ಬಿಜೆಪಿಗೆ ಆತ್ಮ ಇದ್ದರೆ ಆತ್ಮಸಾಕ್ಷಿಯಿಂದ ಬೆಲೆ ಏರಿಸಿದ್ದನ್ನು ಒಪ್ಪಿಕೊಳ್ಳಲಿ: ಕಾಂಗ್ರೆಸ್

ಬೆಂಗಳೂರು: ಕನ್ನಡಿಗರಿಗೆ ವಿದ್ಯುತ್ ದರ ಏರಿಕೆ ಬರಸಿಡಿಲಿನ ರೀತಿ ಬಡಿದಿದೆ. ಅದರಲ್ಲೂ ಉಚಿತ ವಿದ್ಯುತ್ ಸಿಗಲಿದೆ ಅಂತಾ ಕಾದವರಿಗೂ ವಿದ್ಯುತ್ ಬೆಲೆ ಏರಿಕೆ ಶಾಕ್ ನೀಡಿದೆ. ಈ ಕಾರಣಕ್ಕೆ ಬಿಜೆಪಿ & ಕಾಂಗ್ರೆಸ್ ಮಧ್ಯೆ ಕೆಸರೆರಚಾಟ ಮುಂದುವರಿದಿದೆ. ಬಿಜೆಪಿ ಬೆಲೆ ಏರಿಕೆ ಮಾಡಿ ಹೋಗಿದೆ ಅಂತಾ ಕಾಂಗ್ರೆಸ್ ಆರೋಪಿಸಿದ್ದು, ಬಿಜೆಪಿ ನಾವ್ ಮಾಡಿಲ್ಲ ಅಂತಿದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ 1 ತಿಂಗಳೂ ಕಳೆದಿಲ್ಲ, ಅದಾಗಲೇ ವಿದ್ಯುತ್ ಬೆಲೆ ಏರಿಕೆ ಆಗಿದೆ ಅಂತಾ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾವು ಬೆಲೆ ಏರಿಕೆ ಮಾಡಿಲ್ಲ. ಬೆಲೆ ಏರಿಕೆ ಮಾಡಿರೋದೆ ಬಿಜೆಪಿ. ತನ್ನ ಆಡಳಿತಾವಧಿ ಮುಗಿಸಿ ಹೋಗುವ ಮೊದಲು, ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ BJP ಸರ್ಕಾರ ವಿದ್ಯುತ್ ಬೆಲೆ ಏರಿಸಿದೆ ಅಂತಿದ್ದಾರೆ ಕಾಂಗ್ರೆಸ್ ನಾಯಕರು. ಈ ನಡುವೆ ಇವರಿಬ್ಬರ ಕಿತ್ತಾಟದಲ್ಲಿ ರಾಜ್ಯದ ಜನ ಪರದಾಡುವ ಸ್ಥಿತಿ ಬಂದಿದೆ. ಹಾಗಾದರೆ 1 ತಿಂಗಳು ಕಳೆಯುವ ಮೊದಲೇ ಕಾಂಗ್ರೆಸ್ ವಿದ್ಯುತ್ ಬೆಲೆ ಏರಿಕೆ ಮಾಡಿದೆಯಾ? ಅಥವಾ ಈ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರನಾ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

Electricity price hike war between Congress and BJP in Karnataka continues

ವಿದ್ಯುತ್ ಬೆಲೆ ಏರಿಸಿದ್ದು ಯಾರು?

ಹೌದು, ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸೂಕ್ತದಾಖಲೆ ಹೊರತೆಗೆಯಬೇಕು. ಅಕಸ್ಮಾತ್ ಬಿಜೆಪಿ ಸರ್ಕಾರವೇ ವಿದ್ಯುತ್ ದರ ಏರಿಕೆ ಮಾಡಿದ್ದರೆ, ಅದನ್ನ ಸೂಕ್ತವಾಗಿ ದಾಖಲೆ ಸಮೇತ ಜನರ ಎದುರು ಇಡಬೇಕಾಗಿದೆ ಅಂತಿದ್ದಾರೆ ಜನ. ಈ ನಡುವೆ ಬಿಜೆಪಿ ಮಾತ್ರ ನಾವು ವಿದ್ಯುತ್ ಬೆಲೆ ಏರಿಸಿಲ್ಲ ಅಂತಿದೆ. ಕಾಂಗ್ರೆಸ್ ಈ ವಿಚಾರ ಅಸ್ತ್ರವಾಗಿಸಿಕೊಂಡಿದೆ. ಸ್ಥಿತಿ ಹೀಗಿದ್ದಾಗ ಟ್ವಿಟ್ಟರ್‌ನಲ್ಲೂ ಬಿಜೆಪಿ, ಕಾಂಗ್ರೆಸ್ ಜಿದ್ದಿಗೆ ಬಿದ್ದು ವಾರ್ ನಡೆಸಿವೆ. ಅದ್ರಲ್ಲೂ ಕಾಂಗ್ರೆಸ್ ಒಂದು ಟ್ವೀಟ್ ಮಾಡಿದ್ರೆ ಅದಕ್ಕೆ ಬಿಜೆಪಿ ಮತ್ತೊಂದು ಟ್ವೀಟ್ ಮಾಡಿ ರೀಪ್ಲೇ ಕೊಡುತ್ತಿದೆ! ಮುಂದೆ ಓದಿ.

'ಬಿಜೆಪಿಗೆ ಆತ್ಮ ಇದ್ದರೆ ಆತ್ಮಸಾಕ್ಷಿಯಿಂದ'

ಅಂದಹಾಗೆ ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾರ್ ಬಲು ಜೋರಾಗಿದೆ. ಈ ಬಗ್ಗೆ ಟ್ವೀಟ್ ಮಾಡಿ ಬಿಜೆಪಿಗೆ ಚಾಲೆಂಜ್ ಹಾಕಿರುವ ಕಾಂಗ್ರೆಸ್‌ನ ನಾಯಕರು, 'ವಿದ್ಯುತ್ ದರ ಏರಿಸಿ, ಚುನಾವಣೆಯ ನಂತರ ಜಾರಿಗೆ ಬರುವಂತೆ ತಂತ್ರ ರೂಪಿಸಿದ @BJP4Karnataka ಈಗ ವಿದ್ಯುತ್ ದರ ಏರಿಕೆಯ ಬಗ್ಗೆ ಆತ್ಮವಂಚಕತನದ ಮಾತಾಡುತ್ತಿದೆ.. ಬಿಜೆಪಿಗೆ ಆತ್ಮ ಇದ್ದರೆ ಆತ್ಮಸಾಕ್ಷಿಯಿಂದ ಬೆಲೆ ಏರಿಸಿದ್ದನ್ನು ಒಪ್ಪಿಕೊಂಡು ಜನರ ಕ್ಷಮೆ ಕೇಳಲಿ!!' ಎಂದು ಸವಾಲು ಹಾಕಿದೆ ಕಾಂಗ್ರೆಸ್. ಮತ್ತೊಂದ್ಕಡೆ ಬಿಜೆಪಿ ಕೂಡ ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದೆ.

Electricity price hike war between Congress and BJP in Karnataka continues


'ತಮ್ಮ ಭಂಡತನದಿಂದ ರಾಜ್ಯಕ್ಕೆ ಕೆಡಕಾಗುತ್ತಿದೆ'

ಮತ್ತೊಂದ್ಕಡೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಈ ರೀತಿ ಇದ್ದು, 'ಮುಂಬಾಗಿಲಿನಲ್ಲಿ ನಿಂತು ಎಲ್ಲರಿಗೂ ಉಚಿತ ವಿದ್ಯುತ್ ಅಂತ ಹೇಳಿ, ಹಿಂಬಾಗಿಲಿನಿಂದ ವಿದ್ಯುತ್ ಬೆಲೆಗಳನ್ನು ಗಗನಕ್ಕೆ ಏರಿಸಿರುವ #ATMSarkara ತಂತ್ರ ಬಯಲಾಗಿದೆ. @siddaramaiah ರವರೇ, ಇದೀಗ ತಮ್ಮದೇ ಪಕ್ಷದ ಮತ್ತೋರ್ವ ಶಾಸಕ @TanveerSaitINC ಅವರು ನಿಮಗೆ ಪತ್ರಬರೆದು ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿದರೂ, ಅದನ್ನು ಲೆಕ್ಕಿಸದಿರುವಷ್ಟು ಭಂಡರಾಗಿದ್ದೀರ? ತಮ್ಮ ಭಂಡತನದಿಂದ ರಾಜ್ಯಕ್ಕೆ ಕೆಡಕಾಗುತ್ತಿದೆ ನೆನಪಿರಲಿ.' ಎಂದು ಭವಿಷ್ಯ ನುಡಿದಿದೆ.

ಹೀಗೆ ಎರಡೂ ಪಕ್ಷಗಳು ಟ್ವೀಟ್ ಮಾಡುತ್ತಾ, ಒಬ್ಬರಿಗೊಬ್ಬರು ಆರೋಪ & ಪ್ರತ್ಯಾರೋಪ ಮಾಡುತ್ತಾ ಬ್ಯುಸಿಯಾಗಿವೆ. ಆದರೆ ಜನ ಮಾತ್ರ ವಿದ್ಯುತ್ ಬೆಲೆ ಏರಿಕೆಯಿಂದ ಕಂಗಾಲಾಗಿ ಹೋಗಿದ್ದಾರೆ. ಬಿಜೆಪಿ ಸರ್ಕಾರವೇ ಬೆಲೆ ಏರಿಕೆ ಮಾಡಿದೆ ಅನ್ನೋ ಮಾತಿನ ನಡುವೆ ಇತ್ತ ಕಾಂಗ್ರೆಸ್ ಇದೇ ವಿಚಾರ ಹಿಡಿದು ಫೈಟ್ ಮಾಡುತ್ತಿದೆ. ಅದರ ಬಲದಾಗಿ ಬಿಜೆಪಿ ಸರ್ಕಾರ ವಿದ್ಯುತ್ ಬೆಲೆ ಏರಿಸಿದ್ದರೂ, ಆ ಆದೇಶ ಮರು ಪರಿಶೀಲನೆ ಮಾಡಲಿ ಅನ್ನೋದೆ ಜನರ ಆಶಯ. ಮುಂದೆ ಏನಾಗುತ್ತೋ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+