ಸಿ ಫೋರ್ ಸಮೀಕ್ಷೆ: ಪ್ರತ್ಯೇಕ ನಾಡಧ್ವಜದ ಪರ ನಿಂತ ಜನತೆ

ಬೆಂಗಳೂರು, ಮಾರ್ಚ್ 26: ವಿಧಾನಸಭಾ ಚುನಾವಣೆ 2018ಗಾಗಿ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ರಣತಂತ್ರ ಹೆಣೆಯುತ್ತಾ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗುತ್ತಿವೆ. ಈ ಸಂದರ್ಭದಲ್ಲಿ ಸಿ- ಫೋರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಮತ್ತೊಮ್ಮೆ ಸಂಚಲನ ಮೂಡಿಸುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಒಂದು ಸಾಲಿನ ಫಲಿತಾಂಶದ ಜೊತೆಗೆ ಹತ್ತು ಹಲವು ಪ್ರಮುಖ ವಿಷಯಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಕರ್ನಾಟಕ ರಾಜ್ಯ ಪ್ರತ್ಯೇಕ ನಾಡಧ್ವಜ ಹೊಂದಬೇಕು ಎಂಬುದು ಪ್ರಮುಖವಾಗಿದೆ.

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.

326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

ಸದ್ಯ ಪ್ರತ್ಯೇಕ ನಾಡಧ್ವಜ ಹೊಂದುವ ಬೇಡಿಕೆಯ ಅರ್ಜಿ ಕೇಂದ್ರ ಸರ್ಕಾರದ ಮುಂದಿದೆ. ಕೇಂದ್ರ ಸರ್ಕಾರದಿಂದ ಹೊಸ ನಾಡ ಧ್ವಜಕ್ಕೆ ಮಾನ್ಯತೆ ಸಿಗಬೇಕಿದೆ. ಸಿ-ಫೋರ್ ಸಮೀಕ್ಷೆ ಫಲಿತಾಂಶ ಮುಂದಿದೆ..

ಕನ್ನಡ ನಾಡಧ್ವಜದ ಪರ ನಿಂತ ಜನತೆ

ಕನ್ನಡ ನಾಡಧ್ವಜದ ಪರ ನಿಂತ ಜನತೆ

ವಿಧಾನಸಭಾ ಚುನಾವಣೆ 2018ಗಾಗಿ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ರಣತಂತ್ರ ಹೆಣೆಯುತ್ತಾ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗುತ್ತಿವೆ. ಈ ಸಂದರ್ಭದಲ್ಲಿ ಸಿ- ಫೋರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಮತ್ತೊಮ್ಮೆ ಸಂಚಲನ ಮೂಡಿಸುತ್ತಿದೆ. ನಾಡಿನ ವಿವಿಧ ಸಮಸ್ಯೆಗಳ ಬಗ್ಗೆ ಸಿಫೋರ್ ಸಮೀಕ್ಷೆ ನಡೆಸಿದ್ದು, ಪ್ರಮುಖವಾಗಿ ನಾಡಧ್ವಜ ಬೇಕೆ? ಎಂಬ ಪ್ರಶ್ನೆಯನ್ನು ಕೇಳಿದೆ.

ಸದ್ಯ ಪ್ರತ್ಯೇಕ ನಾಡಧ್ವಜ ಹೊಂದುವ ಬೇಡಿಕೆಯ ಅರ್ಜಿ ಕೇಂದ್ರ ಸರ್ಕಾರದ ಮುಂದಿದೆ. ಕೇಂದ್ರ ಸರ್ಕಾರದಿಂದ ಹೊಸ ನಾಡ ಧ್ವಜಕ್ಕೆ ಮಾನ್ಯತೆ ಸಿಗಬೇಕಿದೆ.

ಯಾವ ರಾಜ್ಯಕ್ಕೂ ಪ್ರತ್ಯೇಕ ನಾಡಧ್ವಜವಿಲ್ಲ

ಯಾವ ರಾಜ್ಯಕ್ಕೂ ಪ್ರತ್ಯೇಕ ನಾಡಧ್ವಜವಿಲ್ಲ

ಜಮ್ಮು ಮತ್ತು ಕಾಶ್ಮೀರ ಬಿಟ್ಟರೆ ಬೇರೆ ಯಾವ ರಾಜ್ಯಕ್ಕೂ ಪ್ರತ್ಯೇಕ ನಾಡಧ್ವಜ ಹೊಂದುವ ಮಾನ್ಯತೆ ಸಿಕ್ಕಿಲ್ಲ. ಪ್ರತ್ಯೇಕ ನಾಡಧ್ವಜ ಹೊಂದುವುದು ಕನ್ನಡ ಅಸ್ಮಿತೆಯ ವಿಷಯವಾಗಿದೆ. ಆದರೆ, ನಾಲ್ಕು ವರ್ಷಗಳಿಂದ ಸುಮ್ಮನ್ನಿದ್ದು, ಚುನಾವಣೆ ಸಮಯದಲ್ಲಿ ಕನ್ನಡ ಪರ ಸರ್ಕಾರ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ಅವರು ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.

ಸಂವಿಧಾನದಲ್ಲಿ ನಾಡ ಧ್ವಜ ಹೊಂದಲು ಅವಕಾಶ

ಸಂವಿಧಾನದಲ್ಲಿ ನಾಡ ಧ್ವಜ ಹೊಂದಲು ಅವಕಾಶ

ಭಾರತೀಯ ಸಂವಿಧಾನದಲ್ಲಿ ಪ್ರತ್ಯೇಕ ನಾಡ ಧ್ವಜ ಹೊಂದಲು ಅವಕಾಶ ನೀಡಲಾಗಿದೆ. ಕಾನೂನಿನ ಪ್ರಕಾರ, ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಿದ್ದು, ಒಂದು ವೇಳೆ, ಕೇಂದ್ರ ಸರ್ಕಾರವು ಬೇಡಿಕೆಗೆ ಒಪ್ಪದಿದ್ದರೆ, ಅದನ್ನೇ ಜನರ ಮುಂದಿಟ್ಟು, ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತಿರುವ ಬಿಜೆಪಿ ಎಂದು ಅಸ್ತ್ರವಾಗಿ ಕಾಂಗ್ರೆಸ್ ಬಳಸಬಹುದಾಗಿದೆ. ಈ ಬಗ್ಗೆ ನೀವೆಂನತೀರಾ? ಇಮೇಲ್[[email protected]] ಮಾಡಿ, ಸಬ್ಜೆಕ್ಟ್ : ಕನ್ನಡ ಬಾವುಟ ಚರ್ಚೆ ಎಂದು ಬರೆಯಿರಿ.

ಶೇ 56ರಷ್ಟು ಮಂದಿ ಮತ ಹಾಕಿದ್ದಾರೆ

ಶೇ 56ರಷ್ಟು ಮಂದಿ ಮತ ಹಾಕಿದ್ದಾರೆ

ಕನ್ನಡ ನಾಡಧ್ವಜ ಬೇಕು ಎಂದು ಶೇ 56ರಷ್ಟು ಮಂದಿ ಮತ ಹಾಕಿದ್ದಾರೆ. ಶೇ 30ರಷ್ಟು ಮತಗಳು ನಾಡಧ್ವಜ ಬೇಡ ಎಂದು ಬಂದಿವೆ. ಶೇ 14ರಷ್ಟು ಮಂದಿ ಈ ಬಗ್ಗೆ ಸದ್ಯಕ್ಕೆ ಏನು ಹೇಳಲಾಗದು ಎಂದಿದ್ದಾರೆ. ಶೇ 56 ಮತಗಳು ಬಂದಿರುವುದರಿಂದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಇಟ್ಟ ಈ ನಡೆಗೆ ಬೆಂಬಲ ವ್ಯಕ್ತವಾಗಿದೆ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+