ಈದ್ ಮಿಲಾದ್ : ಡಿಸೆಂಬರ್ 13ರಂದು ಸರಕಾರಿ ರಜಾ

Posted By:
Subscribe to Oneindia Kannada

ಬೆಂಗಳೂರು ಡಿಸೆಂಬರ್ 10 : ಮುಸ್ಲಿಂರ ಪವಿತ್ರ ಹಬ್ಬ ಈದ್-ಮಿಲಾದ್ (ಪ್ರಾಫೆಟ್ ಮೊಹಮ್ಮದನ ಜನುಮದಿನ) ಪ್ರಯುಕ್ತ ಸಾರ್ವತ್ರಿಕ ರಜಾವನ್ನು ಸೋಮವಾರದ ಬದಲು ಮಂಗಳವಾರ ಡಿಸೆಂಬರ್ 13ಕ್ಕೆ ನೀಡಲಾಗಿದೆ. ಈ ಮೊದಲು ಸೋಮವಾರ ರಜಾ ಎಂದು ಘೋಷಿಸಲಾಗಿತ್ತು.

ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ 2016ನೇ ಸಾಲಿನ ಈದ್-ಮಿಲಾದ್ ಹಬ್ಬದ ಆಚರಣೆಗೆ ಡಿಸೆಂಬರ್ 12ರಂದು ಘೋಷಿಸಿದ ರಜಾವನ್ನು ರದ್ದುಗೊಳಿಸಿ, ಡಿಸೆಂಬರ್ 13ರ ಮಂಗಳವಾರದಂದು ಸಾರ್ವತ್ರಿಕ ರಜಾ ಘೋಷಿಸಿ ರಾಜ್ಯ ಸಕಕಾರ ಶುಕ್ರವಾರ ಆದೇಶ ಹೊರಡಿಸಿದೆ.

Eid Milad : General holiday on Tuesday in Karnataka

ಕೋರ್ಟ್ ಸೋಮವಾರ ರಜಾ : ಸರಕಾರ ಮೊದಲು ಸೋಮವಾರ ರಜಾ ಘೋಶಿಸಿದ್ದರಿಂದ ಕರ್ನಾಟಕ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಿಗೆ ಸೋಮವಾರವೇ ರಜಾ ಪ್ರಕಟಿಸಲಾಗಿತ್ತು. ಆದರೆ, ಕಕ್ಷಿದಾರರಿಗೆ, ನ್ಯಾಯವಾದಿಗಳಿಗೆ, ನ್ಯಾಯಮೂರ್ತಿಗಳಿಗೆ ಅನನುಕೂಲವಾಗುತ್ತದೆಂದು ಮಂಗಳವಾರದ ಬದಲು ಸೋಮವಾರವೇ ನ್ಯಾಯಾಲಯಗಳಿಗೆ ರಜಾ ನೀಡಲಾಗಿದೆ.

ಮಂಗಳವಾರ ಕೋರ್ಟ್ ಕಲಾಪಗಳು ಎಂದಿನಂತೆ ನಡೆಯಲಿದ್ದು, ಈದ್ ಮಿಲಾದ್ ಆಚರಿಸಲೇಬೇಕು ಎಂದು ಇಚ್ಛಿಸುವವರು ವಿಶೇಷ ಕ್ಯಾಶುವಲ್ ರಜಾಗೆ ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಅಶೋಕ್ ಜಿ. ನಿಜಗಣ್ಣವರ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಹೀಗಾಗಿ ಮಂಗಳವಾರವೂ ಕೋರ್ಟ್ ಕಲಾಗಳು ನಡೆಯುವುದು ಅನುಮಾನವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has declared Eid Milad holiday on Tuesday, instead of Monday as declared earlier. The holiday was changed as per suggestion by Central Moon Committee. But, courts in Karnataka will remain closed on Monday itself.
Please Wait while comments are loading...