• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಸಿದ್ದರಾಮಯ್ಯ ಗೆಲ್ಲುವ ಸೇಫ್ ಪ್ಲೇಸ್ ಎಲ್ಲೂ ಇಲ್ಲ: ಆರ್. ಅಶೋಕ

|
Google Oneindia Kannada News

ಬೆಂಗಳೂರು, ನವೆಂಬರ್ 22: ''ಸಿದ್ದರಾಮಯ್ಯ ಹಾಕಿರೋ ಅಪ್ಲಿಕೇಶನ್‌ನಲ್ಲಿ ಕ್ಷೇತ್ರದ ಹೆಸರು ಉಲ್ಲೇಖ ಆಗದ ವಿಚಾರವಾಗಿ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಗೆಲ್ಲುವ ಸೇಫ್ ಪ್ಲೇಸ್ ಎಲ್ಲೂ ಇಲ್ಲ'' ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಬೇರೆ ರಾಜ್ಯ ಹುಡುಕಿಕೊಳ್ಳೋದು ಸೇಫ್. ಅವರು ಹುಟ್ಟಿ, ಬೆಳೆದ ಜಾಗದಲ್ಲಿ ಕೂಡ ತಿರಸ್ಕರಿಸಿದ್ದಾರೆ. ಬಾದಾಮಿ ಸವಿಯೋಕೆ ಅಂತ ಬಾದಾಮಿಗೆ ಹೋದ್ರು, ಕೋಲಾರದಲ್ಲಿ ಈಗ ಮುನಿಯಪ್ಪ ಕೂಡ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ವಾಪಸ್ ಮರಳಿ ಮನೆಗೆ ಅಂತ ಹೊರಟಿದ್ದಾರೆ. ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯ ನೆಗಲೆಕ್ಟ್ ಮಾಡಿದ್ದಾರೆ ಎಂದರು.

ನ. 22ರಿಂದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನ. 22ರಿಂದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಸಿದ್ದರಾಮಯ್ಯಗೆ ಬಿಜೆಪಿ, ಜೆಡಿಎಸ್ ಭಯವಿಲ್ಲ, ಸ್ವಪಕ್ಷೀಯರಿಂದಲೇ ಭಯ

ಸಿದ್ದರಾಮಯ್ಯ ಅವರಿಗೆ ಬಿಜೆಪಿ, ಜೆಡಿಎಸ್ ಭಯವಿಲ್ಲ, ಸ್ವಪಕ್ಷೀಯರೇ ಅವರಿಗೆ ಭಯ. ಅವರು ಅನೇಕರ ಸೋಲಿಗೆ ಕಾರಣವಾಗಿದ್ದರು ಅಂತ ಆರೋಪವಿದೆ. ಹಿಂದೆ ಪರಮೇಶ್ವರ್ ನಾನೇ ಸಿಎಂ ಅಂತಿದ್ರು ಅವರನ್ನೇ ಸೋಲಿಸಿದ್ರು. ಹೀಗಾಗಿ ಸ್ವಪಕ್ಷೀಯರೇ ಅವರನ್ನ ಸೋಲಿಸ್ತಾರೆ ಅನ್ನೋ ಭಯ ಇದೆ. ಸಿದ್ದರಾಮಯ್ಯ ದಾರಿ ಕಾಣದಯ್ಯ ಅಂತ ಆಗಿದೆ. ಬಾದಾಮಿ ಹೋಗಿ ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಅಂತಾಗಿದೆ. ಕಾಂಗ್ರೆಸ್ ನಲ್ಲಿ ಈ ದುಸ್ಥಿತಿ ಬರಬಾರದಿತ್ತು. ಕಾಂಗ್ರೆಸ್ ‌ಪಕ್ಷದಲ್ಲಿ ಸಿಎಂ ನಾನೇ ಅಂದವರನ್ನು ಪಕ್ಷದವರೇ ಸೋಲಿಸುತ್ತಾರೆ ಎಂದರು..

ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ವಿಜಯೇಂದ್ರ ಅವರನ್ನ ನಿಲ್ಲಿಸುವ ವಿಚಾರವಾಗಿ ಮಾತನಾಡಿ, ವರುಣಾದಲ್ಲಿ ಯಾರನ್ನು ನಿಲ್ಲಿಸಬೇಕು ಅನ್ನುವುದನ್ನು ನಿರ್ಧರಿಸಲು ನಮ್ಮಲ್ಲಿ ಚುನಾವಣಾ ಮಂಡಳಿ ಇದೆ. ಯಡಿಯೂರಪ್ಪನವರು ಕೂಡ ಅದರಲ್ಲಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಗೆಲ್ಲುವ ಅಭ್ಯರ್ಥಿ ಹಾಕ್ತೀವಿ. ಈಗ ಅವರು ಸ್ವಪಕ್ಷೀಯ ಶತ್ರು ಸಂಹಾರ ಯಾಗ ಮಾಡಬೇಕು ಎಂದು ಹೇಳಿದರು.

ಸಿಎಂ ಬೊಮ್ಮಾಯಿ ಕೂಡ ಕ್ಷೇತ್ರ ಹುಡುಕ್ತಿದ್ದಾರೆ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮಾತ್ರ ಹುಡುಕ್ತಿದ್ದಾರೆ. ನಮ್ಮ ಸಿಎಂ ಅಲ್ಲೇ ಸ್ಪರ್ಧೆ ಮಾಡ್ತಾರೆ, ಅಲ್ಲೇ ಗೆಲ್ತಾರೆ ಎಂದರು.

ವೋಟರ್ ಐಡಿ ಪ್ರಕರಣದ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಯುದ್ಧಕ್ಕೆ ಬರುವ ಮೊದಲೇ ಸೋಲನ್ನ ಒಪ್ಪಿಕೊಂಡಿದ್ದಾರೆ. ಆಗ ಇವಿಎಂ ಸರಿ ಇಲ್ಲ ಅಂತಿದ್ರು, ಈಗ ಜಾಗೃತಿ ಮೂಡಿಸೋದು ಸರಿ ಇಲ್ಲ ಅಂತಿದ್ದಾರೆ. ಎಸ್.ಸಿ, ಎಸ್.ಟಿ ರಿಸರ್ವೇಷನ್, ಕೆಂಪೇಗೌಡರ ಪುತ್ಥಳಿ ಅನಾವರಣ ಅನೇಕ ನಮ್ಮ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಹೆದರಿದೆ. ಅದಕ್ಕಾಗಿ ಆರೋಪ ಮಾಡ್ತಿದೆ.

ಚಿಲುಮೆ ಸಂಸ್ಥೆಗೆ 2013ರಿಂದ ಕೊಟ್ಟಿದ್ದಾರೆ. ಆಗ ಯಾಕೆ ತನಿಖೆ ಮಾಡಲಿಲ್ಲ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಏನ್ ಮಾಡ್ತಿದ್ದರು? ಎಂದು ಪ್ರಶ್ನಿಸಿದರು.

Elections 2023: Siddaramaiah has no safe place in Karnataka: R Ashoka

ರಾಜ್ಯದ ನಾಗರೀಕರಿಗೆ ಗೌರವ ಕೊಡ್ತೀವಿ, ಬೆಲೆ ಕೊಡ್ತೀವಿ. ಅವರು ಕೇಳಿದ್ರೆ ಉನ್ನತ ಮಟ್ಟದ ತನಿಖೆ ಕೊಡ್ತೀವಿ. ಆದರೆ ಇಲ್ಲಿ ಕೇಳ್ತಿರೋದು ಕಾಂಗ್ರೆಸ್‌ನವರು, ಕಾಂಗ್ರೆಸ್‌ನವರು ಚುನಾವಣೆ ಬರ್ತಿರೋದ್ರಿಂದ ದಿನ ಗಾಳಿಯಲ್ಲಿ ಗುಂಡು ಹೊಡೀತಿದ್ದಾರೆ. ನಾನು ಅಶ್ವಥ್ ನಾರಾಯಣ್ ಜೊತೆ ಮಾತನಾಡಿದ್ದೇನೆ. ಆ ರೀತಿ ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ‌ ಹತಾಶಗೊಂಡ ಕಾಂಗ್ರೆಸ್‌ನ ಮನಸ್ಥಿತಿ ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.

ಭಯೋತ್ಪಾದನೆ ಮಟ್ಟ ಹಾಕುತ್ತೇವೆ

ಭಯೋತ್ಪಾದನೆ ಚಟುವಟಿಕೆ ಮಾಡುವುದನ್ನು ನಮ್ಮ ಸರ್ಕಾರ ಮುಲಾಜಿಲ್ಲದೆ ಮಟ್ಟ ಹಾಕುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಈ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಪೊಲೀಸರು ಸಮರ್ಥವಾಗಿ ತನಿಖೆ ಮಾಡುತ್ತಿದ್ದಾರೆ. ಭಯೋತ್ಪಾದಕರ ಕೃತ್ಯ ಎಂದು ಸಾಬೀತಾಗಿದೆ. ಇದರ ಜಾಲ ದೇಶದ ಯಾವೆಲ್ಲ ಭಾಗದಲ್ಲಿ ಇದ್ದರೂ ಅವರ ಮೇಲೆ ಕ್ರಮ ಆಗಲಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಅಂತ ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ತನಿಖೆ ನಡೆಯುತ್ತಿರೋದ್ರಿಂದ ಈಗ ಹೇಳಲಾಗಲ್ಲ. ಒಟ್ಟಿನಲ್ಲಿ ಈ ಪಿಡುಗನ್ನು ಮಟ್ಟಹಾಕಲು‌ ಸರ್ಕಾರ ಬದ್ಧವಾಗಿದೆ ಎಂದರು.

ಆರ್. ಅಶೋಕ
Know all about
ಆರ್. ಅಶೋಕ
English summary
Elections 2023: Opposition leder Siddaramaiah has no safe place in Karnataka, he is searching for constituencies said Revenue minister R Ashoka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X