‘ಸಂಸತ್ ದಾಳಿ ಪ್ರಕರಣದಿಂದ ಪ್ರತಾಪ್ ಸಿಂಹನನ್ನು ರಕ್ಷಿಸಲು ಈಗ ಸದಾರಮೆ ನಾಟಕ ಶುರು ಮಾಡಿದ ಬಿಜೆಪಿ...’
ಪಾರ್ಲಿಮೆಂಟ್ ಒಳಗೆ ಅಪರಿಚಿತರು ನುಗ್ಗಿದ ಪ್ರಕರಣ ರಾಜಕೀಯ ತಿಕ್ಕಾಟಕ್ಕೂ ವೇದಿಕೆಯಾಗಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟಿಂಗ್ ಶುರುವಾಗಿದೆ. ಇನ್ನೊಂದು ಕಡೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಳ್ಳಿಯಲ್ಲಿ ನಡೆದ ಭೀಕರ ಘಟನೆ ಕೂಡ ಪೊಲಿಟಿಕಲ್ ಫೈಟಿಂಗ್‌ಗಾಗಿ ಅಖಾಡ ರೆಡಿ ಮಾಡಿದೆ. ಪರಿಸ್ಥಿತಿ ಹೀಗಿದ್ದಾಗಲೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಇದೀಗ ಕರ್ನಾಟಕ ಕಾಂಗ್ರೆಸ್ ಗಂಭೀರ ಆರೋಪ ಒಂದನ್ನ ಮಾಡಿದೆ.
ಭಾರತದ ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದ ಒಳಗೆ ಅಪರಿಚಿತರು ನುಗ್ಗಿದ ಪ್ರಕರಣ ಪ್ರಪಂಚದ ಮೂಲೆ ಮೂಲೆಗೂ ಹಬ್ಬಿದೆ. ಅದರಲ್ಲೂ ಈ ವಿಚಾರ ಭಾರಿ ಚರ್ಚೆಗೆ ಕೂಡ ದಾರಿ ಮಾಡಿಕೊಡುತ್ತಿದೆ. ಹೀಗಿದ್ದಾಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫೈಟಿಂಗ್ ಕೂಡ ಬಲು ಜೋರಾಗಿದೆ. ಕರ್ನಾಟಕ ರಾಜಕೀಯ ರಣರಂಗದಲ್ಲಿ ಒಬ್ಬರು ಮತ್ತೊಬ್ಬರ ಮೇಲೆ, ಈ ವಿಚಾರ ಮುಂದೆ ಇಟ್ಟು ಬಡಿದಾಡುತ್ತಿದ್ದಾರೆ. ಹೀಗಿದ್ದಾಗ, ಕಾಂಗ್ರೆಸ್ ಹೇಳಿರುವುದೇನು ಗೊತ್ತಾ? ಮುಂದೆ ಓದಿ.

'ಸಂಸತ್ ದಾಳಿ ಪ್ರಕರಣದಿಂದ ಪ್ರತಾಪ್ ಸಿಂಹನನ್ನು..'
ಹೌದು, ಸಂಸದ ಪ್ರತಾಪ್ ಸಿಂಹ ವಿರುದ್ಧ ಕರ್ನಾಟಕ ಕಾಂಗ್ರೆಸ್ ಏಕ ವಚನ ಬಳಸಿ ಈಗ ವಾಗ್ದಾಳಿ ನಡೆಸಿದೆ. ಬಿಜೆಪಿ ಮತ್ತು ಸಂಸದ ಪ್ರತಾಪ್ ಸಿಂಹ ವಿರುದ್ಧ ಕರ್ನಾಟಕ ಕಾಂಗ್ರೆಸ್ ಇದೀಗ ಟ್ವೀಟ್ ಮಾಡಿದ್ದು, 'ಬೆಳಗಾವಿಯ ಮಹಿಳೆಯ ಬೆತ್ತಲೆ ಪ್ರಕರಣದಲ್ಲಿ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಸಂತ್ರಸ್ತ ಮಹಿಳೆಗೆ 5 ಲಕ್ಷ ಪರಿಹಾರ ನೀಡಿದೆ. ಸಂತ್ರಸ್ತೆಯ ರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಬದ್ದವಾಗಿದೆ. @JPNadda ಅವರೇ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದಾಗ ನಿಮ್ಮ ಸತ್ಯಶೋಧನೆ ತಂಡ ಹೋಗಲಿಲ್ಲವೇಕೆ?' ಎಂದು ಪ್ರಶ್ನೆ ಮಾಡಿರುವ ಕಾಂಗ್ರೆಸ್ ಇದರ ಜೊತೆಗೆ ಪ್ರತಾಪ್ ಸಿಂಹ ಅವರ ಹೆಸರನ್ನೂ ಪ್ರಸ್ತಾಪ ಮಾಡಿದೆ.
ಬೆಳಗಾವಿಯ ಮಹಿಳೆಯ ಬೆತ್ತಲೆ ಪ್ರಕರಣದಲ್ಲಿ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡಿದೆ.
— Karnataka Congress (@INCKarnataka) December 16, 2023
ಸಂತ್ರಸ್ತ ಮಹಿಳೆಗೆ 5 ಲಕ್ಷ ಪರಿಹಾರ ನೀಡಿದೆ.
ಸಂತ್ರಸ್ತೆಯ ರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಬದ್ದವಾಗಿದೆ.@JPNadda ಅವರೇ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದಾಗ ನಿಮ್ಮ ಸತ್ಯಶೋಧನೆ ತಂಡ ಹೋಗಲಿಲ್ಲವೇಕೆ?
ಉತ್ತರ…
ಪ್ರತಾಪ್ ಸಿಂಹ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ಟ್ವೀಟ್‌ನಲ್ಲಿ ಆರೋಪ ಮುಂದುವರಿಸಿರುವ ಕಾಂಗ್ರೆಸ್, 'ಉತ್ತರ ಪ್ರದೇಶದ ದಲಿತರ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ಸತ್ಯಶೋಧನೆ ಮಾಡಲಿಲ್ಲವೇಕೆ? ಮಧ್ಯಪ್ರದೇಶದಲ್ಲಿ ಬಾಲಕಿಯನ್ನು ಅತ್ಯಾಚಾರವೆಸಗಿ ಬೆತ್ತಲೆ ಮಾಡಿ ರಸ್ತೆಗೆ ಅಟ್ಟಿದಾಗ ಹೋಗಲಿಲ್ಲವೇಕೆ? ಹತ್ರಾಸ್ ನಲ್ಲಿ ಬಿಜೆಪಿ ಶಾಸಕನೇ ಅತ್ಯಾಚಾರ ಮಾಡಿದಾಗ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗ ನಿಮಗೆ ಮಹಿಳೆಯರ ಬಗ್ಗೆ ಕಾಳಜಿ ಹುಟ್ಟಲಿಲ್ಲ ಏಕೆ? ಅಲ್ಲೆಲ್ಲಾ ಇದ್ದಿದ್ದು ನಿಮ್ಮದೇ ಸರ್ಕಾರ ಎಂಬ ಕಾರಣಕ್ಕೆ, ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸತ್ಯಶೋಧನೆ ಮಾಡುವ ಮನಸಾಗಲಿಲ್ಲವೇ? ಸಂಸತ್ ದಾಳಿ ಪ್ರಕರಣದಿಂದ ಪ್ರತಾಪ್ ಸಿಂಹನನ್ನು ರಕ್ಷಿಸಲು ಈಗ ಸದಾರಮೆ ನಾಟಕ ಶುರು ಮಾಡಿದ @BJP4Karnataka ಗೆ ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲ!' ಎಂದಿದೆ ಕರ್ನಾಟಕ ಕಾಂಗ್ರೆಸ್.












Click it and Unblock the Notifications