ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಪರ ನಟ ಯಶ್ ಪ್ರಚಾರ
Recommended Video

ಮೈಸೂರು, ಮೇ 01:'ಒಂದು ವಾರ ಕಾಲ ವಿವಿಧ ಅಭ್ಯರ್ಥಿಗಳ ಪರವಾಗಿ, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಟ ಯಶ್ ಚುನಾವಣಾ ಪ್ರಚಾರಕ್ಕೆ ಸ್ಟಾರ್ ರಂಗು ತುಂಬಲಿದ್ದಾರೆ' ಎಂಬ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಆದರೆ, ಯಶ್ ಅವರು ಯಾವ್ಯಾವ ಪಕ್ಷದ ಯಾವ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡ್ತಾರೆ, ಮತಯಾಚಿಸಲಿದ್ದಾರೆ ಎಂಬ ಕುತೂಹಲ ಇದ್ದೇ ಇತ್ತು. ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ.
''ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ''. ಹೀಗಾಗಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗದೇ, ತಮಗೆ ಆತ್ಮೀಯವಾಗಿರುವ ರಾಜಕೀಯ ನಾಯಕರು ಹಾಗೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಯಶ್ ಆಪ್ತರು ಹೇಳಿದ್ದಾರೆ.

ಮೈಸೂರಿನ ಕೃಷ್ಣರಾಜ (ಕೆ.ಆರ್ ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್ .ಎ ರಾಮದಾಸ್ ಪರ ನಟ ಯಶ್ ಪ್ರಚಾರ ನಡೆಸಲಿದ್ದಾರೆ. ಮೇ 02ರಂದು ಕ್ಷೇತ್ರದಲ್ಲಿ ನದೆಯಲಿರುವ ಬೃಹತ್ ಸಮಾವೇಶದಲ್ಲಿ ಯಶ್ ಪಾಲ್ಗೊಂಡು, ರಾಮದಾಸ್ ಪರ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮೈಸೂರಿನಲ್ಲಿ ರಾಜಕೀಯ ಪ್ರಚಾರ ಶುರು ಮಾಡಿದ ರಾಜಾಹುಲಿ
ಸ್ನೇಹಪೂರ್ವಕವಾಗಿ ರಾಮದಾಸ್ ಪರ ಪ್ರಚಾರ ಮಾಡುತ್ತಿದ್ದೇನೆ. ಇದೇ ರೀತಿ, ಇತರೆ ಪಕ್ಷದ ಆತ್ಮೀಯರ ಪರ ಕೂಡಾ ಪ್ರಚಾರ ಕೈಗೊಳ್ಳಬಹುದು. ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications