ಪ್ರಜಾ ಪರಿವರ್ತನ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು ಏಪ್ರಿಲ್ 19: ದೀನ ದಲಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಶ್ರೇಯೋಭಿವೃದ್ಧಿಗಾಗಿ ರಾಜ್ಯದಲ್ಲಿ ಉದಯವಾಗಿರ ಹೊಸ ಪಕ್ಷ ಪ್ರಜಾಪರಿವರ್ತನ ಪಾರ್ಟಿ ತನ್ನ ಅಭ್ಯರ್ಥಿಗಳ ಪಟ್ಟಿ ಹಾಗೂ ಪ್ರಣಾಳಿಕೆಯನ್ನು ಪ್ರಕಟಿಸಲಾಗಿದೆ.
ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಮದ್ಯಪಾನ ನಿಷೇಧ ಮಾಡುವುದು, ರಾಜಕೀಯದಲ್ಲಿ ಸ್ತ್ರೀಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಕಡ್ಡಾಯ ಮಾಡುವುದು, ಇತರೆ ಹಿಂದುಳಿದ ವರ್ಗಗಳಿಗೆ ಸೂಕ್ತ ಮೀಸಲಾತಿ ಕಲ್ಪಿಸುವುದು, ಭೂ ರಹಿತ ರೈತ ಕಾರ್ಮಿಕರಿಗೆ ಭೂಮಿ ನೀಡುವುದು, ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿಸುವುದು, ರೈತರ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು ಸೇರಿದಂತೆ ವಿವಿಧ ಸಮಾಜ ಸುಧಾರಣೆಯ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ಪಕ್ಷ ಧ್ಯೇಯೋದ್ದೇಶವಾಗಿದೆ ಎಂದು ಪಕ್ಷದ ಅಧ್ಯಕ್ಷ ಬಿ ಗೋಪಾಲ್ ವಿವರಿಸಿದರು.
ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಸೇರಿದಂತೆ ಅಸಂಘಟಿತ ವಲಯದ ನೌಕರರಿಗೆ ಸೇವಾ ಭದ್ರತೆ, ಹಿರಿಯ ನಾಗರೀಕರಿಗೆ 45 ವರ್ಷ ಮೀರಿದ ನಿರುದ್ಯೋಗಿಗಳಿಗೆ ಗೌರವಯುತ ಬದುಕಿಗಾಗಿ ಪಿಂಚಣಿ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಭರವಸೆಗಳನ್ನೊಳಗೊಂಡ ಪ್ರಣಾಳಿಕೆಯನ್ನು ಪ್ರಜಾ ಪರಿವರ್ತನ ಪಾರ್ಟಿಯ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು.

17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ
ಇದೇ ಸಂಧರ್ಭದಲ್ಲಿ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಪ್ರಜಾ ಪರಿವರ್ತನ ಪಕ್ಷದ ರಾಜ್ಯಾಧ್ಯಕ್ಷ ಬಿ ಗೋಪಾಲ್ ಮತನಾಡಿ, ಸಾಮಾಜಿಕ ಮತ್ತು ಆರ್ಥಿಕ ದೂರದೃಷ್ಟಿ ಹೊಂದಿರುವ ಪಕ್ಷ ನಮ್ಮದಾಗಿದೆ. ಹಿಂದುಳಿದ ಹಾಗೂ ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ದುಡಿಯುವಂತಹ ಆಲೋಚನೆಯನ್ನು ಹೊಂದಿದ್ದೇವೆ ಎಂದರು.

ಸ್ತ್ರೀಯರಿಗೆ ಶೇ. 33 ರಷ್ಟು ಮೀಸಲಾತಿ
ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಮದ್ಯಪಾನ ನಿಷೇಧ ಮಾಡುವುದು, ರಾಜಕೀಯದಲ್ಲಿ ಸ್ತ್ರೀಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಕಡ್ಡಾಯ ಮಾಡುವುದು, ಇತರೆ ಹಿಂದುಳಿದ ವರ್ಗಗಳಿಗೆ ಸೂಕ್ತ ಮೀಸಲಾತಿ ಕಲ್ಪಿಸುವುದು, ಭೂ ರಹಿತ ರೈತ ಕಾರ್ಮಿಕರಿಗೆ ಭೂಮಿ ನೀಡುವುದು, ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿಸುವುದು..ಇತ್ಯಾದಿ
ಆರೋಗ್ಯ ಶಿಕ್ಷಣ ಕ್ಷೇತ್ರ ರೈತರ ಕಲ್ಯಾಣ ಯೋಜನೆಗಳೂ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ್ದೇವೆ. ಅಲ್ಲದೆ, ಭ್ರಷ್ಟಾಚಾರ ರಹಿತ ಸಮಾಜವನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಪಕ್ಷದ ಚಿನ್ಹೆ ಪೈನಾಪಲ್
ಕಾರ್ಯಕ್ರಮದಲ್ಲಿ ಪ್ರಜಾ ಪರಿವರ್ತನ ಪಕ್ಷದ ವಕ್ತಾರರಾದ ಚಂದ್ರಕಾಂತ್ ಅವರು ಸೇರಿದಂತೆ ಹಲವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪಕ್ಷದ ಚಿನ್ಹೆ ಯಾದ ಪೈನಾಪಲ್ ನ್ನು ಬಿಡುಗಡೆಗೊಳಿಸಿದರು.

ಹಲವು ಭರವಸೆಗಳನ್ನೊಳಗೊಂಡ ಪ್ರಣಾಳಿಕೆ
ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಸೇರಿದಂತೆ ಅಸಂಘಟಿತ ವಲಯದ ನೌಕರರಿಗೆ ಸೇವಾ ಭದ್ರತೆ, ಹಿರಿಯ ನಾಗರೀಕರಿಗೆ 45 ವರ್ಷ ಮೀರಿದ ನಿರುದ್ಯೋಗಿಗಳಿಗೆ ಗೌರವಯುತ ಬದುಕಿಗಾಗಿ ಪಿಂಚಣಿ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಭರವಸೆಗಳನ್ನೊಳಗೊಂಡ ಪ್ರಣಾಳಿಕೆ












Click it and Unblock the Notifications