Breaking: ಕರ್ನಾಟಕದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ
ಬೆಂಗಳೂರು, ನವೆಂಬರ್ 29: ಕರ್ನಾಟಕದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆದರೆ ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
2016ನೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾದ 51 ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2021ಗೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರ ವಿಂಗಡನೆ ಮಾಡಿ, ವಾರ್ಡ್‌ವಾರು ಮೀಸಲಾತಿಯನ್ನು ನಿಗದಿಪಡಿಸಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.
5 ನಗರ ಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾಡಲು 16 ಡಿಸೆಂಬರ್ ಕೊನೆಯ ದಿನವಾಗಿದೆ. ನಾಪಪತ್ರ ವಾಪಸ್ ಪಡೆಯಲು 18 ಡಿಸೆಂಬರ್ ಕೊನೆಯ ದಿನವಾಗಿದೆ.

ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಪಾಲನೆ ಮಾಡಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಚುನಾವಣಾ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು
ಚುನಾವಣಾ ಅಧಿಸೂಚನೆ- ಡಿಸೆಂಬರ್ 8
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- 15 ಡಿಸೆಂಬರ್
ನಾಮಪತ್ರ ಪರಿಶೀಲಿಸುವ ದಿನ- ಡಿಸೆಂಬರ್ 16
ನಾಮಪತ್ರ ವಾಪಸ್ ಪಡೆಯುವ ದಿನ- ಡಿಸೆಂಬರ್ 18
ಮತದಾನ ನಡೆಯುವ ದಿನ- ಡಿಸೆಂಬರ್- 27
ಮರುಮತದಾನ ಇದ್ದಲ್ಲಿ ನಡೆಸಬೇಕಾದ ದಿನ- ಡಿಸೆಂಬರ್ 29
ಮತ ಎಣಿಕೆ ದಿನ- ಡಿಸೆಂಬರ್ 30
ಚುನಾವಣೆ ನಡೆಸಲಾಗುವ ಸ್ಥಳೀಯ ಸಂಸ್ಥೆಗಳು
* ಚಿಕ್ಕಮಗಳೂರು ನಗರಸಭೆ
* ತುಮಕೂರು ಜಿಲ್ಲೆಯ ಶಿರಾ ನಗರಸಭೆ
* ಗದಗ ಜಿಲ್ಲೆಯ ಗದಗ- ಬೆಟಗೇರಿ ನಗರಸಭೆ
* ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ
* ಬೆಂಗಳೂರಿನ ಹೆಬ್ಬಗೋಡಿ ನಗರಸಭೆ ಸೇರಿದಂತೆ 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.












Click it and Unblock the Notifications