ. ಹಾಗೆಯೇ ಗೌರವ ಕಳೆದುಕೊಂಡ ಮೇಲೆ ಅವರ ಜೊತೆ ಹೋಗುವುದು ನನಗೆ ಅನಿವಾರ್ಯವೂ ಅಲ್ಲ ಎಂದು ಹೆಬ್ಬಾರ್ ಹೇಳಿದ್ದಾರೆ.
ಇನ್ನೂ 10-12 ಸೀಟ್ ಖಾಲಿ ಆಗುತ್ತೆ
ಉಚ್ಚಾಟನೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿರುವ ಎಸ್.ಟಿ.ಸೋಮಶೇಖರ್, ಅಮವಾಸ್ಯೆ ದಿನ ಉಚ್ಚಾಟನೆ ಮಾಡುವ ಮೂಲಕ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಬೆಳಿಗ್ಗೆ 10:30ರಲ್ಲಿ ಮೊಬೈಲ್ ನೋಡಿದಾಗ ಉಚ್ಚಾಟನೆ ವಿಚಾರ ತಿಳಿಯಿತು. ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10ರಿಂದ 12 ಸೀಟ್ ಖಾಲಿ ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಪಕ್ಷದಿಂದ ನಮ್ಮನ್ನು ಉಚ್ಚಾಟನೆ ಮಾಡ್ತಾರೆ ಎಂದು ಗೊತ್ತಿತ್ತು. ಆದರೆ ಯಾವಾಗ ಉಚ್ಚಾಟನೆ ಮಾಡ್ತಾರೆ ಅಂತಾ ಗೊತ್ತಿರಲಿಲ್ಲ.
ನನ್ನ 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆ. ನೋಟಿಸ್ ಕೊಡೋ ಮುನ್ನ ಅಮಿತ್ ಶಾ ನನ್ನ ಜತೆ ಮಾತನಾಡಿದ್ರು. ತನ್ನ ಕ್ಷೇತ್ರದಲ್ಲಿರೋ ಭಿನ್ನಮತದ ಬಗ್ಗೆ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೆ. ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿ ತೊರೆಯುವುದಾಗಿ ಹೇಳಿದ್ದೆ. ಆದರೆ ಬಿಜೆಪಿಯಲ್ಲಿ ಯಾರೂ ನನ್ನ ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಕೊನೆಗೂ ಅಮಾವಾಸ್ಯೆಯ ದಿನ ಒಳ್ಳೇದು ಮಾಡಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ ಹಲವು ಸೀಟ್ ಖಾಲಿಯಾಗುತ್ತೆ ಎಂದು ಅಚ್ಚರಿ ಮೂಡಿಸಿದ್ದಾರೆ.
ಇಂದು ಬೆಳಿಗ್ಗೆ ಮೊಬೈಲ್ ನೋಡಿದಾಗ ಈ ವಿಚಾರ ತಿಳಿಯಿತು. ಉಚ್ಚಾಟನೆಗೂ ಮುನ್ನ ನನಗೆ ಶಿಸ್ತು ಸಮಿತಿಯಿಂದ ನೋಟಿಸ್ ಕೊಟ್ಟಿದ್ರು, ನಾನು ಅದಕ್ಕೆ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಉತ್ತರಿಸಿದ್ದೆ. ಬಿಜೆಪಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದು, ಸದ್ಯಕ್ಕೆ ನಮ್ಮ ಕೆಲಸವನ್ನ ಮುಂದುವರಿಸಿಕೊಂಡು ಹೋಗ್ತೀವಿ. ಚುನಾವಣೆ ಘೋಷಣೆಯಾದಾಗ ನಮ್ಮ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ.
ನಮ್ಮನ್ನ ಉಚ್ಚಾಟನೆ ಮಾಡಿದವರಿಗೆ ಆ ಚಾಮುಂಡೇಶ್ವರಿ ಉತ್ತಮ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ. ನಮ್ಮ ಉಚ್ಚಾಟನೆಗೂ ಯತ್ನಾಳ್ ಉಚ್ಚಾಟನೆಗೂ ಬಹಳ ವ್ಯತ್ಯಾಸವಿದೆ. ಯತ್ನಾಳ್ ಅವರನ್ನು ಅವತ್ತೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ. ಬಿಜೆಪಿಯ ಒಬ್ಬ ಶಾಸಕನೂ ವಿಧಾನಸೌಧದಲ್ಲಿ ಅ*ತ್ಯಾಚಾರ ಮಾಡ್ತಾರೆ. ತಮ್ಮದೇ ಪಕ್ಷದ ನಾಯಕರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಪ್ರಯತ್ನ ಮಾಡ್ತಾರೆ. ಹೆಣ್ಣುಮಕ್ಕಳನ್ನು ಮಂಚಕ್ಕೆ ಕರೆಯುತ್ತಾರೆ. ಬಿಜೆಪಿಯು ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ ಇಂತಹವರನ್ನ ಸಸ್ಪೆಂಡ್ ಮಾಡಬೇಕಾಗಿತ್ತು ಎಂದು ಶಾಸಕ ಮುನಿರತ್ನ ವಿರುದ್ಧವೂ ಹರಿಹಾಯ್ದಿದ್ದಾರೆ.
ಯತ್ನಾಳ್ ಹೇಳಿದ್ದೇನು?
ಸೋಮಶೇಖರ್, ಶಿವರಾಂ ಹೆಬ್ಬಾರ್ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರಿಬ್ಬರ ರಕ್ಷಣೆಗಾಗಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಹಳ ಪ್ರಯತ್ನ ಮಾಡಿದ್ದರು. ಈ ಹಿಂದೆ ಪಕ್ಷದಿಂದ ಯಾರಾದ್ರೂ ಹೊರಗೆ ಹೋಗೋದಾದ್ರೆ ಅದು ಯತ್ನಾಳ್‌ಗೆ ಮಾತ್ರ, ನಿಮಗೆ ಏನೂ ಆಗಲ್ಲ ಎಂದು ಭರವಸೆ ನೀಡಿದ್ದರು. ಆದರೂ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಉಳಿಸಿಕೊಳ್ಳುವಲ್ಲಿ ತಂದೆ-ಮಗ ವಿಫಲರಾಗಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಯು ಇತ್ತೀಚೆಗೆ ಪಾಕಿಸ್ತಾನದ ಮೇಲೆ ನಡೆದ ಯುದ್ಧದ ಕಾರಣ ಮುಂದೂಡಿರಬಹುದು. ನನ್ನ ಪ್ರಕಾರ ಇಷ್ಟರಲ್ಲೇ ಚುನಾವಣೆ ಆಗಬಹುದು ಎಂದಿದ್ದಾರೆ.
-
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್












Click it and Unblock the Notifications