ಬಿಜೆಪಿ ಸರ್ಕಾರ ತೊಲಗುವಾಗಲೂ ಜನರಿಗೆ ಬರೆ ಎಳೆದಿದೆ: ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಎರ್ರಾಬಿರ್ರಿ ಕರೆಂಟ್ ಬಿಲ್ ಏರಿಕೆಯಾಗಿ ಕನ್ನಡಿಗರು ಕಂಗಾಲಾಗಿ ಹೋಗಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಅಸ್ತ್ರ ಪ್ರಯೋಗಿಸುತ್ತಿದೆ. ಆದರೆ ಕರೆಂಟ್ ಬಿಲ್ ಹೆಚ್ಚಳವಾಗಿದ್ದು ಬಿಜೆಪಿ ಸರ್ಕಾರದಲ್ಲೇ ಅನ್ನೋ ಮಾಹಿತಿ ಹೊರಬಿದ್ದಿದ್ದು, ಇದು ರಾಜ್ಯ ಕಾಂಗ್ರೆಸ್ ನಾಯಕರನ್ನ ಕೆರಳಿಸಿದೆ.

ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಎಲ್ಲರೂ ಫ್ರೀ ವಿದ್ಯುತ್ ಬಗ್ಗೆ ಖುಷಿಯಾಗಿದರು. ಆದರೆ ಈ ತಿಂಗಳ ಕರೆಂಟ್ ಬಿಲ್ ನೋಡಿ ಎಷ್ಟೋ ಜನರಿಗೆ ಎದೆಬಡಿತ ಏರುಪೇರಾಗಿ ಹೋಗಿದೆ. ಇನ್ನು ಇದೇ ಸಂದರ್ಭದಲ್ಲಿ ಹೊಸ ಸರ್ಕಾರದ ಮೇಲೆ ಬಿಜೆಪಿ ಆರೋಪ ಹೊರಿಸುತ್ತಿತ್ತು. ಆದರೆ ಈಗ ನೋಡಿದರೆ ಬಿಜೆಪಿಗೆ ಇದೇ ಅಸ್ತ್ರ ಉಲ್ಟಾ ಆಗೋಗಿದೆ. ಕರೆಂಟ್ ದರ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ ಅನ್ನೋ ಮಾಹಿತಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ ನಾಟಕ ಮಾಡುತ್ತಿದೆ ಬಿಜೆಪಿ ಎಂದು ಕಾಂಗ್ರೆಸ್ ಆರೋಪಿಸಿದೆ.

Electricity rate hike war between Congress and BJP

'ಬಿಜೆಪಿ ಸರ್ಕಾರ ತೊಲಗುವಾಗಲೂ...'

ಇಷ್ಟುದಿನ ಬಿಜೆಪಿ ಹೇಳಿದ್ದೇ ಬೇರೆ, ಆದರೆ ಬಿಜೆಪಿ ಸರ್ಕಾರ ಅಧಿಕಾರ ಅವಧಿ ಮುಗಿಸುವ ಮೊದಲೇ ರಾಜ್ಯದಲ್ಲಿ ವಿದ್ಯುತ್ ಬೆಲೆ ಏರಿಸಿದೆ ಅಂತಿದೆ ಕಾಂಗ್ರೆಸ್. ಹಾಗೇ ಈ ಕುರಿತಾಗಿ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್, 'ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ ನಾಟಕ ಮಾಡುತ್ತಿದೆ @BJP4Karnataka. ಬಿಜೆಪಿ ಸರ್ಕಾರ ತೊಲಗುವಾಗಲೂ ಜನತೆಗೆ ಬರೆ ಎಳೆದೇ ಹೋಗಿದೆ. ಚುನಾವಣಾ ಪೂರ್ವದಲ್ಲೇ ವಿದ್ಯುತ್ ದರ ಏರಿಕೆಗೆ ಬಿಜೆಪಿ ಸರ್ಕಾರ ನೀಡಿದ್ದ ಆದೇಶ ಈಗ ಜಾರಿಯಾಗಿದೆ. ಈಗಿನ ವಿದ್ಯುತ್ ದರ ಏರಿಕೆಗೆ ಹೊಣೆ ಯಾರು ಎಂಬ ಸತ್ಯ ಹೇಳುವ ಧೈರ್ಯ ಬಿಜೆಪಿಗಿದೆಯೇ?' ಎಂದು ಚಾಲೆಂಜ್ ಹಾಕಿದೆ ಕಾಂಗ್ರೆಸ್.

ಜನರ ಪರದಾಟ, ಸರ್ಕಾರದ ಕ್ರಮವೇನು?

ಹೌದು, ಈಗ ಬಿಜೆಪಿ ಸರ್ಕಾರವೇ ವಿದ್ಯುತ್ ದರವನ್ನು ಏರಿಕೆ ಮಾಡಿದೆ ಅಂತಾದರೆ, ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮತ್ತೆ ದರ ಇಳಿಸಲಿ ಅನ್ನೋ ಒತ್ತಾಯ ಕೂಡ ಈಗ ಕೇಳಿಬಂದಿದೆ. ಅಲ್ಲದೆ ದರ ಏರಿಸಿದ್ದು ಬಿಜೆಪಿ ವಿರುದ್ಧವೂ ಸೋಷಿಯಲ್ ಮೀಡಿಯಾ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ಜನರು ಮಾತ್ರ ಪರದಾಡುತ್ತಿದ್ದು, ಬಿಜೆಪಿ & ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನ ಬಿಟ್ಟು ಜನರ ಕಷ್ಟ ಸ್ಪಂದಿಸಿ ವಿದ್ಯುತ್ ಬೆಲೆಯನ್ನ ಮತ್ತೆ ಮೊದಲಿನಂತೆ ಮಾಡಲಿ ಅಂತಿದ್ದಾರೆ ಜನ. ಹಾಗೇ ಬಿಜೆಪಿ ಸರ್ಕಾವೇ ವಿದ್ಯುತ್ ಬೆಲೆ ಏರಿಕೆಗೆ ಆದೇಶ ನೀಡಿದೆ ಅನ್ನೋ ಮಾಹಿತಿ ಮುಂದಿನ ದಿನಗಳಲ್ಲಿ ಭಾರಿ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.

Electricity rate hike war between Congress and BJP

ಗ್ಯಾರಂಟಿ ವಿಚಾರದಲ್ಲೂ ಫೈಟಿಂಗ್ ಜೊರು!

ಹಾಗೇ ನಿನ್ನೆಯಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ಉಚಿತ ಬಸ್ ಪ್ರಯಾಣದ ಕುರಿತಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಗರಂ ಆಗಿತ್ತು. ಇದೀಗ ಬಿಜೆಪಿ ಆರೋಪಗಳಿಗೆ ಪರೋಕ್ಷವಾಗಿ ಉತ್ತರ ನೀಡಿದ ಕಾಂಗ್ರೆಸ್, ಟ್ವೀಟ್ ಒಂದನ್ನ ಮಾಡಿ ಬಿಜೆಪಿ ನಾಯಕರನ್ನ ಕೆಣಕಿದೆ. 'ಹೊಟ್ಟೆ ತುಂಬಿದವರು ನೂರಾರು ಕುಹುಕವಾಡಬಹುದು. ಹಸಿದವರ ಸಂತೃಪ್ತಿಯೇ ಕಾಂಗ್ರೆಸ್‌ಗೆ ಪ್ರಮುಖವಾಗುತ್ತದೆ. ನಮ್ಮ ಯೋಜನೆಗಳು ಬಡವರನ್ನು ಸಂತೈಸಿದರೆ ನಮಗೆ ಸಾರ್ಥಕ ಭಾವ ಮೂಡಿಸುತ್ತದೆ.' ಎನ್ನುವ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ. ಈ ಮೂಲಕ ಪ್ರತಿಯೊಂದು ವಿಚಾರದಲ್ಲೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಕಿರಿಕ್ ಮುಂದುವರಿದಿದೆ.

ಒಟ್ನಲ್ಲಿ ಬಿಜೆಪಿ & ಕಾಂಗ್ರೆಸ್ ನಡುವೆ ಹೊತ್ತಿರುವ ಈ ಬೆಂಕಿ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ಆದರೆ ಮತದಾರರು ಮಾತ್ರ ವಿದ್ಯುತ್ ದರ ಏರಿಕೆ ಪರಿಣಾಮ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿದ್ಯುತ್ ದರ ಏರಿಕೆಯನ್ನ ಹೊಸ ಸರ್ಕಾರ ಮತ್ತೆ ಪರಿಶೀಲನೆ ಮಾಡಿ, ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆ ಘೋಷಿಸಿದ್ದರೂ ಅದನ್ನ ಈಗ ವಾಪಸ್ ಪಡೆಯಲಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಈ ಕೆಲಸ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಕೂಡ ರೊಚ್ಚಿಗೆದ್ದು ಟ್ವೀಟ್ ವಾರ್ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+