Karnataka Election: ಎಕ್ಸಿಟ್ ಪೋಲ್ Vs ಪ್ರಿಪೋಲ್ ಸರ್ವೇ, ನಂಬರ್ ಗೇಂನಲ್ಲಿ ಏನಿದು ವ್ಯತ್ಯಾಸ?
ಹದಿನಾರನೇ ಕರ್ನಾಟಕ ವಿಧಾನಸಭೆಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆಯೋಗದ ಆದೇಶದಂತೆ ವೋಟ್ ಮುಗಿದ ಮೂವತ್ತು ನಿಮಿಷದ ನಂತರ ಒಂದೊಂದಾಗಿ ಚುನಾವಣೋತ್ತರ ಸಮೀಕ್ಷೆಯ (Exit Poll) ಫಲಿತಾಂಶ ಹೊರಬೀಳುತ್ತಿದೆ.
ಬಹುತೇಕ ಹೆಚ್ಚಿನ ವಾಹಿನಿಗಳು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಭವಿಷ್ಯವನ್ನು ನುಡಿಯುತ್ತಿದೆ. ಕೆಲವೊಂದು ಮಾಧ್ಯಮಗಳು ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಅಂದಾಜಿಸಿದೆ.

ಕಳೆದ ಮೂರು ತಿಂಗಳಿನಿಂದ ಚುನಾವಣಾಪೂರ್ವ ಸಮೀಕ್ಷೆಗಳನ್ನು ವಿವಿಧ ಮಾಹಿನಿಗಳು ಹೊರ ತಂದಿದ್ದವು. ಹೆಚ್ಚಿನ ಸರ್ವೇಗಳು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುತ್ತದೆ ಎಂದು ಹೇಳಿದ್ದವು. ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳ ನಡುವೆ ನಂಬರ್ ಗೇಂನಲ್ಲಿ ವ್ಯತ್ಯಾಸವೇನು?
ಮೇ ಮೊದಲ ವಾರದಿಂದ ವಿವಿಧ ವಾಹಿನಿಗಳು ನಡೆಸಿದ್ದ ಚುನಾವಣಾಪೂರ್ವ ಸಮೀಕ್ಷೆಗಳ (Pre Poll Survey) ಫಲಿತಾಂಶ ಹೀಗಿದೆ: ಮ್ಯಾಜಿಕ್ ನಂಬರ್ - 113, ಫಲಿತಾಂಶ - ಮೇ ಹದಿಮೂರರಂದು.
ವೋಟ್ ಶೇರ್ - ಚುನಾವಣಾಪೂರ್ವ ಸಮೀಕ್ಷೆ:
ಸೌತ್ ಫಸ್ಟ್ - ಪೀಪಲ್ಸ್ ಪಲ್ಸ್ : ಬಿಜೆಪಿ - ಶೇ. 36, ಕಾಂಗ್ರೆಸ್ - ಶೇ. 41.4, ಜೆಡಿಎಸ್ - ಶೇ. 16, ಇತರರು - ಶೇ. 7.7
ಎಬಿಪಿ ಸಿವೋಟರ್ : ಬಿಜೆಪಿ - ಶೇ. 36, ಕಾಂಗ್ರೆಸ್ - ಶೇ. 40.2, ಜೆಡಿಎಸ್ - ಶೇ. 16.1, ಇತರರು - ಶೇ. 7.3
ಜೀನ್ಯೂಸ್ ಮೆಟ್ರೀಜ್ : ಬಿಜೆಪಿ - ಶೇ. 40, ಕಾಂಗ್ರೆಸ್ - ಶೇ. 42, ಜೆಡಿಎಸ್ - ಶೇ. 15, ಇತರರು - ಶೇ. 3
ಸ್ಥಾನಗಳು - ಚುನಾವಣಾಪೂರ್ವ ಸಮೀಕ್ಷೆ:
ಸೌತ್ ಫಸ್ಟ್ - ಪೀಪಲ್ಸ್ ಪಲ್ಸ್ : ಬಿಜೆಪಿ - 81 - 93, ಕಾಂಗ್ರೆಸ್ - 105 - 117, ಜೆಡಿಎಸ್ - 24 - 29, ಇತರರು - 1 - 3
ಎಬಿಪಿ ಸಿವೋಟರ್: ಬಿಜೆಪಿ - 73 - 85, ಕಾಂಗ್ರೆಸ್ - 110 - 122, ಜೆಡಿಎಸ್ - 21 - 29, ಇತರರು - 2 - 6
ಜೀನ್ಯೂಸ್ ಮೆಟ್ರೀಜ್ : ಬಿಜೆಪಿ - 103 - 115, ಕಾಂಗ್ರೆಸ್ - 79 - 91, ಜೆಡಿಎಸ್ - 26-36, ಇತರರು - 1-3
ಸ್ಥಾನಗಳು - ಚುನಾವಣೋತ್ತರ ಸಮೀಕ್ಷೆ:
ಸೌತ್ ಫಸ್ಟ್ - ಪೀಪಲ್ಸ್ ಪಲ್ಸ್ : ಬಿಜೆಪಿ - 78 to 90, ಕಾಂಗ್ರೆಸ್ - 107 to 119, ಜೆಡಿಎಸ್ - 23 to 29, ಇತರರು - 1 to 3
ಎಬಿಪಿ - ಸಿವೋಟರ್: ಬಿಜೆಪಿ - 83 to 95, ಕಾಂಗ್ರೆಸ್ - 100 to 112, ಜೆಡಿಎಸ್ - 21 to 29, ಇತರರು - 2 - 6
ಜೀನ್ಯೂಸ್ ಮೆಟ್ರೀಜ್ : ಬಿಜೆಪಿ - 79 to 94, ಕಾಂಗ್ರೆಸ್ - 103 to 118, ಜೆಡಿಎಸ್ - 25 to 33, ಇತರರು - 2 to 5
ಟುಡೇಸ್ ಚಾಣಕ್ಯ: ಬಿಜೆಪಿ - 92, ಕಾಂಗ್ರೆಸ್ - 120, ಜೆಡಿಎಸ್ - 12
ಸುವರ್ಣ ನ್ಯೂಸ್ - ಜನ್ ಕೀ ಬಾತ್: ಬಿಜೆಪಿ - 94 to 117, ಕಾಂಗ್ರೆಸ್ - 91 to 106, ಜೆಡಿಎಸ್ - 14 to 24, ಇತರರು - 0 to 2
ರಿಪಬ್ಲಿಕ್ ಟಿವಿ - ಮಾರ್ಕ್ Q: ಬಿಜೆಪಿ - 85 to 100, ಕಾಂಗ್ರೆಸ್ - 94 to 108, ಜೆಡಿಎಸ್ - 24 to 32, ಇತರರು - 2 to 6












Click it and Unblock the Notifications