ಬಿಎಸ್‌ವೈ ಆಪ್ತ ರುದ್ರೇಗೌಡಗೆ ಎಂಎಲ್‌ಸಿ ಟಿಕೆಟ್, ಈಶ್ವರಪ್ಪಗೆ ನೆಮ್ಮದಿ
ಶಿವಮೊಗ್ಗ, ಮಾರ್ಚ್ 31: ಭಾರಿ ಕುತೂಹಲ ಮೂಡಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆಗೂ ಕೆ.ಎಸ್.ಈಶ್ವರಪ್ಪ ಪಾಲಾಗಿದೆ. ತುರುಸಿನ ಪೈಪೋಟಿ ನಿಡಿದ್ದ ಶಿವಮೊಗ್ಗ ನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರಿಗೆ ಎಂಎಲ್‌ಸಿ ಟಿಕೆಟ್ ನೀಡಲಾಗುತ್ತದೆಯಂತೆ.
ಈ ಬಗ್ಗೆ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಸ್ಪಷ್ಟಣೆ ನೀಡಿದ್ದು, ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪ ಕಣಕ್ಕಿಳಿಯುತ್ತಾರೆ, ರುದ್ರೇಗೌಡ ಅವರನ್ನು ಎಂಎಲ್‌ಸಿ ಆಯ್ಕೆ ಮಾಡಲು ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.

ಶಿವಮೊಗ್ಗ ಬಿಜೆಪಿಯ ಭವಿಷ್ಯ ನಿರ್ಧರಿಸಲಿದ್ದ ಈಶ್ವರಪ್ಪ ಮತ್ತು ರುದ್ರೇಗೌಡ ನಡುವಿನ ಟಿಕೆಟ್ ಸ್ಪರ್ಧೆಯನ್ನು ಎಚ್ಚರಿಕೆಯಿಂದ ಬಗೆಹರಿಸಿರುವ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಇಬ್ಬರೂ ಬಿಜೆಪಿ ಕಟ್ಟಾಳುಗಳು ಒಪ್ಪುವ ರಾಜಿ ಸಂಧಾನ ಸೂತ್ರವನ್ನು ಮುಂದಿಟ್ಟು ಬಂಡಾಯ ಶಮನ ಮಾಡಿದ್ದಾರೆ.
ಈ ಮುಂಚೆ ರುದ್ರೇಗೌಡ ಅವರಿಗೆ ಭದ್ರಾವತಿ ಟಿಕೆಟ್ ನೀಡಿ, ಈಶ್ವರಪ್ಪ ಅವರಿಗೆ ಶಿವಮೊಗ್ಗ ಗರ ಟಿಕಟ್ ನೀಡಲಾಗುತ್ತದೆ ಎಂಬ ಊಹಾಪೋಹ ಹರಿದಾಡುತ್ತಿತ್ತು. ಆದರೆ ಈಗ ಭದ್ರಾವತಿಗೂ ಟಿಕೆಟ್ ಅನ್ನು ಘೋಷಿಸಲಾಗಿದ್ದು, ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರವೀಣ್ ಪಟೇಲ್ ಅವರನ್ನು ಭದ್ರಾವತಿಯಿಂದ ಕಣ್ಣಕ್ಕಿಳಿಸಲಾಗುತ್ತಿದೆ.
ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ರುದ್ರೇಗೌಡ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಸಂಘಟನಾ ಶಕ್ತಿಯಾಗಿದ್ದರು. ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಮತ್ತೊಂದು ಕಡೆ ರಾಯಣ್ಣ ಬ್ರಿಗೆಡ್‌ನಿಂದ ಬಿಜೆಪಿಯಲ್ಲಿ ತನ್ನದೇ ಆದ ಬಳಗ ಹೊಂದಿರುವ ಈಶ್ವರಪ್ಪ ಸಹ ಶಿವಮೊಗ್ಗ ನಗರ ಕ್ಷೇತ್ರದಿಂದಲೇ ಟಿಕೆಟ್ ಕೇಳಿದ್ದರು.
ಈಗ ಶಿವಮೊಗ್ಗ ಬಿಜೆಪಿಯಲ್ಲಿ ಉಟಾಗಿದ್ದ ಮನಸ್ಥಾಪ, ತೆರೆಮರೆ ಬಂಡಾಯ ಶಮನವಾಗಿದ್ದು, ಕಾರ್ಯಕರ್ತರಿಗೆ ಹೊಸ ಹುರುಪು ಬಂದಿದೆ.












Click it and Unblock the Notifications