• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಕೊರೊನಾ ಇಳಿಮುಖ; ಇಲ್ಲಿದೆ ಅಂಕಿ-ಸಂಖ್ಯೆಗಳ ಅಸಲಿ ಮುಖ!?

|

ಬೆಂಗಳೂರು, ಮೇ 14: ಕರ್ನಾಟಕದಲ್ಲಿ 50,000 ಗಡಿ ದಾಟಿದ್ದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇದೀಗ 35 ಸಾವಿರದ ಆಸುಪಾಸಿನಲ್ಲಿದೆ. ಈ ಅಂಕಿ-ಸಂಖ್ಯೆ ನೆಚ್ಚಿಕೊಂಜಡು ರಾಜ್ಯದಲ್ಲಿ ಕೊವಿಡ್-19 ಪ್ರಭಾವ ತಗ್ಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಮೇ 13ರ ಅಂಕಿ-ಅಂಶಗಳ ಪ್ರಕಾರ, 24 ಗಂಟೆಗಳಲ್ಲಿ 35297 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 344 ಜನರು ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, 34057 ಸೋಂಕಿತರು ಗುಣಮುಖರಾಗಿದ್ದಾರೆ.

ಕೊರೊನಾ ಇದೆ ಎಚ್ಚರಿಕೆ: ಮಹಾರಾಷ್ಟ್ರಕ್ಕಿಂತ ಕರ್ನಾಟಕವೇ ಡೇಂಜರ್!ಕೊರೊನಾ ಇದೆ ಎಚ್ಚರಿಕೆ: ಮಹಾರಾಷ್ಟ್ರಕ್ಕಿಂತ ಕರ್ನಾಟಕವೇ ಡೇಂಜರ್!

ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖ ಆಗಿರುವುದರ ಹಿಂದೆ ಒಂದು ಪ್ರಬಲ ಕಾರಣವಿದೆ. ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲಾಕೇಂದ್ರಗಳಲ್ಲಿ ಕೊವಿಡ್-19 ಅಟ್ಟಹಾಸ ಯಥಾವತ್ತಾಗಿದೆ. ಇದರ ಮಧ್ಯೆ ಸೋಂಕಿತ ಪ್ರಕರಣಗಳ ಪ್ರಮಾಣ ಇಳಿಮುಖವಾಗಲು ಕಾರಣವೇನು ಎಂಬುದನ್ನು ಸಾಂಕ್ರಾಮಿಕ ರೋಗ ತಜ್ಞರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ತಗ್ಗಿದ ಕೊರೊನಾವೈರಸ್ ಪರೀಕ್ಷೆ ವೇಗ

ರಾಜ್ಯದಲ್ಲಿ ತಗ್ಗಿದ ಕೊರೊನಾವೈರಸ್ ಪರೀಕ್ಷೆ ವೇಗ

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗವನ್ನು ತಗ್ಗಿಸಲಾಗಿದೆ. ಕಳೆದ ಏಪ್ರಿಲ್ 20ರಿಂದ ಈಚೆಗೆ ದಿನದಿಂದ ದಿನಕ್ಕೆ ಸೋಂಕಿನ ತಪಾಸಣೆ ಸಂಖ್ಯೆ ಇಳಿಮುಖವಾಗುತ್ತಿರುವುದು ಉತ್ತಮ ಲಕ್ಷಣವಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಗಿರಿಧರ್ ಆರ್ ಬಾಬು ತಿಳಿಸಿದ್ದಾರೆ. ಈ ಹಂತದಲ್ಲಿ ಕೊರೊನಾವೈರಸ್ ಪರೀಕ್ಷೆಯನ್ನು ಕಡಿಮೆ ಮಾಡಿದಷ್ಟು ಸೋಂಕಿನ ತೀವ್ರತೆ ಬಗ್ಗೆ ಲೆಕ್ಕ ಸಿಗದಂತೆ ಆಗುತ್ತದೆ. ಬೆಂಗಳೂರಿನಂತಾ ನಗರದಲ್ಲಿ ಕೊವಿಡ್-19 ಸೋಂಕು ತಪಾಸಣೆ ಕಡಿಮೆಯಾದರೆ ಸೋಂಕಿತರ ಗರಿಷ್ಠ ಪ್ರಮಾಣವನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ತಗ್ಗಿದೆಯಾ?

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ತಗ್ಗಿದೆಯಾ?

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಸೋಂಕಿತ ಪ್ರಕರಣಗಳನ್ನು ನೋಡುವ ಮೊದಲು ಎಷ್ಟು ಜನರಿಗೆ ಕೊವಿಡ್-19 ಪರೀಕ್ಷೆ ಮಾಡಲಾಗಿದೆ ಎನ್ನುವುದನ್ನು ಒಮ್ಮೆ ಕಣ್ಣಾಡಿಸಿ ನೋಡಿ. ವೈದ್ಯಕೀಯ ಪರೀಕ್ಷೆ ಪ್ರಮಾಣ ಇಳಿಮುಖವಾದಲ್ಲಿ ಮಾತ್ರ ಸೋಂಕಿತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸರಾಸರಿ ಸೋಂಕಿತರ ಸಂಖ್ಯೆ ಯಥಾವತ್ತಾಗಿದೆ ಎಂದು ಜಯದೇವ ಇನ್ಸ್ ಟಿಟ್ಯೂಟ್ ನಿರ್ದೇಶಕ ಡಾ. ಮಂಜುನಾಥ್ ಸಿಎನ್ ತಿಳಿಸಿದ್ದಾರೆ. ಕರ್ನಾಟಕ ಲಾಕ್‌ಡೌನ್‌ನಿಂದ ಖಂಡಿತವಾಗಿ ಪ್ರಯೋಜನವಾಗಲಿದೆ. ಆದರೆ ಯಾವುದೇ ಕಾರಣಕ್ಕೂ ಸೋಂಕಿನ ಪರೀಕ್ಷೆಯನ್ನು ಕಡಿಮೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

50,000 ಗಡಿ ದಾಟಿದ್ದ ಕೊರೊನಾವೈರಸ್ ಪ್ರಕರಣ

50,000 ಗಡಿ ದಾಟಿದ್ದ ಕೊರೊನಾವೈರಸ್ ಪ್ರಕರಣ

ರಾಪಿಡ್ ಆಂಟಿಜೆನಿಕ್ ಪರೀಕ್ಷೆ: 9827

RT-PCR ಪರೀಕ್ಷೆ: 1,45,397

ಒಟ್ಟು ಎಷ್ಟು ಜನರಿಗೆ ಕೊವಿಡ್-19 ಪರೀಕ್ಷೆ: 1,55,224

ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ: 50,112

  cyclone ಅಲೆಗಳ ಅಬ್ಬರಕ್ಕೆ ಸ್ಮಶಾನ, ಮನೆ ಸಮುದ್ರ ಪಾಲಾಗುವ ಭೀತಿ | Oneindia Kannada
  ಗುರುವಾರ ಪತ್ತೆಯಾದ ಕೊರೊನಾವೈರಸ್ ಪ್ರಕರಣಗಳು

  ಗುರುವಾರ ಪತ್ತೆಯಾದ ಕೊರೊನಾವೈರಸ್ ಪ್ರಕರಣಗಳು

  ರಾಪಿಡ್ ಆಂಟಿಜೆನಿಕ್ ಪರೀಕ್ಷೆ: 10317

  RT-PCR ಪರೀಕ್ಷೆ: 1,17,357

  ಒಟ್ಟು ಎಷ್ಟು ಜನರಿಗೆ ಕೊವಿಡ್-19 ಪರೀಕ್ಷೆ: 1,27,668

  ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ: 35,297

  English summary
  Experts Say The Reason For The Decline In Coronavirus Cases In Karnataka Is Due To Reduced Testing.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X