ಪ್ರವಾಸಿಗರ ಹುಡುಗಾಟಕ್ಕೆ ಮಡಿಕೇರಿಯಲ್ಲಿ ಆನೆ ದಂತ ಭಗ್ನ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಡಿಕೇರಿ,ಫೆಬ್ರವರಿ,22: ಕೋಟೆ ಆವರಣದಲ್ಲಿರುವ ಎರಡು ಆನೆಯ ಪ್ರತಿಮೆಗಳಲ್ಲಿ ಒಂದು ಆನೆಯ ದಂತವನ್ನು ಪ್ರವಾಸಿಗರು ಭಗ್ನಗೊಳಿಸಿದ್ದಾರೆ. ಇದರಿಂದ ಆನೆಯ ಪ್ರತಿಮೆ ಮುಖ ವಿಕೃತಗೊಂಡಂತೆ ಕಾಣುತ್ತದೆ.

ಕೋಟೆಗೆ ಪ್ರತಿದಿನವೂ ಪ್ರವಾಸಿಗರ ಮಹಾಪೂರ ಹರಿದು ಬರುತ್ತಿದೆ. ಹೀಗೆ ಬಂದವರೆಲ್ಲರೂ ಅರಮನೆ ಮತ್ತು ಆನೆಯನ್ನು ವೀಕ್ಷಿಸಿ ಕಣ್ತುಂಬಿಸಿಕೊಳ್ಳುವರು. ಆದರೆ ಆನೆಯನ್ನು ಯಾರೂ ಸ್ಪರ್ಶಿಸಬಾರದೆಂಬ ಉದ್ದೇಶದಿಂದ ಸುತ್ತಲೂ ಕಬ್ಬಿಣದ ಬೇಲಿ ನಿರ್ಮಿಸಿ ಬಂದೋಬಸ್ತ್ ಮಾಡಿದ್ದರೂ ಆನೆಯ ದಂತ ಮುರಿದು ಹೋಗಿದೆ. ಆನೆಯ ದಂತವನ್ನು ಈ ಹಿಂದೆಯೂ ಭಗ್ನಗೊಳಿಸಿದ್ದರು.[ಸವದತ್ತಿಯಲ್ಲಿ ಕುಖ್ಯಾತ ಆನೆ ದಂತ ಚೋರರ ಬಂಧನ]

Madikeri

ಕುತೂಹಲ ತಡೆಯಲಾಗದ ಕೆಲ ಪ್ರವಾಸಿಗರು ಕಬ್ಬಿಣದ ಬೇಲಿಯನ್ನು ದಾಟಿ ಒಳಗೆ ಹೋಗಿ ದಂತವನ್ನು ಹಿಡಿದು ತೂಗುಯ್ಯಾಲೆಯಂತೆ ಆಟ ಆಡುವ ಸನ್ನಿವೇಶದ ಫೋಟೋ ಕ್ಲಿಕ್ಕಿಸುವ ಸಂದರ್ಭದಲ್ಲಿ ಬಹುಶಃ ದಂತ ಭಗ್ನಗೊಂಡಿರಬಹುದು ಎಂದು ಹೇಳಲಾಗಿದೆ.[ಮೈಸೂರು ದಸರಾ ಅರ್ಜುನ ಬಳ್ಳೆ ಶಿಬಿರದಿಂದ ಹೋಗಿದ್ದೆಲ್ಲಿಗೆ?]

ಇದೀಗ ಕೋಟೆಯ ರಕ್ಷಣೆಯ ಜವಾಬ್ದಾರಿ ಹೊತ್ತ ಕೇಂದ್ರ ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಆನೆಯ ದಂತ ಭಗ್ನದ ಕುರಿತು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.[ಆನೆಯನ್ನು ತುಂಡರಿಸಿ ಬಾವಿಗೆ ಹಾಕಿದ ರೈತ]

ಪ್ರಸ್ತುತ ಕೋಟೆಯೊಳಗಡೆ ಜಿಲ್ಲಾಡಳಿತದ ಕಚೇರಿಗಳು ನೂತನ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಿದೆ, ಇದೀಗ ಕೇವಲ ಲೋಕೋಪಯೋಗಿ ಇಲಾಖೆ, ಗ್ರಂಥಾಲಯ, ಜಿಲ್ಲಾ ಪಂಚಾಯತ್ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ, ಹೀಗಾಗಿ ಕೋಟೆಯೊಳಗೆ ಜನಸಂದಣಿ ಕ್ಷೀಣಿಸಿದ್ದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ.[ಕಾಡುಪ್ರಾಣಿಗಳ ಉಪಟಳದಿಂದ ನಗರ ಮಂದಿಗೆ ಮುಕ್ತಿ ಯಾವಾಗ?]

ಮಡಿಕೇರಿ ಕೋಟೆ:

ಮಡಿಕೇರಿ ಕೋಟೆಯನ್ನು ಮುದ್ದುರಾಜ ಎಂಬುವವನು 17ನೇ ಶತಮಾನದ ದ್ವಿತೀಯಾರ್ಧದಲ್ಲಿ ಸ್ಥಾಪಿಸಿದನು. ಈತ ಕೋಟೆಯ ಒಳಗೆ ಅರಮನೆ ನಿರ್ಮಿಸಲಾಗಿದೆ. ಇದನ್ನು ಟಿಪ್ಪು ಸುಲ್ತಾನ್ ಗ್ರಾನೈಟ್ ಶಿಲೆಗಳಿಂದ ಮರು ನಿರ್ಮಾಣ ಮಾಡಿ ಅದಕ್ಕೆ 'ಜಫರಾಬಾದ್' ಎಂದು ಹೆಸರಿಟ್ಟನು. ಇದನ್ನು 1790ರಲ್ಲಿ ದೊಡ್ಡವೀರ ರಾಜೇಂದ್ರ ತನ್ನ ಹಿಡಿತಕ್ಕೆ ತೆಗೆದುಕೊಂಡನು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elephant statue's ivory destroyed in Madikeri. The archaeological officials filed complaint in city police station about this incident.
Please Wait while comments are loading...