ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್ ಕೊಡೋಕೆ ಪೇಪರ್ ಇಲ್ಲ
Recommended Video

ಬೆಂಗಳೂರು, ಅಕ್ಟೋಬರ್ 10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಟಿಕೆಟ್ ನೀಡಲು ಇರುವ ಕಾಗದ ಸುರುಳಿಗಳು ಲಭ್ಯವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.
ಮೈಸೂರು ಗರ, ವಾಯುವ್ಯ ಸಾರಿಗೆ ಸಂಸ್ಥೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಇಟಿಎಂ ಕೆಟ್ಟುಹೋದಲ್ಲಿ ಮಾಮೂಲಿ ಪದ್ಧತಿಯಲ್ಲಿ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಇಟಿಎಂ ಗಳು ಬಂದ ಮೇಲೆ ಬಹುತೇಕ ನಿರ್ವಾಹಕರು ಇದನ್ನು ಮರೆತಿರುವುದು ಸಮಸ್ಯೆಗ ಒಂದು ಕಾರಣ ಎಂದೇ ಹೇಳಬಹುದು.
ಇಟಿಎಂ ಪೇಪರ್ ರೋಲ್ ಗಳು ಬೇಡಿಕೆಗೆ ಅನುಗುಣವಾಗಿ ಸರಬರಾಜು ಆಗದಿರುವುದು ಇದಕ್ಕೆ ಕಾರಣವಾಗಿದೆ. ನಿರ್ವಾಹಕರು ಸಮಸ್ಯೆ ಎದುರಿಸುವಂತಾಗಿದೆ. ಯಂತ್ರಕ್ಕೆ ಅಗತ್ಯವಿರುವ ಪೇಪರ್ ಗಳನ್ನು ಬೇಡಿಕೆಗೆ ಅನುಗುಣವಾಗಿ ಖರೀದಿಸಲು ಕ್ರಮ ಕೈಗೊಳ್ಳಬೇಕು, ಈ ಸಮಸ್ಯೆ ಬಗ್ಗೆ ಮೇಲಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ನಿರ್ವಾಹಕರು ಒತ್ತಾಯಿಸಿದ್ದಾರೆ.

ದಿನನಿತ್ಯ ಸಾವಿರಾರು ಕೆಎಸ್‌ಆರ್‌ಟಿಸಿ ಬಸ್‌ಗಳು ರಾಜ್ಯಾದ್ಯಂತ ಓಡಾಡುತ್ತವೆ. ಸಮರ್ಪಕವಾಗಿ ಅವರಿಗೆ ಬೇಕಾದ ವಸ್ತುಗಳನ್ನು ನೀಡದಿದ್ದರೆ ಅವರಿಗೆ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತದೆ.












Click it and Unblock the Notifications