ಪರೀಕ್ಷೆ ಭಯ ಬಿಡಿ: ಓದಿದ್ದನ್ನು ಮರೆಯದಿರಲು ಈ 6 ಹಂತಗಳನ್ನು ಇಂದೇ ಪಾಲಿಸಿ!
ಪರೀಕ್ಷೆ ಅಂದ ಕೂಡಲೆ ಸಾಕು ಎಲ್ಲ ವಿದ್ಯಾರ್ಥಿಗಳಿಗೆ ಭಯ, ಆತಂಕ ಶುರುವಾಗುತ್ತದೆ. ಕೈಯಲ್ಲಿ ಪುಸ್ತಕ ಹಿಡಿದು ಕುಳಿತರೆ ಸಾಕು ತಲೆ ಗಿರಗಿರ ಎನ್ನುತ್ತದೆ. ಇನ್ನೂ ಎಷ್ಟು ಓದಬೇಕು, ಎಷ್ಟು ಬರಿಯಬೇಕು, ಇವತ್ತು ಎಷ್ಟು ಅಧ್ಯಾಯ ಮುಗಿಸಬೇಕು, ಓದಿದ್ದೆಲ್ಲಾ ಮರೆತು ಹೋದರೆ ಹೇಗೆ, ಇದೆ ತರನಾದ ಹಲವಾರು ಗಡಿಬಿಡಿಯಲ್ಲೆ ಅರ್ಧ ಸಮಯ ವ್ಯರ್ಥವಾಗುತ್ತದೆ. ಆದರೆ ನೆನಪಿಡಿ ಸ್ಮಾರ್ಟ್ ಸ್ಟಡಿ ಮಾಡುವವರಿಗೆ ಪರೀಕ್ಷೆ ಎಂಬುದು ಹಬ್ಬವಿದ್ದಂತೆ, ಓದುವ ವಿಷಯದಲ್ಲಿ ನಾನು ಎಷ್ಟು ಓದಬೇಕು ಅನೋದಕ್ಕಿಂತ, ನಾನು ಹೇಗೆ ಓದಬೇಕು ಅನೋದೆ ಒಂದು ಸವಾಲಾಗಿರುತ್ತದೆ.
ನೀವು ಓದಿದ್ದನ್ನು ಮರೆಯಬಾರದು ಮತ್ತು ಪರೀಕ್ಷೆಯಲ್ಲಿ ನೀವೇ ಟಾಪರ್ ಆಗಬೇಕು ಅಂದುಕೊಡಿದ್ದೀರಾ?, ಹಾಗಾದರೆ ನಿಮಗಾಗಿಯೇ ಇದೆ 'SQ3RT' ಎಂಬ ವೈಜ್ಞಾನಿಕ ಸೀಕ್ರೆಟ್. ಈ ಮೆಥಡ್ ಫಾಲೋ ಮಾಡಿದರೆ ನಿಮ್ಮ ಮೆದುಳು ಕಂಪ್ಯೂಟರ್ ಗಿಂತ ವೇಗವಾಗಿ ಕೆಲಸ ಮಾಡೋದು ಗ್ಯಾರಂಟಿ. ಬನ್ನಿ ಈ ಪರೀಕ್ಷಾ ಮಂತ್ರದ ಕಂಪ್ಲೀಟ್ ಡಿಟೇಲ್ಸ್ ತಿಳಿಯೋಣ.

1. ಏನಿದು SQ3RT ಟೆಕ್ನಿಕ್?(Survey)
ಇದು ಓದುವುದನ್ನು ಕೇವಲ ಒಂದು ಯಾಂತ್ರಿಕ ಕೆಲಸವಾಗಿ ಮಾಡದೆ ನೀವು ನಿಮ್ಮ ಮೆದುಗಳಿಗೆ ಅತಿ ಬೇಗ ಅರ್ಥವಾಗುವಂತೆ ಮಾಡುವ ಒಂದು ಸೈಂಟಿಫಿಕ್ ಮೆಥಡ್.
ಇದರ ಪ್ರತಿ ಹಂತಗಳು ಇಲ್ಲಿವೆ.
ವಿಷಯಗಳ ಪಟ್ಟಿ: ಪಾಠದಲ್ಲಿ ಬರುವ ಮುಖ್ಯ ಶಿರ್ಷಿಕೆಗಳು ಮತ್ತು ಉಪ ಶಿರ್ಷಿಕೆಗಳನ್ನು ಗಮನಿಸಿ.
ಸಾರಾಂಶ: ಹೆಚ್ಚಿನ ಪಾಠಗಳ ಕೊನೆಯಲ್ಲಿ ಸಾರಾಂಶ ಅಥವಾ ಇರುತ್ತದೆ ಅದನ್ನು ಮೊದಲು ಓದಿ ಇದರಿಂದ ಆ ಪಾಠವು ಅಸಲಿಗೆ ಯಾವುದರ ಬಗ್ಗೆ ಇದೆ ಎಂಬ ಒಟ್ಟಾರೆ ಕಲ್ಪನೆ ನಿಮ್ಮ ಮೆದುಗಳಿಗೆ ಸಿಗುತ್ತದೆ.
2. ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ(Question)
ಪಸ್ತಕ ಹಿಡಿದು ಸುಮ್ಮನೆ ಕಣ್ಣಾಡಿಸುವ ಬದಲು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ನಾನು ಈಗ ಫಿಸಿಕ್ಸ್ ಅಥವಾ ಮ್ಯಾಥ್ಸ್ ಅನ್ನು ಏಕೆ ಓದಬೇಕು? ಇದರಿಂದ ನನಗೆ ಅಗುವ ಏನು ಪ್ರಯೋಜನ? ಯಾವಾಗ ನಮ್ಮ ಮೆದುಳಿನಲ್ಲಿ ಕುತೂಹಲ (Curiosity) ಮೂಡುತ್ತದೆಯೋ ಆಗ ಕಲಿಯುವ ಆಸಕ್ತಿ ತಾನಾಗಿಯೇ ಹೆಚ್ಚಾಗುತ್ತದೆ.
ಉದಾಹರಣೆ: ಒಬ್ಬ ಪೈಲಟ್‌ಗೆ ಕೇವಲ ಸೈನ್ಸ್ ಎಷ್ಟು ಮುಖ್ಯ ಅದೆ ರೀತಿ ಜಿಯಗ್ರಫಿ ಕೂಡ ಅಷ್ಟೇ ಮುಖ್ಯ ಎಂಬ ಅರಿವಿದ್ದರೆ ಆ ವಿಷಯಗಳನ್ನು ಕಲಿಯುವ ಆಸಕ್ತಿ ಅವನಲ್ಲಿ ತಾನಾಗಿಯೇ ಬರುತ್ತದೆ ಆದ್ದರಿಂದ ಪ್ರಶ್ನೆಗಳು ನಿಮ್ಮನ್ನು ವಿಷಯದ ಆಳಕ್ಕೆ ಕರೆದೊಯ್ಯುತ್ತವೆ.
3. ಓದುವುದು: ಏನು ಓದುತ್ತಿದ್ದೆವೆ ಎಂದು ಅರ್ಥ ಮಾಡಿಕೊಳ್ಳಿ (R - Read)
ಈ ಹಂತದಲ್ಲಿ ಮಾತ್ರ ನೀವು ಪಾಠವನ್ನು ವಿವರವಾಗಿ ಓದಲು ಪ್ರಾರಂಭಿಸಬೇಕು ಆದರೆ ಇಲ್ಲಿ ಎರಡು ಮುಖ್ಯ ಸಂಗತಿಗಳನ್ನು ನೆನಪಿನಲ್ಲಿಡಿ..
ಬಾಯಿಪಾಠ ಬೇಡ: ವಿಷಯಗಳನ್ನು ಬಾಯಿಪಾಠ (ಮಗ್ ಅಪ್) ಮಾಡುವ ಬದಲು ಅವುಗಳನ್ನು ಲಾಜಿಕಲ್ ಆಗಿ ಅರ್ಥ ಮಾಡಿಕೊಳ್ಳಿ ಇದರಿಂದ ಪರೀಕ್ಷೆಯಲ್ಲಿ ಸಹಾಯವಾಗುತ್ತದೆ.
ವಿಷಯಗಳ ವಿಶುವಲೈಸ್(Visualise): ಓದುವ ವಿಷಯಗಳ ಬಗ್ಗೆ ಒಮ್ಮೆ ನಿಮ್ಮ ಕಣ್ಣ ಮುಂದೆ ಒಂದು ಚಿತ್ರ ಅಥವಾ ಸಿನಿಮಾದ ರೂಪದಲ್ಲಿ ಕಲ್ಪಿಸಿಕೊಳ್ಳಿ. ನಮ್ಮ ಮೆದುಳು ಕಪ್ಪು-ಬಿಳುಪು ಅಕ್ಷರಗಳಿಗಿಂತ ಬಣ್ಣಗಳು ಮತ್ತು ದೃಶ್ಯಗಳನ್ನು (Visuals) ಬಹಳ ದೀರ್ಘಕಾಲ ನೆನಪಿಟ್ಟುಕೊಳ್ಳುತ್ತದೆ. ಬೇಕಿದ್ದರೆ YouTube ವಿಡಿಯೋಗಳ ಸಹಾಯದಿಂದ ಆ ವಿಷಯದ ಪ್ರಾಕ್ಟಿಕಲ್ ವಿಡಿಯೋಗಳನ್ನು ನೋಡಿ ಕಾನ್ಸೆಪ್ಟ್ ಅರ್ಥಮಾಡಿಕೊಳಿ.
4. ನೆನಪಿಸಿಕೊಳ್ಳುವುದು ಮತ್ತು ಪುನರಾವರ್ತನೆ ಮಾಡುವುದು(R - Recall)
ಒಂದು ಅಧ್ಯಾಯ ಅಥವಾ ಸಣ್ಣ ಭಾಗವನ್ನು ಓದಿದ ತಕ್ಷಣ ಮುಂದಿನ ಪುಟಕ್ಕೆ ಜಿಗಿಯಬೇಡಿ ಇದು ಬಹುತೇಕ ವಿದ್ಯಾರ್ಥಿಗಳು ಮಾಡುವ ಮೊದಲ ತಪ್ಪು. ಓದಿದ ನಂತರ ಪುಸ್ತಕ ಮುಚ್ಚಿ ನೀವು ಓದಿದ್ದನ್ನು ಕಣ್ಣು ಮುಚ್ಚಿ ನೆನಪಿಸಿಕೊಳ್ಳಲು ಪ್ರಯತ್ನಿಸಿ ಇದರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಷಯಗಳು ನಿಮ್ಮ ಶಾರ್ಟ್ ಟರ್ಮ್ ಮೆಮೊರಿಯಿಂದ (STM) ನೇರವಾಗಿ ಲಾಂಗ್ ಟರ್ಮ್ ಮೆಮೊರಿಯಲ್ಲಿ (LTM) ಉಳಿಯುಲು ಇದು ಅತ್ಯಂತ ಸಹಕಾರಿ.
5. ಮರುಪರಿಶೀಲನೆ ಮಾಡಿಕೊಡು ತಪ್ಪು ಸರಿಪಡಿಸಿ (R - Review)
ನೀವು ಮರುಪರಿಶೀಲನೆ ಮಾಡುವಾಗ ಕೆಲವು ವಿಷಯಗಳನ್ನು ಮರೆತಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಆಗ ತಕ್ಷಣವೇ ಪುಸ್ತಕ ತೆರೆದು ಆ ಭಾಗವನ್ನು ಮತ್ತೆ ಓದಿ ಈ ರೀತಿ ಮಾಡುವುದರಿಂದ ಮರೆತುಹೋದ ವಿಷಯಗಳು ಮೆದುಳಿನಲ್ಲಿ ಗಟ್ಟಿಯಾಗಿ ಉಳಿಯುತ್ತವೆ ಹಾಗೂ ಇದರಿಂದ ನಿಮ್ಮ ಜ್ಞಾನರ್ಜನೆ ಹೆಚ್ಚಾಗುತ್ತದೆ.
6. ಸ್ವತ: ಮೌಲ್ಯಮಾಪನ ಮಾಡಿಕೊಳ್ಳಿ (T - Test)
ಓದಿದ ನಂತರ ಎರಡರಿಂದ ಮೂರು ದಿನಗಳು ಕಳೆದ ಮೇಲೆ ನಿಮಗೆ ಎಷ್ಟು ನೆನಪಿದೆ ಎಂದು ತಿಳಿಯಲು ನೀವೇ ಒಂದು ಸಣ್ಣ ಟೆಸ್ಟ್ ಮಾಡಿಕೊಳ್ಳಿ. ಪ್ರತಿ 2-3 ದಿನಗಳಿಗೊಮ್ಮೆ ಹಿಂದಿನ ಪಾಠಗಳನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ. ಬರಿ ಓದುತ್ತಾ ಹೋದರೆ ಪ್ರಯೋಜನವಿಲ್ಲ ಜೊತೆಯಲ್ಲಿ ಆ ಓದಿದ್ದು ನಿಮಗೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬದು ತಿಳಿದುಕೊಳುವುದೆ ಸ್ವತ: ಮೌಲ್ಯಮಾಪನ.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
KEA Recruitment: ವಾಯುವ್ಯ ಸಾರಿಗೆ ಸಂಸ್ಥೆ ನೇಮಕಾತಿ ಪರೀಕ್ಷೆಗಳ ದಿನಾಂಕ ಬದಲಾವಣೆ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು












Click it and Unblock the Notifications