Malur Result: ಮಾಲೂರು ಕ್ಷೇತ್ರದ ಮರು ಎಣಿಕೆ: ಫಲಿತಾಂಶ ಮಾತ್ರ ಪ್ರಕಟ ಮಾಡುವಂತಿಲ್ಲ!
ಕೋಲಾರ, ನವೆಂಬರ್ 10 : ಸುಪ್ರೀಂಕೋರ್ಟ್ ಆದೇಶದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಂದು ನಡೆದಿದೆ. 023ರ ಚುನಾವಣೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಮರು ಎಣಿಕೆ ನಡೆಯುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಇವಿಎಂ ಮರು ಎಣಿಕೆ ನಡೆದಿದ್ದು, ಎಲ್ಲಾ ಚಿತ್ತ ಮಾಲೂರು ಕ್ಷೇತ್ರದತ್ತ ಇದೆ.
2023ರ ಚುನಾವಣೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಮರು ಎಣಿಕೆ ನಡೆದಿದೆ. ಕೋಲಾರ ಹೊರವಲಯದ ತೋಟಗಾರಿಕಾ ವಿವಿ ಕ್ಯಾಂಪಸ್ ನಲ್ಲಿ ಮತ ಎಣಿಕೆ ಕಾರ್ಯ ನಡೆದಿದೆ. ಮತ ಏಣಿಕೆ ನಡೆದರು ಇಂದು ಯಾವುದೇ ಫಲಿತಾಂಶ ಪ್ರಕಟವಾಗುವುದಿಲ್ಲ. ಇಂದು ಚುನಾವಣಾಧಿಕಾರಿಗಳು ಪಲಿತಾಂಶವನ್ನು ಪ್ರಕಟ ಮಾಡುವಂತಿಲ್ಲ . ಮುಚ್ಚಿದ ಲಕೋಟೆಯಲ್ಲಿ ಪಲಿತಾಂಶವನ್ನ ಕೋರ್ಟ್ ಗೆ ತಲುಪಿಸಬೇಕು. ಕೋರ್ಟ್ ಆದೇಶ ಪ್ರಕಾರ ಇಂದು ಮರು ಮತ ಎಣಿಕೆ ಕಾರ್ಯ ನಡೆದಿದ್ದು, ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಇವಿಎಂ ಮರು ಎಣಿಕೆ ನಡೆದಿದೆ.

ಇನ್ನೂ ಮತ ಎಣಿಕೆಯ ಸಂದರ್ಭದಲ್ಲಿ ಪಕ್ಷದ ಏಜೆಂಟ್ ಗಳನ್ನು ಪೊಲೀಸರು ತಪಾಸಣೆ ಮಾಡಿ ಒಳಗೆ ಬಿಟ್ಟಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆದರು. ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಪೋನ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ನಿಷೇಧ ಮಾಡಲಾಗಿತ್ತು. ಅಲ್ಲದೇ ಮಾಧ್ಯಮದವರಿಗೂ ಚುನಾವಣಾಧಿಕಾರಿಗಳು ನಿಷೇಧ ಹೇರಿದ್ದಾರೆ. ಇಂದಿನ ಮತ ಎಣಿಕೆ ನಡೆಯುತ್ತಿರುವ ಕಡೆ ಮಾಧ್ಯಮಗಳಿಗೂ ಸೇರಿದಂತೆ ಮುಖಂಡರಿಗೂ ಸಹಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ನಿಷೇಧವನ್ನ ಹಾಕಲಾಗಿತ್ತು.
ಕಳೆದ 2023 ರಲ್ಲಿ ನಡೆದಿದ್ದ ವಿಧಾನ ಸಭಾ ಚುನಾವಣೆ ವೇಳೆ, ಮಾಲೂರು ವಿಧಾನ ಸಭಾ ಕ್ಷೇತ್ರದದಲ್ಲಿ ತ್ರಿಕೋನ ಸ್ಪರ್ದೆ ಏರ್ಪಟ್ಟು ಅಂತಿಮವಾಗಿ ಕಾಂಗ್ರೆಸ್ ಗೆಲುವು ಕಂಡಿತ್ತು. 2023 ರ ಸಂದರ್ಭದಲ್ಲಿ ಮತ ಎಣಿಕೆ ಸಮರ್ಪಕ ವಾಗಿ ಆಗಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಕೋರ್ಟ್ ಮೆಟ್ಟಿಲು ಏರಿದ್ದರು. ಬಳಿಕ ಹೈಕೋರ್ಟ್ ನಲ್ಲಿ ಹಾಗೂ ಸುಪ್ರಿಂ ಕೋರ್ಟ್ ನಲ್ಲಿ ಮರು ಮತ ಎಣಿಕೆಗೆ ಆದೇಶಿಸಲಾಗಿತ್ತು. 2023 ರಲ್ಲಿ ಹಾಲಿ ಶಾಸಕ ಕಾಂಗ್ರೆಸ್ ನ ಕೆವೈ ನಂಜೇಗೌಡ ಅವರು 50955 ಮತಗಳನ್ನ ಪಡೆದಿದ್ದರು, ಬಿಜೆಪಿಯ ಕೋಡಿಹಳ್ಳಿ ಮಂಜುನಾಥ್ ಗೌಡ 50707 ಮತಗಳು, ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್- 49362 ಮತಗಳನ್ನ ಪಡೆದಿದ್ದರು.












Click it and Unblock the Notifications