Elephant Census 2023: ದೇಶದಲ್ಲೇ ಅತ್ಯಧಿಕ ಆನೆಗಳನ್ನು ಹೊಂದಿದ ಕರ್ನಾಟಕ, ಎಲ್ಲೆಲ್ಲಿ ಎಷ್ಟು?, ವಿಭಾಗವಾರು ಮಾಹಿತಿ ಇಲ್ಲಿದೆ
ಕರ್ನಾಟಕ, ಆಗಸ್ಟ್, 10: ಆನೆಗಳ ಗಣತಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. 2017ರಲ್ಲಿ ನಡೆದ ಗಣತಿಯಲ್ಲಿ ರಾಜ್ಯದಲ್ಲಿ ಸುಮಾರು 6,049 ಆನೆಗಳು, ಈ ವರ್ಷ (2023) 6,395 ಆನೆಗಳಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ್ಯಾವ ವಿಭಾಗಗಳಲ್ಲಿ ಎಷ್ಟೆಷ್ಟು ಆನೆಗಳಿವೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯದಗಳ ಆನೆಗಳ ಗಣತಿ ನಡೆಸಿದ್ದು, ಈ ವೇಳೆ ಆಂಧ್ರಪ್ರದೇಶ ಹೊರತುಪಡಿಸಿ 3 ರಾಜ್ಯಗಳ ಮಾಹಿತಿಯೂ ಲಭ್ಯವಾಗಿದೆ. ಅದರಲ್ಲೂ ಕರ್ನಾಟಕ ದೇಶದಲ್ಲೇ ಅತ್ಯಧಿಕ ಆನೆಗಳನ್ನು ಹೊಂದಿರುವ ರಾಜ್ಯ ಎನ್ನುವ ಹೆಗ್ಗೆಳಿಕೆಗೆ ಪಾತ್ರವಾಗಿದೆ. ಈ ಪೈಕಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅತೀ ಹೆಚ್ಚು ಆನೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಆನೆಗಳ ಸಂಖ್ಯೆ
- 1. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ - 1,116
- 2. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ - 831
- 3. ಮಲೈಮಹದೇಶ್ವರ ಬೆಟ್ಟ ವನ್ಯಜೀವಿಧಾಮ - 706
- 4. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ - 619
- 5. ಭದ್ರಾ ಹುಲಿ ಸಂರಕ್ಷಿತ ಪ್ರದೇಶ - 445
- 6. ಕಾವೇರಿ ವನ್ಯಜೀವಿಧಾಮ - 236
- 7. ಮಡಿಕೇರಿ ಪ್ರಾದೇಶಿಕ ವಿಭಾಗ - 2148
- 8. ಕೊಪ್ಪ ವಿಭಾಗ - 128
- 9. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ - 127
- 10. ಶಿವಮೊಗ್ಗ ವನ್ಯಜೀವಿ ವಿಭಾಗ - 127
- 11. ಮಡಿಕೇರಿ ವನ್ಯಜೀವಿ ವಿಭಾಗ - 113
- 12. ಹಾಸನ ವಿಭಾಗ - 66
- 13. ಮೈಸೂರು ಪ್ರಾದೇಶಿಕ ವಿಭಾಗ - 59
- 14. ವಿರಾಜಪೇಟೆ ವಿಭಾಗ - 58
- 15. ಮಂಗಳೂರು ವಿಭಾಗ - 47
- 16. ಕಾಳಿ ಹುಲಿ ಸಂರಕ್ಷಿತ ಪ್ರದೇಶ- 38
- 17. ರಾಮನಗರ ವಿಭಾಗ - 33
- 18. ಚಿಕ್ಕಮಗಳೂರು ವಿಭಾಗ - 33
- 19. ಕೋಲಾರ ವಿಭಾಗ - 13
- 20. ಭದ್ರಾವತಿ ವಿಭಾಗ - 08
- 21. ಕುದುರೆಮುಖ ವಿಭಾಗ - 05
- 22. ಹಳಿಯಾಳ ವಿಭಾಗ - 03
- 23. ಯಲ್ಲಾಪು ವಿಭಾಗ - 02












Click it and Unblock the Notifications