ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಯೂಟದಲ್ಲಿ ಮೊಟ್ಟೆ: ಹೆಚ್ಚಾದ ಹಾಜರಾತಿ, 91% ವಿದ್ಯಾರ್ಥಿಗಳಿಂದ ಮೊಟ್ಟೆ ಸೇವನೆ

|
Google Oneindia Kannada News

ಬೆಂಗಳೂರು, ಡಿ. 23: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವುದನ್ನು ಆರಂಭಿಸಿ ಮೂರು ತಿಂಗಳುಗಳಾಗಿವೆ. ಈಗ ರಾಜ್ಯದ ಶಾಲೆಗಳಲ್ಲಿ ಶೇಕಡಾ 91 ರಷ್ಟು ವಿದ್ಯಾರ್ಥಿಗಳು ಮೊಟ್ಟೆಗಳನ್ನು ಸೇವಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಶಾಲೆಗಳಲ್ಲಿ ಮೊಟ್ಟೆಗಳನ್ನು ನೀಡುವ ದಿನಗಳಲ್ಲಿ ಸರಾಸರಿ 6 ರಿಂದ 7% ರಷ್ಟು ಹಾಜರಾತಿ ಹೆಚ್ಚಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್, " 91% ವಿದ್ಯಾರ್ಥಿಗಳು ಮೊಟ್ಟೆಗಳನ್ನು ಸೇವಿಸುತ್ತಾರೆ. ಉಳಿದವರಲ್ಲಿ 7% ಮಕ್ಕಳು ಬಾಳೆಹಣ್ಣು ಮತ್ತು 2% ಕಡಲೆಕಾಯಿ ಮತ್ತು ಬೆಲ್ಲದಿಂದ ಮಾಡಲ್ಪಡುವ ಕಡಲೆಮಿಠಾಯಿ ತಿನ್ನುತ್ತಾರೆ. ಮೊಟ್ಟೆಗಳನ್ನು ತಿನ್ನುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಹೀಗಾಗಿ ಮೊಟ್ಟೆ ನೀಡುವ ದಿನಗಳಲ್ಲಿ ಹಾಜರಾತಿಯು 6 ರಿಂದ 7% ರಷ್ಟು ಹೆಚ್ಚಾಗುತ್ತದೆ" ಎಂದು ತಿಳಿಸಿರುವುದಾಗಿ 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

Eggs In Midday Meals: Increased Attendance In Government Schools

ಸೆಪ್ಟೆಂಬರ್‌ನಿಂದ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತ್ತಿರುವ ಸರ್ಕಾರ, ಕಳೆದ ವರ್ಷ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿವರೆಗೆ ಒಟ್ಟು 46 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

2021 ರಲ್ಲಿ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ 15 ಲಕ್ಷ ವಿದ್ಯಾರ್ಥಿಗಳಲ್ಲಿ ಶೇಕಡಾ 80 ರಷ್ಟು ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಬೇಕು ಎಂದಿದ್ದರು. ಈಗ ಶಾಲೆಗಳಲ್ಲಿ ಮೊಟ್ಟೆಗಳನ್ನು ತಿನ್ನುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.

ದಕ್ಷಿಣ ಕನ್ನಡದ ಹಾರಾಡಿಯ ಸರ್ಕಾರಿ ಮಾದರಿ ಶಾಲೆಯ ಸಹಾಯಕ ಶಿಕ್ಷಕ ಕುಕಾ ಕೆ ಅವರ ಪ್ರಕಾರ, ಆರಂಭಿಕ ದಿನಗಳಲ್ಲಿ 150 ಮೊಟ್ಟೆಗಳನ್ನು ತಿನ್ನುವ ಮಕ್ಕಳ ಸಂಖ್ಯೆ ಈ ತಿಂಗಳು 300 ಕ್ಕೆ ತಲುಪಿದೆ ಎಂದಿದ್ದಾರೆ.

Eggs In Midday Meals: Increased Attendance In Government Schools

ರಾಯಚೂರು ತಾಲೂಕಿನ ಸಿಂಗನೋಡಿ ಸರಕಾರಿ ಶಾಲೆಯ ಶಿಕ್ಷಕ ಬಸಪ್ಪ ಗಡ್ಡಿ ಮಾತನಾಡಿ, ತಮ್ಮ ಶಾಲೆಯಲ್ಲಿ 165 ವಿದ್ಯಾರ್ಥಿಗಳ ಪೈಕಿ 130 ಮಂದಿ ಮೊಟ್ಟೆ ಸೇವಿಸುತ್ತಿದ್ದಾರೆ. ಆದರೆ ಮೊಟ್ಟೆ ನೀಡುವುದು ಆರಂಭವಾದಾಗ ಕೇವಲ 70 ಮಂದಿ ಮೊಟ್ಟೆ ಸೇವಿಸುತ್ತಿದ್ದರು.

ಗದಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಲತೇಶ್‌ ವಿ ಮಾತನಾಡಿ, 323 ವಿದ್ಯಾರ್ಥಿಗಳ ಪೈಕಿ ಶೇ.95ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತಿನ್ನುತ್ತಿದ್ದು, ಈ ಹಿಂದೆ ಶೇ.80ರಷ್ಟಿತ್ತು ಎಂಬ ಮಾಹಿತಿ ನೀಡಿದ್ದಾರೆ.

ಹೊನ್ನಾವರದ ಸರಕಾರಿ ಶಾಲೆಯ ನಾರಾಯಣ್‌ ಎನ್‌, ಮನೆಯಲ್ಲಿ ಮೊಟ್ಟೆ ಸೇವಿಸದ 40ಕ್ಕೂ ಹೆಚ್ಚು ಮಕ್ಕಳು ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ತಿನ್ನಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು ಉತ್ತರದ ಸರ್ಕಾರಿ ಶಾಲೆಯ ಕರಕುಶಲ ಶಿಕ್ಷಕಿ ಶಾಂತಾ ಎಆರ್, ತಮ್ಮ ಶಾಲೆಯಲ್ಲಿ 8 ನೇ ತರಗತಿಯಲ್ಲಿರುವ ಎಲ್ಲಾ 19 ವಿದ್ಯಾರ್ಥಿಗಳು ಮೊಟ್ಟೆಗಳನ್ನು ತಿನ್ನುತ್ತಾರೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಮನೆಯಲ್ಲಿ ಮೊಟ್ಟೆ ತಿನ್ನುವುದಿಲ್ಲ ಶಾಲೆಯಲ್ಲಿ ತಿನ್ನುತ್ತಾರೆ. ಮಕ್ಕಳು ಮನೆಯಿಂದ ಹೊರಗೆ ಮೊಟ್ಟೆ ತಿನ್ನುವದರಿಂದ ಏನೂ ಸಮಸ್ಯೆಯಿಲ್ಲ ಎಂದು ಅವರ ತಾಯಿಯರು ಹೇಳುತ್ತಾರೆ ಎಂದಿದ್ದಾರೆ.

ಹೆಬ್ಬಾಳದ ಸರ್ಕಾರಿ ಶಾಲೆಯ 8ನೇ ತರಗತಿಯ ಶಿಕ್ಷಕಿ ಸರೋಜಿನಿ ಎನ್ ಕೂಡ, ಮನೆಯಲ್ಲಿ ಮೊಟ್ಟೆ ಸೇವಿಸದ ವಿದ್ಯಾರ್ಥಿಗಳು ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಮೊಟ್ಟೆಗೆ ಆದ್ಯತೆ ನೀಡುವುದನ್ನು ನಾನೂ ನೋಡಿದ್ದೇನೆ ಎಂದು ಹೇಳಿದ್ದಾರೆ.

(ಮಾಹಿತಿ ಕೃಪೆ- ದಿ ಟೈಮ್ಸ್ ಆಫ್ ಇಂಡಿಯಾ)

English summary
Eggs In Midday Meals: Eggs are being consumed by 91% of the students in karnataka. attendance goes up by 6-7%. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X