ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC E-Bus: ಬಾಡಿಗೆ ನೀಡುವ ಬದಲು ಬಸ್ ಖರೀದಿ ಇಲ್ಲವೇ ಗುತ್ತಿಗೆ ನೀಡಿ: ನೌಕರರ ಸಂಘ ಮನವಿ

|
Google Oneindia Kannada News

ಬೆಂಗಳೂರು, ಜನವರಿ 16: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಯಿಂದ ಎಲೆಕ್ಟ್ರಿಕ್ ಬಸ್‌ಗಳು ಅಂತರ್ ನಗರ ವಾಣಿಜ್ಯ ಸಂಚಾರ ಸೋಮವಾರವಷ್ಟೇ ಆರಂಭವಾಗಿದೆ. ಇದು ನಿಗಮದ ಖಾಸಗಿಕರಣಕ್ಕೆ ಮುನ್ನೂಡಿ ಆಗಿದೆ ಎಂದು ಕೆಎಸ್‌ಆರ್‌ಟಿಸಿ ನೌಕರರ ಸಂಘಗಳಿಂದ ಅಸಮಾಧಾನ ವ್ಯಕ್ತವಾಗಿದೆ.

ನಿಗಮವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು. ಇವಿ ಬಸ್‌ಗಳನ್ನು ಕಾರ್ಯಾಚರಣೆಯನ್ನು ಸಂಪೂರ್ಣ ಖಾಸಗೀಕರಣ ಮಾಡುವ ಬಸ್‌ಗಳನ್ನು ಖರೀದಿಸಬೇಕು ಇಲ್ಲವೇ ಬಾಡಿಗೆಗೆ ಪಡೆಯಬೇಕು ಎಂದು ನೌಕರರ ಸಂಘಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ.

KSRTC Electric Bus: ಜ.16 ರಿಂದ ಬೆಂಗಳೂರು-ಮೈಸೂರು ಮಧ್ಯೆ ಮೊದಲ ಅಂತರ್ ಜಿಲ್ಲಾ ಬಸ್ ಸಂಚಾರKSRTC Electric Bus: ಜ.16 ರಿಂದ ಬೆಂಗಳೂರು-ಮೈಸೂರು ಮಧ್ಯೆ ಮೊದಲ ಅಂತರ್ ಜಿಲ್ಲಾ ಬಸ್ ಸಂಚಾರ

ಇ ಬಸ್ ಖಾಸಗಿ ನಿರ್ವಾಹಣೆಗಾರರು ಪ್ರತಿಯೊಂದು ಎಲೆಕ್ಟ್ರಿಕ್ ಬಸ್‌ಗೆ 88 ಲಕ್ಷ ರೂಪಾಯಿ ಸಬ್ಸಿಡಿ ಪಡೆಯುತ್ತಾರೆ. ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಗೆ ಅವರು 10 ಲಕ್ಷ ರೂ. ಸಹಾಯಧನ ಪಡೆಯುತ್ತಾರೆ. ಸಾಲದೆಂಬಂತೆ ನಿಗಮವು ಖಾಸಗಿಯವರಿಗೆ ಭೂಮಿ ಸೇರಿದಂತೆ ಮತ್ತಿತರ ಅಗತ್ಯ ಸಂಪನ್ಮೂಲ ಒದಗಿಸುತ್ತದೆ. ಈ ಎಲ್ಲ ಪ್ರಯೋಜನ ಪಡೆಯುವ ಖಾಸಗಿ ಸಂಸ್ಥೆ/ವ್ಯಕ್ತಿಗಳು ಬೆಳೆಯುತ್ತಾರೆ. ಇದು ಮುಂದೆ ನಿಗಮದ ಖಾಸಗೀಕರಣಕ್ಕೆ ದಾರಿ ಆದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Employees unions demanded for KSRTC e-buses should be buy or lease instead of preventing them

ಕರ್ನಾಟಕದ ಎಲ್ಲ ನಾಲ್ಕು ಸಾರಿಗೆ ನಿಗಮಗಳ (KSRTC, BMTC, NWKRTC ಮತ್ತು KKRTC) ಆಸ್ತಿ ಸರಿಸುಮಾರು 01 ಲಕ್ಷ ಕೋಟಿ ರೂಪಾಯಿ ದಾಟಬಹುದು. ಹೀಗಿದ್ದರು ನಿಗಮವು ತನ್ನ ಬಳಿ ಹಣವಿಲ್ಲ ಎಂದು ಹೇಳುತ್ತಲೇ ಖಾಸಗಿಯವರಿಗೆ ಬಸ್‌ಗಳನ್ನು ಓಡಿಸಲು ಅನುಮತಿ ನೀಡುತ್ತದೆ. ಇದೇ ಖಾಸಗೀಕರಣದ ಮೊದಲ ಹಾದಿ ಎಂದರು.

ಎಷ್ಟೇ ಕಡಿಮೆ ಸಂಖ್ಯೆಯ ಜನರು ಇದ್ದರೂ KSRTC ಬಸ್‌ಗಳು ಸಂಚಾರ ನಡೆಸುತ್ತವೇ. ಈ ರೀತಿ ಖಾಸಗಿ ಒಡೆತನದ ಬಸ್‌ಗಳು ಕಾರ್ಯ ನಿರ್ವಹಣೆ ಅಸಾಧ್ಯ. ಖಾಸಗಿ ಸೇವೆಯು ಜನಸ್ನೇಹಿಯಾಗುತ್ತದೆ ಎಂದು ಊಹಿಸುವುದು ಆಗಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಖಾಸಗೀಕರಣಕ್ಕೆ ಮಾತ್ರ ನಮ್ಮ ಆಕ್ಷೇಪ: ಸ್ಪಷ್ಟನೆ

KSRTC ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್‌.ವಿ.ಅನಂತ ಸುಬ್ಬರಾವ್ ಅವರು, ನಾವು ಇ-ಬಸ್‌ಗಳ ಅಳವಡಿಕೆಗೆ ವಿರುದ್ಧವಾಗಿಲ್ಲ, ಆದರೆ ಕೆಎಸ್‌ಆರ್‌ಟಿಸಿ ಖಾಸಗೀಕರಣಕ್ಕೆ ವಿರುದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

Employees unions demanded for KSRTC e-buses should be buy or lease instead of preventing them

ಬಸ್ ಖರೀದಿ ಅಥವಾ ಬಾಡಿಗೆಗೆ ಪಡೆಯುವ ಬದಲು ಇಡೀ ಸಂಚಾರ ಕಾರ್ಯಾಚರಣೆಯನ್ನು ಖಾಸಗೀಕರಣ ಮಾಡಹೊರಟಿದೆ.

ಸದ್ಯ ನಿಗಮವು ವಿದ್ಯುತ್‌ಚಾಲಿತ ಬಸ್‌ಗಳನ್ನು ಪ್ರಯೋಗಿಸುತ್ತಿದೆ. ಅದಕ್ಕಾಗಿ 12 ವರ್ಷದವರೆಗೆ ಒಪ್ಪಂದದ ಮೇಲೆ ಒಂದೇ ಬಾರಿಗೆ 50 ಬಸ್‌ಗಳಿಗೆ ಅನುಮತಿ ನೀಡಿದೆ. ಇದರ ಬದಲು 10 ಇ-ಬಸ್‌ಗಳಿಗೆ ಅನುಮತಿ ನೀಡವಂತೆ ನಿರ್ಬಂಧ ಹೇರಬೇಕು ಎಂದು ಅವರು ಒತ್ತಾಯಿಸಿದರು.

ಸದ್ಯಕ್ಕೆ ಖಾಸಗಿ ನಿರ್ವಾಹಕರು ಒಪ್ಪಂದಂತೆ 50 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಿದ್ದಾರೆ. ಬಸ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಿಗಮ ಗಮನಿಸುತ್ತಿರುತ್ತದೆ. ಬಸ್‌ಗಳನ್ನು ಬಾಡಿಗೆಗೆ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಸೋಮವಾರಷ್ಟೇ ಇವಿ ಪವರ್ ಪ್ಲಸ್ ಬಸ್ ಬೆಂಗಳೂರಿನಿಂದ ಮೈಸೂರಿಗೆ ತನ್ನ ಮೊದಲ ಸಂಚಾರ ಆರಂಭಿಸಿದೆ. ಒಟ್ಟು ಮೂರು ಗಂಟೆಗಳಲ್ಲಿ ಬಸ್ ಮೈಸೂರು ತಲುಪಿದೆ. ಇದರ ಬೆನ್ನಲ್ಲೆ 50 ಇ ಬಸ್ ರಸ್ತೆಗಿಳಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದ್ದು, ಖಾಸಗಿಯವರ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ವಿರೋಧ ವ್ಯಕ್ತವಾಗುತ್ತಿದೆ.

English summary
Employees unions demanded for KSRTC e-buses should be buy or lease instead of preventing them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X