ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಮೇ 27 : ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶ ಶುಲ್ಕಗಳು ಶೇ 10ರಷ್ಟು ಏರಿಕೆ ಯಾಗಿದೆ. ವೈದ್ಯ ಶಿಕ್ಷಣದ ಕೋರ್ಸ್‌ಗಳ ಶುಲ್ಕಗಳು ಏರಿಕೆಯಾಗುವ ಸಾಧ್ಯತೆ ಇದ್ದು, ಮುಂದಿನ ವಾರ ನಡೆಯುವ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ ಮತ್ತು ಸರ್ಕಾರ ಸೀಟು ಹಂಚಿಕೆ ಮತ್ತು ಶುಲ್ಕ ಹೆಚ್ಚಳದ ಕುರಿತು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿವೆ. ಒಕ್ಕೂಟದ ಪರವಾಗಿ ಕಾರ್ಯದರ್ಶಿ ಪಾಂಡುರಂಗ ಶೆಟ್ಟಿ ಮತ್ತು ಸರ್ಕಾರ ಪರವಾಗಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. [ಮೇ 28ರಂದು ಸಿಇಟಿ ಫಲಿತಾಂಶ ಪ್ರಕಟ]

engineering

ಈ ಒಪ್ಪಂದದ ಪ್ರಕಾರ ಇಂಜಿನಿಯರಿಂಗ್‌ನಲ್ಲಿ ಸಿಇಟಿ ಮೂಲಕ ಶೇ 45, ಕಾಮೆಡ್ ಕೆ ಮೂಲಕ ಶೇ 30ರಷ್ಟು ಸೀಟನ್ನು ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ 25ರಷ್ಟು ಸೀಟು ಕಾಲೇಜಿನ ಆಡಳಿತ ಮಂಡಳಿಗೆ ಸೇರಿದ್ದು. ಆಡಳಿತ ಮಂಡಳಿ ಕೋಟಾದಡಿ ಹಂಚಿಕೆಯಾಗುವ ಸೀಟಿನ ಶುಲ್ಕ ನಿಗದಿ ಮಾಡುವ ಕುರಿತು ಕಾಲೇಜುಗಳೇ ಅಂತಿಮ ತೀರ್ಮಾನ ಕೈಗೊಳ್ಳಲಿವೆ. [ಈ ವರ್ಷ ನೀಟ್ ತಲೆಬಿಸಿ ಇಲ್ಲ, ಸಿಇಟಿ ಸಾಕು]

ಎಷ್ಟು ಹೆಚ್ಚಳವಾಗಲಿದೆ ಶುಲ್ಕ? : ಗುರುವಾರ ನಡೆದ ಒಪ್ಪಂದದ ಅನ್ವಯ ಆಯಾ ಕಾಲೇಜುಗಳ ಶೇಣಿಯ ಅನ್ವಯ ಕಾಮೆಡ್-ಕೆ ಮೂಲಕ ಹಂಚಿಕೆ ಮಾಡುವ ಸೀಟುಗಳಿಗೆ 1.21 ಲಕ್ಷದಿಂದ 1.71 ಲಕ್ಷದಷ್ಟು ಶುಲ್ಕ ಹೆಚ್ಚಳವಾಗಲಿದೆ. ಸಿಇಟಿ ಮೂಲಕ ಹಂಚಿಕೆಯಾಗುವ ಸೀಟುಗಳ ಶುಲ್ಕ ಶೇ 10ರಷ್ಟು ಏರಿಕೆಯಾಗಲಿದೆ. [ಇಂಜಿನಿಯರಿಂಗ್ ಪದವಿಧರರ ವ್ಯಥೆ ಬಿಚ್ಚಿಟ್ಟ ಸಮೀಕ್ಷೆ]

ವೈದ್ಯಕೀಯ ಶುಲ್ಕವೂ ಹೆಚ್ಚಳ : ಇಂಜಿನಿಯರಿಂಗ್ ಮಾತ್ರವಲ್ಲ ವೈದ್ಯಕೀಯ ಕೋರ್ಸ್‌ಗಳ ಶುಲ್ಕವೂ ಹೆಚ್ಚಳ ವಾಗಲಿದೆ. ಮುಂದಿನ ವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka : Engineering college fees to go up by 10 percent for both government as well as COMEDK quota seats. The agreement on this was signed between the colleges and the government on Thursday, May 26, 2016.
Please Wait while comments are loading...