ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು?

By Nayana
|
Google Oneindia Kannada News

Recommended Video

ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು? | Oneindia Kannada

ಬೆಂಗಳೂರು, ಜೂನ್‌ 30: ಎಂಜಿನಿಯರಿಂಗ್‌ ಶುಲ್ಕ ನಿಗದಿ ವಿಚಾರ ಇದೀಗ ಬಗೆಹರಿದಿದ್ದು, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಕೋರ್ಸ್‌ಗಳ ಶುಲ್ಕ ನಿಗದಿ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರಿಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಆರ್ಕಿಟೆಕ್ಚರ್‌ ವಾರ್ಷಿಕ ಶುಲ್ಕ 15 ಸಾವಿರ ಹಾಗೂ ವಿವಿ ಶುಲ್ಕ ಸೇರಿ ಒಟ್ಟು 19,090 ರೂ. ಶುಲ್ಕ ನಿಗದಿಪಡಿಸಿದೆ.

ವೃತ್ತಿಪರ ಕೋರ್ಸ್‌ಗಳ ಶುಲ್ಕ ಶೇ.8ರಷ್ಟು ಹೆಚ್ಚಳಕ್ಕೆ ಸಮಿತಿ ಅಸ್ತುವೃತ್ತಿಪರ ಕೋರ್ಸ್‌ಗಳ ಶುಲ್ಕ ಶೇ.8ರಷ್ಟು ಹೆಚ್ಚಳಕ್ಕೆ ಸಮಿತಿ ಅಸ್ತು

ಕೆಇಎ ಮೂಲಕಹಂಚಿಕೆ ಮಾಡುವ ಶೇ.95 ಸರ್ಕಾರಿ ಸೀಟುಗಳು ಅಂದರೆ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಅನುದಾನಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ 15 ಸಾವಿರ ರೂ. ಹಾಗೂ ವಿವಿ ಶುಲ್ಕ ಸೇರಿ 19,090ರೂ. ಶುಲ್ಕ ಪಾವತಿಸಬೇಕಾಗುತ್ತದೆ.

Engg courses fees for govt quota Rs19.090 only

ಶೇ.5 ಆಡಳಿತಮಂಡಳಿ ಸೀಟುಗಳಿಗೆ 1.21 ಲಕ್ಷ ರೂ.ದಿಂದ 1.7 ಲಕ್ಷ ರೂ.ಗೆ ಶುಲ್ಕ ಮಿತಿಗೊಳಿಸಲಾಗಿದೆ. 2018-19ನೇ ಸಾಲಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 4 ವರ್ಷ ಅವಧಿಯ ಪದವಿ ಕೋರ್ಸ್‌ ಪೂರ್ಣಗೊಳ್ಳುವವರೆಗೆ ವಾರ್ಷಿಕವಾಗಿ ಸೂಚಿಸಿರುವ ಶುಲ್ಕಗಳನ್ನು ಮಾತ್ರ ಪಾವತಿಸುವಂತೆ ಸೂಚಿಸಲಾಗಿದೆ.

ಅಲ್ಪಸಂಖ್ಯಾತವಲ್ಲದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಒಟ್ಟು ಪ್ರವೇಶಾತಿಯಲ್ಲಿ ಎನ್‌ಆರ್‌ಐ ಹಾಗೂ ಇತರೆ ಕೋಟಾದ ಪ್ರವೇಶಾತಿಗೆ ನಿಗದಿಯಾಗಿರುವ ಶೇ.25 ಪ್ರಮಾಣ ಮೀರುವಂತಿಲ್ಲ ಎಂದು ತಿಳಿಸಿದೆ.

English summary
State government has declared fees structure of engineering and architecture courses for government quota with hike of 8 percent than previous year as Rs.19,090 including university's fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X